Advertisement

ಇನ್ಫೋಸಿಸ್‌ನಿಂದ ಕಿಟ್‌ ವಿತರಣೆ

01:53 PM Apr 21, 2020 | Suhan S |

ಜಮಖಂಡಿ: ನಗರದಲ್ಲಿ ವಾಸಿಸುವ ಬಡಕುಟುಂಬಗಳಿಗೆ ಆಹಾರ ಪದಾರ್ಥಗಳ ಕಿಟ್‌ಗಳನ್ನು ಹಂಚಲಾಗುತ್ತಿದೆ. ಈಗಾಗಲೇ 250ಕ್ಕೂ ಹೆಚ್ಚು ಕಿಟ್‌ ವಿತರಿಸಲಾಗಿದೆ ಎಂದು ಮಾತೋಶ್ರೀ ಶಾರದಾ ಸೇವಾ ಸಮಿತಿ ಕಾರ್ಯದರ್ಶಿ ನಾರಾಯಣ ಕುಲಕರ್ಣಿ ಹೇಳಿದರು.

Advertisement

ನಗರದ ಕುಂಚನೂರ ರಸ್ತೆಯಲ್ಲಿ ಸೋಮವಾರ ಬೆಂಗಳೂರಿನ ಸುಧಾಮೂರ್ತಿ ಅವರ ಇನ್ಫೋಸಿಸ್‌ ಫೌಂಡೇಶನ್‌ ವತಿಯಿಂದ ಲಾಕ್‌ ಡೌನ್‌ನಿಂದ ಸಂಕಷ್ಟಕ್ಕೊಳಗಾದ ಬಡಕುಟುಂಬಗಳಿಗೆ ಕಿಟ್‌ ತರಿಸಿ ಅವರು ಮಾತನಾಡಿದರು. ಬಡತನ ರೇಖೆಯಲ್ಲಿರುವ ನಗರದ ಎಲ್ಲ ಕುಟುಂಬಗಳಿಗೆ ಕಿಟ್‌ ನೀಡಲಾಗುತ್ತಿದೆ. ಶುದ್ಧೀಕರಿಸಿದ ಆಹಾರ ಪದಾರ್ಥಗಳನ್ನು ಕಡುಬಡವರಿಗಾಗಿ ಮಾತ್ರ ವಿತರಣೆ ಮಾಡಲಾಗುತ್ತಿದ್ದು, ಲಾಕ್‌ಡೌನ್‌ ಮುಗಿಯುವರೆಗೆ ವಿತರಣೆ ನಡೆಯಲಿದೆ ಎಂದರು.

ಕಿಟ್‌ನಲ್ಲಿ ಏನಿದೆ ?: ನಗರದ ಆಟೋ ಚಾಲಕರಿಗೆ, ಬಟ್ಟೆ-ಬಾಂಡೆ ತೊಳೆಯುವ ಕಾರ್ಮಿಕರಿಗೆ, ಇಟ್ಟಂಗಿ ಭಟ್ಟಿ ಕಾರ್ಮಿಕರಿಗೆ, ಕೂಲಿ ಕಾರ್ಮಿಕರಿಗೆ, ಹಮಾಲರಿಗೆ, ನಿರ್ಗತಿಕರಿಗೆ, ಗೌಂಡಿ ಕಾರ್ಮಿಕರಿಗೆ, ಪಡಿತರ ಚೀಟಿ ಇಲ್ಲದ ಬಡಕುಟುಂಬಗಳಿಗೆ ಜೀವನ ನಿರ್ವಹಣೆ ಅಗತ್ಯವಾದ ಜೋಳ, ಗೋ , ತೊಗರಿಬೆಳೆ, ಸಕ್ಕರೆ, ಬೆಲ್ಲ, ಟೂತ್‌ ಫೆಸ್ಟ್‌, ಖಾರಪುಡಿ, ಟೂತ್‌ಬ್ರೆಸ್‌, ಅವಲಕ್ಕಿ, ಉಪ್ಪು, ಈರುಳ್ಳಿ, ಬಟಾಟೆ ವಸ್ತುಗಳ ಸಹಿತ ಅಗತ್ಯವಾದ ಮಾಸ್ಕ್ಗಳು ಕಿಟ್‌ದಲ್ಲಿವೆ. ಕಿಟ್‌ನಲ್ಲಿ ಕನಿಷ್ಟ 15 ದಿನಗಳಗೆ ಲಭ್ಯವಾಗುವಷ್ಟು ಆಹಾರ ಪದಾರ್ಥಗಳ ಸೌಲಭ್ಯಗಳನ್ನು ಕಿಟ್‌ ಹೊಂದಿದೆ. ನಗರದ ಕುಂಚನೂರ ರಸ್ತೆಯಲ್ಲಿರುವ ಎನ್‌.ಆರ್‌.ಕುಲಕರ್ಣಿ ಅವರ ಮನೆಯಲ್ಲಿ ಪ್ರತಿನಿತ್ಯ ಕಿಟ್‌ಗಳನ್ನು ಸಿದ್ಧಗೊಳಿಸಲಾಗುತ್ತಿದೆ. ಮಾತೋಶ್ರೀ ಶಾರದಾ ಸೇವಾ ಸಮಿತಿ ಕಾರ್ಯದರ್ಶಿ ನಾರಾಯಣ ಕುಲಕರ್ಣಿ, ವನಜಾಕ್ಷಿ, ಶ್ರೀನಿಧಿ, ಶ್ರೇಯಾ ಕಿಟ್‌ಗಳನ್ನು ಸಿದ್ಧಗೊಳಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next