Advertisement

ಕುಂಜೂರು : ಶ್ರೀ ದುರ್ಗಾ ಮಿತ್ರವೃಂದದ ವತಿಯಿಂದ ಆಹಾರ ಧಾನ್ಯ ಕಿಟ್ ವಿತರಣೆ

03:29 PM Apr 18, 2020 | sudhir |

ಕಾಪು : ಕುಂಜೂರು ಶ್ರೀ ದುರ್ಗಾ ಮಿತ್ರವೃಂದ (ರಿ) ಇವರ ವತಿಯಿಂದ ಆಹಾರ ಧಾನ್ಯದ ಕಿಟ್ ವಿತರಣೆ ಕಾರ್ಯಕ್ರಮವು ಕುಂಜೂರು ಶ್ರೀ ದುರ್ಗಾ ದೇವಸ್ಥಾನದಲ್ಲಿ ನಡೆಯಿತು.

Advertisement

ಕಿಟ್ ವಿತರಣೆಗೆ ಚಾಲನೆ ನೀಡಿದ ಕಾಪು ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ಮಾತನಾಡಿ, ಇಡೀ ವಿಶ್ವಕ್ಕೆ ಆವರಿಸಿರುವ ಮಹಾಕಂಟಕ ಕೊರೋನಾ ಎಂಬ ರೋಗದಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಇಂತಹ ಸಂಧರ್ಭದಲ್ಲಿ ತೊಂದರೆಗೊಳಗಾದವರನ್ನು ಗುರುತಿಸಿ, ಅವರಿಗೆ ಸಹಕಾರ ನೀಡುವುದು ಉತ್ತಮ ಕೆಲಸವಾಗಿದೆ. ಕೊರೋನಾ ತಡೆಗಟ್ಟಲು ಸಾಮಾಜಿಕ ಅಂತರ ಎಚ್ಚರಿಕೆ ಒಂದೇ ಪರಿಹಾರವಾಗಿದೆ ಎಂದರು.

ಕುಂಜೂರು ದುರ್ಗಾ ದೇಗುಲದ ಪವಿತ್ರಪಾಣಿ ಕೆ.ಎಲ್. ಕುಂಡಂತಾಯ, ಆಡಳಿತ ಮಂಡಳಿಯ ಅಧ್ಯಕ್ಷ ದೇವರಾಜ ರಾವ್, ಆಡಳಿತ ಮಂಡಳಿಯ ಸದಸ್ಯರು, ಅರ್ಚಕರಾದ ವೇ.ಮೂ. ಚಕ್ರಪಾಣಿ ಉಡುಪ, ವೇ.ಮೂ. ಹರಿಕೃಷ್ಣ ಉಡುಪ, ವೇ.ಮೂ. ರಘುಪತಿ ಉಡುಪ, ಶ್ರೀ ದುರ್ಗಾ ಮಿತ್ರವೃಂದದ ಅಧ್ಯಕ್ಷ ಚಂದ್ರಹಾಸ ಆಚಾರ್ಯ, ಪದಾಧಿಕಾರಿಗಳು ಮತ್ತು ಸದಸ್ಯರು, ದಾನಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next