Advertisement

ಇದು ಮುಜುಗರದ ಸೋಂಕಿಲ್ಲದ ಪ್ಯೂರ್ ಕಿಸ್!

08:48 AM Sep 24, 2019 | Naveen |

ಎ.ಪಿ ಅರ್ಜುನ್ ನಿರ್ದೇಶನದ ಕಿಸ್ ಯೂಥ್‌ಫುಲ್ ಕಥಾನಕ ಹೊಂದಿರೋ ಚಿತ್ರ. ಕಿಸ್ ಅಂತಲೇ ಶೀರ್ಷಿಕೆ ಇರೋದರಿಂದ ಯಾರೂ ಕೂಡಾ ಮಡಿವಂತಿಕೆಯ ದೃಷ್ಟಿಯಲ್ಲಿ ಆಲೋಚಿಸೋ ಅಗತ್ಯವೇನಿಲ್ಲ. ಯಾಕೆಂದರೆ, ಇಡೀ ಸಿನಿಮಾದಲ್ಲಿ ಹುಡುಕಿದರೂ ವಲ್ಗರ್ ಅನ್ನಿಸುವಂಥಾ ಒಂದೇ ಒಂದು ಸನ್ನಿವೇಶವೂ ಸಿಗೋದಿಲ್ಲ. ನಿರ್ದೇಶಕ ಎ ಪಿ ಅರ್ಜುನ್ ಅವರೇ ಈ ಬಗ್ಗೆ ಪದೇ ಪದೆ ಸ್ಪಷ್ಟಿಕರಣ ಕೊಡುತ್ತಾ ಬಂದಿದ್ದಾರೆ.

Advertisement

ಇದು ಈ ಜನರೇಷನ್ನಿನ ಯುವಕರ ಮನೋಭೂಮಿಕೆಯ ಬೇಸಿನ ಮೇಲೆ ರೂಪುಗೊಂಡಿರೋ ಕಥೆ ಹೊಂದಿರೋ ಚಿತ್ರ. ಹಾಗಿದ್ದ ಮೇಲೆ ಅಲ್ಲಿ ತುಂಟತನ, ಕೀಟಲೆ, ಕ್ಯೂಟ್ ಆಗಿರೋ ಪೋಲಿ ಪ್ರಸಂಗಗಳೆಲ್ಲ ಖಂಡಿತಾ ಇರುತ್ತವೆ. ಫ್ಯಾಮಿಲಿ ಸೇರಿದಂತೆ ಎಲ್ಲ ವರ್ಗಗಳ ಪ್ರೇಕ್ಷಕರನ್ನ ದೃಷ್ಟಿಯಲ್ಲಿಟ್ಟುಕೊಂಡೇ ಅರ್ಜುನ್ ಈ ಕಥೆಯನ್ನು ಸಿದ್ಧಪಡಿಸಿದ್ದಾರೆ. ಇದರಲ್ಲಿನ ನಾಯಕ ನಾಯಕಿಯರು ನಮ್ಮೊಳಗಿನ ಭಾವಗಳೇ ಪಾತ್ರವಾದಂತೆ ಭಾಸವಾಗುತ್ತದೆಯಂತೆ. ಹೀಗೆ ತುಂಟ ತುಟಿಗಳ ಆಟೋಗ್ರಾಫ್ ಅನ್ನು ಎಲ್ಲರ ಮನಸಿಗೂ ತಾಕುವಂತೆ ಕಟ್ಟಿ ಕೊಡಲಾಗಿದೆಯಂತೆ.

ಇದೆಲ್ಲ ಏನೇ ಇದ್ದರೂ ಕಿಸ್ ಅನ್ನೋದು ಇಲ್ಲಿ ಚೌಕಟ್ಟು ದಾಟಿಲ್ಲ. ಅದೊಂದು ಯುವ ಮನಸುಗಳ ಪುಳಕವಾಗಿ ನೋಡುಗರ ಮನಸಿಗೂ ಮೆತ್ತಿಕೊಳ್ಳುವಂಥಾ ಕಲಾತ್ಮಕ ರೀತಿಯಲ್ಲಿ ನಿರ್ದೇಶಕರು ಕಥೆ ಮತ್ತು ದೃಶ್ಯ ಕಟ್ಟಿದ್ದಾರೆ. ಈ ಸಿನಿಮಾ ನೋಡಿದ ಪ್ರತೀ ಪ್ರೇಕ್ಷರರ ಮನಸಲ್ಲಿಯೂ ತುಂಟ ತುಟಿಗಳ ಆಟೋಗ್ರಾಫ್ ಆಹ್ಲಾದದ ತಿದಿಯೊತ್ತುತ್ತದೆ. ಅಂಥಾದ್ದೊಂದು ಸಮ್ಮೋಹಕ ಶೈಲಿಯಲ್ಲಿ ಈ ಚಿತ್ರವನ್ನು ರೂಪಿಸಿರೋ ಭರವಸೆ ಅರ್ಜುನ್ ಅವರಲ್ಲಿದೆ. ಪ್ರೇಮ ಕಥಾನಕಗಳೇನು ಹೊಸತಲ್ಲ. ಆದರೆ ಅದನ್ನು ಪರಿಭಾವಿಸೋ ಮನಸ್ಥಿತಿ ಭಿನ್ನವಾಗಿದ್ದರೆ ಅದೆಂದೂ ಹಳತಾಗೋದಿಲ್ಲ. ಅರ್ಜುನ್ ಹೇಳಿಕೇಳಿ ಪ್ರೇಮ ಕಥೆಗಳಿಗೇ ಫೇಮಸ್ ಆಗಿರೋ ನಿರ್ದೇಶಕ. ಹಾಗಿದ್ದ ಮೇಲೆ ಅವರು ಕಿಸ್ ಅನ್ನು ಎಲ್ಲರೂ ಬೆರಗಾಗುವಂತೆಯೇ ರೂಪಿಸಿರುತ್ತಾರೆಂಬ ನಂಬಿಕೆ ಪ್ರೇಕ್ಷಕರಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next