Advertisement

ಕಾಲೇಜಿನತ್ತ “ಕಿಸ್‌’ತಂಡ

10:08 AM Sep 18, 2019 | Lakshmi GovindaRaju |

ನಿರ್ದೇಶಕ ಎ.ಪಿ.ಅರ್ಜುನ್‌ ಸಿಕ್ಕಾಪಟ್ಟೆ ಕಾತರದೊಂದಿಗೆ ಸೆ.27ಕ್ಕೆ ಎದುರು ನೋಡುತ್ತಿದ್ದಾರೆ. ಅದಕ್ಕೆ ಕಾರಣ, “ಕಿಸ್‌’. ಇದು ಅರ್ಜುನ್‌ ನಿರ್ದೇಶನದ ಸಿನಿಮಾ. ಈಗ ಇದು ಕೇವಲ ಅವರ ನಿರ್ದೇಶನದ ಸಿನಿಮಾವಾಗಿ ಉಳಿದಿಲ್ಲ. ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ. ಈಗ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಸೆ.27 ರಂದು ತೆರೆಕಾಣುತ್ತಿದೆ. ಚಿತ್ರವನ್ನು ಪ್ರೇಕ್ಷಕರಿಗೆ ತಲುಪಿಸಬೇಕೆಂಬ ನಿಟ್ಟಿನಲ್ಲಿ ಚಿತ್ರತಂಡ ಕಾಲಿಗೆ ಚಕ್ರಕಟ್ಟಿಕೊಂಡಂತೆ ಊರೆಲ್ಲಾ ಸುತ್ತುತ್ತಿದೆ.

Advertisement

ಮುಖ್ಯವಾಗಿ ಯುವ ಜನಾಂಗವನ್ನು ಟಾರ್ಗೇಟ್‌ ಮಾಡಿ, ಅವರಿಗೆ ಚಿತ್ರದ ಬಗ್ಗೆ ಮಾಹಿತಿ ನೀಡುತ್ತಿದೆ. ಇದಕ್ಕೆ ಚಿತ್ರತಂಡ ಆಯ್ಕೆ ಮಾಡಿರುವುದು ಕಾಲೇಜು. ಹೌದು, “ಕಿಸ್‌’ ಚಿತ್ರತಂಡ ಕಾಲೇಜುಗಳನ್ನು ಸುತ್ತಿ, ತಮ್ಮ ಚಿತ್ರದ ಬಗ್ಗೆ ಮಾತನಾಡುತ್ತಿದೆ. ನಾಯಕ, ನಾಯಕಿ, ನಿರ್ದೇಶಕ ಸೇರಿದಂತೆ ಇಡೀ ತಂಡ ಯೂತ್‌ ಅನ್ನು ಟಾರ್ಗೇಟ್‌ ಮಾಡಿ, ಕಾಲೇಜಿನತ್ತ ಮುಖ ಮಾಡಿದೆ. ಚಿತ್ರದ ಬಗ್ಗೆ ಮಾತನಾಡುವ ಅರ್ಜುನ್‌, “ಕಿಸ್‌’ ಒಂದು ಕಲರ್‌ಫ‌ುಲ್‌ ಜರ್ನಿ.

18ರ ಹುಡುಗಿ 21ರ ಹುಡುಗರು ಲವ್‌ ಬಗ್ಗೆ ಹೇಗಿರುತ್ತಾರೆ, ಅವರ ನಡುವಿನ ಸಣ್ಣ ಸಣ್ಣ ಕಿತ್ತಾಟ, ಮುನಿಸು, ಎಕ್ಸೈಟ್‌ಮೆಂಟ್‌, ಬ್ರೇಕಪ್‌, ಚಾಟಿಂಗ್‌ … ಇಂತಹ ಅಂಶಗಳೊಂದಿಗೆ ಈ ಸಿನಿಮಾ ಸಾಗುತ್ತದೆ’ ಎನ್ನುತ್ತಾರೆ. ಇನ್ನು, ಈಗಾಗಲೇ ಚಿತ್ರದ ಹಾಡು ಹಾಗೂ ಟ್ರೇಲರ್‌ ಹಿಟ್‌ ಆಗಿರುವುದರಿಂದ ಚಿತ್ರವನ್ನು ಕೂಡಾ ಜನ ಇಷ್ಟಪಡುತ್ತಾರೆಂಬ ವಿಶ್ವಾಸ ಚಿತ್ರತಂಡಕ್ಕಿದೆ. ಚಿತ್ರದಲ್ಲಿ ವಿರಾಟ್‌ ಹಾಗೂ ಶ್ರೀಲೀಲಾ ನಾಯಕ-ನಾಯಕಿ.

Advertisement

Udayavani is now on Telegram. Click here to join our channel and stay updated with the latest news.

Next