Advertisement
ಪ್ರತಿ ವರ್ಷದಂತೆ ಹನುಮದ್ ವೃತ್‌ದ ನಿಮಿತ್ತ ಹನುಮವೃತಾಚರಣೆಯ ಹನುಮಭಕ್ತರ ಮಾಲಾವಿಸರ್ಜನೆಯ ಕಾರ್ಯಕ್ರಮ ಜಿಲ್ಲಾಡಳಿತ ಮಾಡಿದ್ದ ಸುವ್ಯವಸ್ಥೆಯ ಕಾರಣ ಯಶಸ್ವಿಯಾಗಿ ಜರುಗಿತು. ನಾಡಿನ ವಿವಿಧೆಡೆಯಿಂದ ಆಗಮಿಸಿದ್ದ ಲಕ್ಷಾಂತರ ಹನುಮಭಕ್ತರು ಅಂಜನಾದ್ರಿಯಲ್ಲಿ ಶ್ರೀಆಂಜನೇಯನ ಹಾಗೂ ಆಂಜನಾದೇವಿಯ ದರ್ಶನ ಪಡೆದು ಪುನೀತರಾದರು. ಕಳೆದ 15 ದಿನಗಳಿಂದ ಹನುಮಮಾಲಾಧಾರಿಗಳು ಕೇಸರಿ ಬಟ್ಟೆ ಧರಿಸಿ ಹನುಮಂತ ಸ್ಮರಣೆ ಮಾಡಿ ಹನುಮದ್ ವೃತ್ ದಿನದಂದು ಅಂಜನಾದ್ರಿಗೆ ಆಗಮಿಸಿ ಹನುಮಮಾಲಾ ವಿಸರ್ಜನೆ ಸಂಪ್ರದಾಯವಾಗಿದ್ದು ಕಳೆದ 10 ವರ್ಷಗಳಿಂದ ನಾಡಿನಾದ್ಯಂತ ಆಚರಣೆ ಮಾಡಲಾಗುತ್ತಿದೆ. ಈ ವರ್ಷ ತಾಲೂಕು ಮತ್ತು ಜಿಲ್ಲಾಡಳಿತ ಹನುಮಮಾಲಾಧಾರಿಗಳ ಮಾಲಾವಿಸರ್ಜನಾ ಕಾರ್ಯಕ್ರಮಕ್ಕಾಗಿ ಸುಮಾರು 14 ಸಮಿತಿಗಳನ್ನು ರಚನೆ ಮಾಡಿ ಹನುಮಮಾಲಾಧಾರಿಗಳಿಗೆ ಯಾವುದೇ ಅನಾನುಕೂಲವಾಗದಂತೆ ವ್ಯವಸ್ಥೆ ಮಾಡಿತ್ತು. ಜತೆಗೆ ಜಿಲ್ಲಾ ಪೊಲೀಸ್ ಇಲಾಖೆಯ ಸೂಚನೆಯಂತೆ ಗಂಗಾವತಿ ಗ್ರಾಮೀಣ ಪೊಲೀಸರು ಜನರು ಮತ್ತು ವಾಹನ ದಟ್ಟಣೆ ನಿಯಂತ್ರಿಸಿ ಮೂರು ಕಡೆ ಪೊಲೀಸ್ ಚೆಕ್ ಪೋಸ್ಟ್ 19 ಕಡೆ ರೈತರ ಸಹಕಾರದಲ್ಲಿ ವಾಹನ ನಿಲುಗಡೆ ತಾತ್ಕಲಿಕ ಪಾರ್ಕಿಂಗ್ ವ್ಯವಸ್ಥೆ ಮತ್ತು ಬಲಭಾಗದಿಂದ ಬೆಟ್ಟ ಹತ್ತುವ ಎಡಭಾಗದಿಂದ ಇಳಿಯುವ ವ್ಯವಸ್ಥೆ ಮಾಡಿ ಬೆಟ್ಟದ ಎಡಭಾಗದಲ್ಲಿರುವ ಅಂಜನಾದ್ರಿಯ ವೇದಪಾಠಶಾಲೆಯಲ್ಲಿ ಹನುಮಭಕ್ತರಿಗೆ ಉಪ ಆಹಾರ ಮತ್ತು ಅನ್ನಪ್ರಸಾದದ ವ್ಯವಸ್ಥೆ ಮಾಡಿದ್ದರಿಂದ ಹನುಮಮಾಲಾ ವಿಸರ್ಜನೆ ಸೂಸುತ್ರವಾಗಿ ನೆರವೇರಿತು. ಸುಮಾರು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ಹನುಮಭಕ್ತರಿಗೆ ಊಟ ವಸತಿ ಮತ್ತು ವಾಹನ ಪಾರ್ಕಿಂಗ್ ಸರಿಯಾಗಿ ನಿರ್ವಹಿದ್ದನ್ನು ಹನುಮ ಭಕ್ತರು ಸ್ಮರಿಸಿದರು.
Related Articles
– ಪರಣ್ಣ ಮುನವಳ್ಳಿ ಶಾಸಕರು.
Advertisement
ಇದನ್ನೂ ಓದಿ: ಕಾಂಗ್ರೆಸ್‌ನ ಸಾಮಾನ್ಯ ಕಾರ್ಯಕತರೂ ಮುಖ್ಯಮಂತ್ರಿ ಅಭ್ಯರ್ಥಿಯೇ : ಈಶ್ವರ ಖಂಡ್ರೆ