ಗಂಗಾವತಿ : ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಕಿಷ್ಕಿಂದಾ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯ ದೇವಸ್ಥಾನದ ಹುಂಡಿಯ ಎಣಿಕೆ ಕಾರ್ಯವನ್ನು ಬುಧವಾರ ತಹಸೀಲ್ದಾರ್ ಯು. ನಾಗರಾಜ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಎಣಿಕೆ ಮಾಡಲಾಯಿತು.
34 ದಿನಗಳಲ್ಲಿ 17,91,490 ರೂ. ಗಳು ಸಂಗ್ರಹವಾಗಿವೆ. ಇದರಲ್ಲಿ ಸಿಂಗಪೂರ್ ಸೇರಿದಂತೆ 4 ವಿವಿಧ ದೇಶಗಳ ನಾಣ್ಯಗಳಿವೆ. ಕಳೆದ ಜೂ.23 ಹುಂಡಿಯ ಎಣಿಕೆ ಮಾಡಲಾಗಿತ್ತು ಈ ಸಂದರ್ಭದಲ್ಲಿ 21,24,407 ರೂ ಗಳು ಸಂಗ್ರಹವಾಗಿದೆ.
ಬುಧವಾರ ಜರುಗಿದ ಹುಂಡಿ ಎಣಿಕೆ ಸಂದರ್ಭದಲ್ಲಿ ಶಿರಸ್ತೇದಾರರಾದ ಅನಂತ ಜೋಶಿ, ರವಿಕುಮಾರ್ ನಾಯಕವಾಡಿ, ಕೃಷ್ಣವೇಣಿ, ಮೆಹಬೂಬ್ ಅಲಿ, ಕಂದಾಯ ನಿರೀಕ್ಷಕರಾದ ಮಂಜುನಾಥ ಹಿರೇಮಠ, ಶರಣಪ್ಪ ತಹಶೀಲ್ ಕಾರ್ಯಾಲಯದ ಸಿಬ್ಬಂದಿಗಳಾದ ಜೆ.ಎನ್.ಶ್ರೀಕಂಠ, ಅನಿತಾ, ಅನ್ನಪೂರ್ಣ , ಗುರುರಾಜ್, ಮಂಜುನಾಥ, ಸೌಭಾಗ್ಯ , ಕವಿತಾ, ಗಾಯತ್ರಿ, ಎಸ್.ಕವಿತಾ, ಸೈಯ್ಯದ್, ಶಿವಕುಮಾರ್, ಮತ್ತು ಗ್ರಾಮ ಲೆಕ್ಕಾಧಿಕಾರಿಗಳಾದ ಶಿವಮೂರ್ತಿ , ಮಹಾಲಕ್ಷ್ಮಿ, ಕಾವ್ಯ, ಮಂಜುನಾಥ್ ದುಮ್ಮಾಡಿ, ಅಭಿಷೇಕ್, ಹಾಗೂ ಗ್ರಾಮ ಸಹಾಯಕರು , ಹಾಗೂ ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಣಾಪೂರ ಶಾಖೆಯ ಸಿಬ್ಬಂದಿಗಳಾದ ರಾಜಶೇಖರ ಸುನಿಲ್ , ಪೋಲಿಸ್ ಸಿಬ್ಬಂದಿ, ವಿಶ್ವನಾಥ್ ಹಾಗೂ ಪ್ರವಾಸಿ ಮಿತ್ರ ಸಿಬ್ಬಂದಿ ವೆಂಕಟೇಶ ವ್ಯವಸ್ಥಾಪಕ ಹಾಗೂ ದೇವಸ್ಥಾನದ ಸಿಬ್ಬಂದಿವರ್ಗ ಹಾಗೂ ಭಕ್ತಾದಿಗಳಿದ್ದರು .
ಹುಂಡಿ ಎಣಿಕೆ ಕಾರ್ಯ ಸಂದರ್ಭದಲ್ಲಿ ಸಂಪೂರ್ಣವಾಗಿ ಪೊಲೀಸ್ ಬಂದೊಬಸ್ತ್ ಹಾಗೂ ಸಿಸಿ ಟಿವಿ ಕ್ಯಾಮೆರಾ ಹಾಗೂ ವಿಡಿಯೋ ಕಣ್ಗಾವಲಿನಲ್ಲಿ ನಡೆಸಲಾಯಿತು .