Advertisement

ಕಸಮಯ ಸಂತೋಷ 

01:48 PM Dec 30, 2017 | |

ಹಂಪಿ ಪರಿಸರದ ಬಂಡೆಗಲ್ಲುಗಳ ನಡುವೆ ಜುಳುಜುಳು ಹರಿಯುವ ತುಂಗಭದ್ರೆ ಅಲ್ಲಲ್ಲಿ ನಿಲ್ಲುತ್ತಾಳೆ ಹಾಗೇ ಬಳುಕುತ್ತಾ ಸಾಗುತ್ತಾಳೆ. ಅಲ್ಲಲ್ಲಿ ಆಳ ಇರುವ ಕಡೆಗೆ ನಿಲ್ಲುವ ತುಂಗಭದ್ರೆಯ ನೀರಿನಲ್ಲಿ ತೆಲುವ ಜಲ ಕಳೆ ಅರ್ಥಾತ್‌ ಕುದುರೆ ಕೊಳಲು ಯಥೇತ್ಛವಾಗಿ ಬೆಳೆಯುತ್ತದೆ. ಈ ಕಳೆ ಸಸ್ಯಕ್ಕೆ ಇಂಗ್ಲೀಷಿನಲ್ಲಿ ವಾಟರ್‌ ಹೈಸಿಯಂತ್‌ ಎಂಬ ಹೆಸರಿದೆ. 

Advertisement

ಹಾಗೆ ನೋಡಿದರೆ ಕುದುರೆ ಕೊಳಲು ನಮ್ಮ ದೇಶದ್ದಲ್ಲ. ದಕ್ಷಿಣ ಅಮೆರಿಕಾದ ಅಮೆಝಾನ್‌ ಕಣಿವೆ ಪ್ರದೇಶದ್ದು. ಇಲ್ಲಿಗೆ 19ನೇ ಶತಮಾನದ ಆದಿಯಲ್ಲಿ ಅಲಂಕಾರಿಕ ಸಸ್ಯದ ರೂಪದಲ್ಲಿ ಆಗಮಿಸಿತು.

ಆಕರ್ಷಕ ಹಸಿರು ಬಣ್ಣದ ದಪ್ಪ ಎಲೆಗಳಿಂದ ಕೂಡಿದ ಈ ಜಲ ಸಸ್ಯದಲ್ಲಿ ಮನಸ್ಸಿಗೆ ಮುದನೀಡಬಲ್ಲ ತಿಳಿ ನೇರಳೆ ಬಣ್ಣದ ಆಕರ್ಷಕ ಹೂಗಳು ಅರಳುತ್ತವೆ. ಈ ಕಾರಣದಿಂದಲೇ ಇದು  ನಮ್ಮ ದೇಶಕ್ಕೆ ಆಗಮಿಸಿದ್ದು. ಕ್ರಮೇಣ ಈ ಸಸ್ಯ ಸಿಹಿ ನೀರಿಗೆ ಹೊಂದಿಕೊಂಡು ಜಲಕಳೆಯಾಯಿತು.

ಕುದುರೆ ಕೊಳಲು, ಅತ್ಯಂತ ವೇಗವಾಗಿ ಬೆಳೆಯುವ ಸಸ್ಯವಾಗಿದ್ದು, ಒಂದು ವರ್ಷದಲ್ಲಿ 600 ಚದರ ಮೀ ವಿಸ್ತಾರದಲ್ಲಿ ಬೆಳೆಯುತ್ತದೆ. ಬಲ್ಬಿನ ಆಕಾರದ ಗಡ್ಡೆಗಳಿಂದ ಕೂಡಿರುವ ಈ ಸಸ್ಯ ಮೂರು ಅಡಿ ಎತ್ತರಕ್ಕೆ ಬೆಳೆಯುತ್ತದೆ. ಆನಂತರ ಇದರ ಎಲೆಗಳು ನೀರಿನ ಮೇಲ್ಮೆ„ಯಲ್ಲಿ ವಿಶಾಲವಾಗಿ ಹರಡಿಕೊಳ್ಳುತ್ತವೆ. 

Advertisement

ಕಳೆದ ದಶಕದಲ್ಲಿ ಕುದುರೆ ಕೊಳಲಿನ ಹಾವಳಿ ಇಷ್ಟೊಂದು ಇದ್ದಿಲ್ಲ. ಆದರೆ, ನದೀ ಪಾತ್ರದ ನೂರಾರು ಗ್ರಾಮ, ಪಟ್ಟಣ, ನಗರ, ಪಟ್ಟಣ ಪಂಚಾಯ್ತಿಗಳು ಸಂಸ್ಕರಿಸದೇ ತ್ಯಾಜ್ಯ ನೀರನ್ನು ನದಿಗೆ ಬಿಡುತ್ತಿರುವುದು, ಹಲವಾರು ಉದ್ಯಮಗಳು ಅಪಾಯಕಾರಿ ರಾಸಾಯನಿಕಗಳಿರುವ ಕಲುಷಿತ ನೀರನ್ನು ನದಿಗೆ ಬಿಡುತ್ತಿರುವ ಕಾರಣದಿಂದ ಕುದುರೆ ಕೊಳಲಿನ ಹಾವಳಿ ವಿಪರೀತವಾಗಿದೆ. 

 ಶಿವಮೊಗ್ಗ, ದಾವಣಗೆರೆ ಜಿಲ್ಲೆಗಳ ರೈತರು ಅಡಿಕೆ, ಭತ್ತ ಬೆಳೆಯಲು ಯಥೇತ್ಛವಾಗಿ ಬಳಸುವ ರಾಸಾಯನಿಕ ಗೊಬ್ಬರಗಳು ನೀರಿನಲ್ಲಿ ಕರಗಿ, ಮಳೆ ಬಂದಾಗ ಅಂತಹ ನೀರೂ ತೊರೆಗಳಲ್ಲಿ ಸೇರಿ ತುಂಗಭದ್ರಾ ನದಿಗೆ ಸೇರ್ಪಡೆಯಗುತ್ತದೆ. ಆ ಕಾರಣದಿಂದ ನೀರಿನಲ್ಲಿ ಗೊಬ್ಬರದ ಅಂಶಗಳನ್ನು ಹೆಚ್ಚಿಸುತ್ತವೆ ಅನ್ನೋ ಆರೋಪಕ್ಕೆ ತಕ್ಕಂತೆ ಕುದುರೆ ಕೊಳಲು ಬೆಳೆದು ನಿಂತಿದೆ. 

ಆಕರ್ಷಕ ಕುದುರೆ ಕೊಳಲು ಸಸ್ಯ ನೀರಿನ ಮೇಲೆ ಹರಡಿಕೊಳ್ಳುವುದರಿಂದ ನೀರಿಗೆ ಸೂರ್ಯ ಕಿರಣಗಳ ಸ್ಪರ್ಶ ಆಗುವುದಿಲ್ಲ. ಇದರಿಂದ ನೀರಿನಲ್ಲಿ ಆಮ್ಲಜನಕ ಪ್ರಮಾಣವನ್ನು ಹೆಚ್ಚಿಸುವ, ಅದರ ಸಮತೋಲನವನ್ನು ಕಾಪಾಡುವ ಪಾಚಿ ಜಲ ಸಸ್ಯಗಳ ದ್ಯುತಿ ಸಂಶ್ಲೇಷಣಾ ಕ್ರಿಯೆ ಜರುಗುವುದಿಲ್ಲ. ಹೀಗಾಗಿಯೇ ಜಲಚರಗಳಿಗೆ ಉಸಿರುಗಟ್ಟಿಸುವ ವಾತಾವರಣ ಸೃಷ್ಟಿಯಾಗುವುದು. 

ಇಂತಿಪ್ಪ ಕುದುರೆ ಕೊಳಲೆಂಬ ಕಸವನ್ನು ರಸವನ್ನಾಗಿಯೂ ಮಾಡಬಹುದು ಅನ್ನೋದನ್ನು ತೋರಿಸಿಕೊಟ್ಟಿದೆ ಬಳ್ಳಾರಿಯ ಕಿಷ್ಕಿಂದಾ ಟ್ರಸ್ಟ್‌. ಈಗಾಗಲೇ ಹಂಪಿ ಪ್ರದೇಶದ ಗದ್ದೆಗಳಲ್ಲಿ ಬೆಳೆಯುವ ಬಾಳೆ ಗಿಡದ ಬೊಡ್ಡೆಯ ನಾರನ್ನು ಬಳಸಿ ಚಾಪೆ, ಬುಟ್ಟಿ, ಮಹಿಳೆಯರ ವ್ಯಾನಿಟಿ ಬ್ಯಾಗ್‌ ಸೇರಿದಂತೆ ವೈವಿಧ್ಯಮಯ ವಸ್ತುಗಳನ್ನು ಉತ್ಪಾದಿಸಲು ಈ ಕಿಷ್ಕಿಂದಾ ಟ್ರಸ್ಟ್‌ ಆರಂಭಿಸಿರುವುದರಿಂದ, ಈ ಪ್ರದೇಶದ ನೂರಾರು ಮಹಿಳೆಯರಿಗೆ ಉದ್ಯೋಗಾವಕಾಶ ಸೃಷ್ಟಿಯಾಗಿದೆ. ಈ ಸಾಲಿಗೆ ಈಗ ಕುದುರೆ ಕೊಳಲು (ವಾಟರ್‌ ಹೈಸಿಯಂತ್‌) ಜಲ ಕಳೆಯೂ ಸೇರ್ಪಡೆಗೊಂಡಿದೆ.

ಐತಿಹಾಸಿಕ ತಾಣ ಹಂಪಿ ಪ್ರದೇಶದ ಕಲ್ಲು ಬಂಡೆಗಳ ನಡುವೆ ಹರಿಯುವ ತುಂಗಭದ್ರಾ ನದಿಯ ನೀರು ಕೆಲವೆಡೆ ಹರಿಯದೇ ನಿಂತಿರುವ ಕಾರಣ ಈ ಜಲ ಕಳೆ ಯಥೇತ್ಛವಾಗಿ ಬೆಳೆದುಬಿಟ್ಟಿದೆ. ನದಿಯಲ್ಲಿ ಹರಿಗೋಲಿನ ಹುಟ್ಟು ಹಾಕುವುದೂ ಕಠಿಣ ಎನಿಸುವಷ್ಟರ ಮಟ್ಟಿಗೆ ಕಳೆ ಕಾಡುತ್ತಿದೆ.  ಅಲ್ಲದೆ,  ನಿಂತ ನೀರಿನಲ್ಲಿರುವ ಕಡೆಗಳಲ್ಲಿ ಕೊಳೆತ ಗಿಡದ ವಾಸನೆ ಸಾಕಷ್ಟು ಅಸಹನೀಯವಾಗಿದ್ದು ಈ ಪ್ರದೇಶ ಅಸಂಖ್ಯಾತ ಸೊಳ್ಳೆಗಳ ಉತ್ಪಾದನಾ ತಾಣವಾಗಿ ಜನರ ಜೀವನವನ್ನು ಸಂಕಷ್ಟಮಯಗೊಳಿಸಿದೆ. 

ಈ ಕಳೆಯನ್ನು ವೈಜಾnನಿಕವಾಗಿ ಅಧ್ಯಯನ ಮಾಡಿರುವ ಕಿಷ್ಕಿಂದಾ ಟ್ರಸ್ಟ್‌, ಇದರ ಬೇರು ಮತ್ತು ಕಾಂಡದಲ್ಲಿ ಸಂಗ್ರಹವಾಗುವ ಸಾರಜನಕ ಮತ್ತಿತರೆ ನೈಸರ್ಗಿಕ ರಾಸಾಯನಿಕಗಳು ಉತ್ತಮ ಗುಣಮಟ್ಟದ ಸಾವಯವ ಕಾಂಪೋಷ್ಟ್ ಗೊಬ್ಬರ ತಯಾರಿಸಲು ಅಗತ್ಯವಿರುವ ಕಚ್ಚಾವಸ್ತು ಆಗುತ್ತದೆ ಎಂದು ವಿವರಿಸಿದೆ. 

ಕುದುರೆ ಕೊಳಲಿನ ಮೂರು ಅಡಿ ಎತ್ತರದ ಕಾಂಡದ ನಾರಿನಿಂದ ಅಲಂಕಾರಿಕ ಬ್ಯಾಗ್‌, ಬುಟ್ಟಿ ಮುಂತಾದ ವಸ್ತುಗಳನ್ನು ತಯಾರಿಸುವ ಕಾರ್ಯ ಈಗಾಗಲೇ ಆರಂಭವಾಗಿದೆ. ಇದಕ್ಕೆ ಬೇಕಿರುವ ಕಚ್ಚಾ ವಸ್ತು ಸಂಗ್ರಹವನ್ನು ಆನೆಗೊಂದಿ ಗ್ರಾಮದ ಬಡ ಜನರು ಮಾಡುತ್ತಿದ್ದಾರೆ. ಒಣಗಿದ ಕುದುರೆ ಕೊಳಲಿನ ಕಾಂಡಗಳಿಗೆ ಒಂದು ಕಿಲೋಗೆ 50 ರೂ ನೀಡಿ ಈ ಕಿಷ್ಕಿಂದಾ ಟ್ರಸ್ಟ್‌ ಖರೀದಿಸುತ್ತಿದೆ.

ಹೀಗಾಗಿ ದುಡಿಯುವ ಕೈಗಳಿಗೆ ಕೆಲಸ ಸಿಕ್ಕಿಗೆ. ಆನೆಗೊಂದಿಯ ಜನರೀಗ ಕುದುರೆ ಕೊಳಲಿನ ಕಾಂಡದ ಸಂಗ್ರಹಕ್ಕೆ ನಿಂತಿದ್ದಾರೆ. ದಿನವೊಂದಕ್ಕೆ 250 ರೂಗಳಿಂದ 350 ರೂಗಳ ಆದಾಯ ದೊರೆಯುತ್ತಿದೆ. ಅಲ್ಲದೇ, ಭಾನುವಾರ ಮತ್ತು ರಜಾ ದಿನಗಳಲ್ಲಿ ಮಕ್ಕಳೂ ಸಹ ಕುದುರೆ ಕೊಳಲಿನ ಸಂಗ್ರಹ ಮಾಡಿ ಈ ಸಸ್ಯವನ್ನು ಬಂಡೆಗಲ್ಲುಗಳ ಮೇಲೆ ಒಣಗಿಸಲು ನೆರವಾಗುತ್ತಿದ್ದಾರೆ.  

ಇದರಿಂದ ಏನು ಮಾಡುತ್ತಾರೆ?
ಸಿಂಥೆಟಿಕ್‌ ಸ್ಯಾನಿಟರಿ ನ್ಯಾಪಿRನ್‌, ಡೈಪರ್‌ಗಳ ತಯಾರಿಕೆಯಲ್ಲಿ ಇದನ್ನು ಬಳಸುತ್ತಿದ್ದಾರೆ.  ಸಾಥಿ ಎನ್ನುವ ಸಾಮಾಜಿಕ ಸೇವಾ ಸಂಸ್ಥೆ, ಬಾಳೆ ನಾರಿನಿಂದ ನೈಸರ್ಗಿಕವಾಗಿ ಕೊಳೆಯುವ ಸ್ಯಾನಿಟರಿ ನ್ಯಾಪಿRನ್‌ಗಳನ್ನು ರೂಪಿಸಿದರೆ,   ಕಿಷ್ಕಿಂದಾ ಟ್ರಸ್ಟ್‌ ಕುದುರೆ ಕೊಳಲಿನ ನಾರಿನಿಂದಲೂ ಪರಿಸರ ಸ್ನೇಹಿ ಸ್ಯಾನಿಟರಿ ನ್ಯಾಪಿRನ್‌ಗಳನ್ನು ತಯಾರಿಸಬಹುದಾಗಿದೆ ಎನ್ನುವ ಆವಿಷ್ಕಾರವನ್ನು ಮಾಡಿ ತೋರಿಸಿದೆ. 
ಪ್ರಸ್ತುತ ಕೀನ್ಯಾದಲ್ಲಿ ಕುದುರೆ ಕೊಳಲು ನಾರಿನಿಂದ ಯಶಸ್ವಿಯಾಗಿ ಸ್ಯಾನಿಟರಿ ನ್ಯಾಪಿRನ್‌ ಹಾಗೂ ಡಯಾಪರ್‌ಗಳನ್ನು ಉತ್ಪಾದಿಸಲಾಗುತ್ತಿದ್ದು ಈ ಉತ್ಪಾದನೆ ವ್ಯಾಪಕವಾಗಿ ಬಳಕೆಯಲ್ಲಿದೆಯಂತೆ. 

ವಾಟರ್‌ ಹೈಸಿಯಂತ್‌ ನಿಜಕ್ಕೂ ಅಪಾಯಕಾರಿ ಸಸ್ಯ. ಆದರೆ, ನಾವು ಅದನ್ನು ಲಾಭದಾಯಕ ಕಚ್ಚಾವಸ್ತುವನ್ನಾಗಿಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದೇವೆ. ಈಗಾಗಲೇ ಹಂಪಿ ಸೇರಿದಂತೆ ಅನೇಕ ಕಡೆಗಳಲ್ಲಿ ಕುದುರೆ ಕೊಳಲಿನ ಉತ್ಪನ್ನಗಳನ್ನು ಪ್ರದರ್ಶಿಸಿ ಮಾರಾಟ ಮಾಡಲಾಗಿದೆ. ಇದನ್ನೊಂದು ಸಾಮಾಜಿಕ ಆಂದೋಲನದ ರೀತಿಯಲ್ಲಿ ಮುಂದೆ ತೆಗೆದುಕೊಂಡು ಹೋಗಬೇಕಿದೆ. ಹೀಗೆ ಮಾಡುವುದರಿಂದ ಪವಿತ್ರ ತುಂಗಭದ್ರಾ ನದಿಯನ್ನು ಈ ಕಲೆ ಸಸ್ಯದಿಂದ ಸಂರಕ್ಷಿಸಬಹುದು ಎನ್ನುತ್ತಾರೆ ಕಿಷ್ಕಿಂದಾ ಟ್ರಸ್ಟ್‌ನ ಶಮಾಪವಾರ್‌. 

ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಡಾ.ರಾಮ್‌ಪ್ರಸಾತ್‌ ಮನೋಹರ್‌- ಹಂಪಿಯ ಬಳಿಯ ತುಂಗಭದ್ರಾ ನದಿಯಲ್ಲ ಬೆಳೆದಿರುವ ವಾಟರ್‌ ಹೈಸಿಯಂತ್‌ ಜಲಕಳೆಯನ್ನು ಆರ್ಥಿಕ ಸಂಪನ್ಮೂಲವಾಗಿಸಬಹುದು ಎನ್ನುವ ಸಂಶೋಧನೆ ಮಾಡಿರುವುದು ಶ್ಲಾಘನೀಯ.  ಇದರಿಂದ ಮಹಿಳಾ ಸಬಲೀಕರಣ ಕಾರ್ಯದಲ್ಲಿ ತೊಡಗಿರುವ ಸಂಸ್ಥೆಗೆ ಅಗತ್ಯವಿರುವ ಆರ್ಥಿಕ ನೆರವನ್ನು ನೀಡಲು ನಾವು ಸಿದ್ಧರಿದ್ದೇವೆ ಎಂದು ಹರ್ಷ ವ್ಯಕ್ತಪಡಿಸುತ್ತಾರೆ. 

ದುಡಿಯುವ ಕೈಗಳಿಗೆ ಕೆಲಸ ಸಿಕ್ಕಿದೆೆ. ಆನೆಗೊಂದಿಯ ಜನರೀಗ ಕುದುರೆ ಕೊಳಲಿನ ಕಾಂಡದ ಸಂಗ್ರಹಕ್ಕೆ ನಿಂತಿದ್ದಾರೆ. ದಿನವೊಂದಕ್ಕೆ 250 ರೂಗಳಿಂದ 350 ರೂಗಳ ಆದಾಯ ದೊರೆಯುತ್ತಿದೆ. ಅಲ್ಲದೇ, ಭಾನುವಾರ ಮತ್ತು ರಜಾ ದಿನಗಳಲ್ಲಿ ಮಕ್ಕಳೂ ಕುದುರೆ ಕೊಳಲಿನ ಸಂಗ್ರಹ ಮಾಡಿ ಈ ಸಸ್ಯವನ್ನು ಬಂಡೆಗಲ್ಲುಗಳ ಮೇಲೆ ಒಣಗಿಸಲು ನೆರವಾಗುತ್ತಿದ್ದಾರೆ. 

ಬಳ್ಳಾರಿಯ ಭದ್ರೆಯಲ್ಲಿ ಭದ್ರವಾಗಿಕೂತಿದ್ದ ಜಲಕಳೆ ಎಲ್ಲರಿಗೂ ತಲೆ ನೋವಾಗಿತ್ತು. ಇದರಿಂದ ಉಸಿರುಗಟ್ಟಿ ಒದ್ದಾಡುತ್ತಿದ್ದ ಜಲಚರಗಳ ಪಾಡು ಹೇಳತೀರದು. ಆನೆಗುಂದಿಯ ಸುತ್ತಮುತ್ತ ಚಾದರದಂತೆ ಹರಡಿಕೊಂಡಿದ್ದ ಕುದುರೆ ಕೊಳಲು ಸಸ್ಯವನ್ನು ಕೊನೆಗಾಣಿಸಲು ಮಾಡಿದ ಉಪಾಯಗಳೇ ಇಲ್ಲ.  ಮುಂದೆ ಏನಪ್ಪಾ ಗತಿ ಎನ್ನುವ ಹೊತ್ತಿಗೆ ಕಸವನ್ನು ರಸ ಮಾಡುವ ತಂತ್ರ ಒಂದು ಹೊಳೆದಿದೆ. ಅದು ಏನೆಂದರೆ…

ಕಳೆ ಹರಡುವುದು ಏಕೆ?

ದಶಕದ ಹಿಂದೆ ಇಷ್ಟೊಂದು ಪ್ರಮಾಣದ ಕುದುರೆ ಕೊಳಲು ಸಸ್ಯವನ್ನು ತುಂಗಭದ್ರಾ ನದಿಯಲ್ಲಿ ಕಂಡಿರಲಿಲ್ಲ. ಅಲ್ಲಲ್ಲಿ ನಿಂತ ನೀರಿನಲ್ಲಿ ಕಂಡು ಬರುತ್ತಿದ್ದ ಕುದುರೆ ಕೊಳಲು ಇಂದು ಅಪಾರ ಪ್ರಮಾಣದಲ್ಲಿ ತುಂಗ ಭದ್ರೆಯನ್ನು ಆವರಿಸಿದೆ. 

ಹಿಂದೆ ತುಂಗಭದ್ರಾ ನದಿಯಲ್ಲಿ ಸಾಕಷ್ಟು ಪ್ರಮಾಣದ ನೀರು ಹರಿಯುತ್ತಿದ್ದರಿಂದ ಈ ಜಲ ಕಳೆ ನೀರಿನೊಡನೆ ಕೊಚ್ಚಿಕೊಂಡು ಹೋಗುತ್ತಿತ್ತು. ಆದರೆ, ಕಳೆದ ಮೂರು ವರ್ಷಗಳಿಂದ ತುಂಗಭದ್ರೆ ಸೊರಗಿದ್ದಾಳೆ. ಹಿಂದೆಂದೂ ಕಾಣದಷ್ಟು ಕಡಿಮೆ ಪ್ರಮಾಣದಲ್ಲಿ ನದಿಯಲ್ಲಿ ನೀರು ಹರಿದಿದೆ. ತಗ್ಗು ಪ್ರದೇಶಗಳಲ್ಲಿ ನಿಂತ ನೀರಿನಲ್ಲಿ ವ್ಯಾಪಕ ವಾಗಿ ಹಬ್ಬಿರುವ ಕುದುರೆ ಕೊಳಲು ತನ್ನ ಕರಾಳ ಜಲವನ್ನು ಹರಡಿ ಜಲಚರಗಳನ್ನು, ಅವುಗಳನ್ನು ಅವಲಂಬಿಸಿದ ಪಕ್ಷಿ$ಸಂಕುಲ, ಜನ ಸಮುದಾಯಗಳನ್ನು ಕಂಗೆಡಿಸಿದೆ. 

ಹಾವಳಿ ತಡೆಗೆ ಏನು ಮಾಡಬಹುದು?

ಹಂಪಿಯ ಸುತ್ತಮುತ್ತಲಿನ ತುಂಗಭದ್ರಾ ನದೀ ಪಾತ್ರದಲ್ಲಿ ಕುದುರೆ ಕೊಳಲು ಬೆಳೆಯುವುದನ್ನು ಕೂಡಲೇ ತಡೆಗಟ್ಟದಿದ್ದಲ್ಲಿ ತುಂಗಭದ್ರಾ ನದಿ ಭವಿಷ್ಯದಲ್ಲಿ ಒಂದು ನೆನಪಾಗಿ ಉಳಿಯಬಹುದು ಎನ್ನುವಷ್ಟರ ಮಟ್ಟಿಗೆ ಈ ಕಳೆ ಸಸ್ಯದಿಂದ ಅಪಾಯದ ತೀವ್ರತೆ ಇದೆ.  ಗ್ರಾಮೀಣ ಜನರಿಗೆ ದುಡಿಯಲು ಅವಕಾಶ ಕಲ್ಪಿಸಿಕೊಡುವ ಗ್ರಾಮೀಣ ಉದ್ಯೋಗ ಖಾತ್ರಿಯಂತಹ ಯೋಜನೆಯನ್ನು ಕುದುರೆ ಕೊಳಲು ತೆರವಿಗೆ ಬಳಸಿಕೊಳ್ಳಬಹುದಾಗಿದೆ. ಅಲ್ಲದೇ, ಈ ನಿಟ್ಟಿನಲ್ಲಿ ಸಾಮಾಜಿಕ ಸೇವಾ ಸಂಸ್ಥೆಗಳನ್ನೂ ತೊಡಗಿಸಿಕೊಳ್ಳಬಹುದಾಗಿದೆ.

ಎಂ.ಮುರಳಿ ಕೃಷ್ಣ

Advertisement

Udayavani is now on Telegram. Click here to join our channel and stay updated with the latest news.

Next