ಗಂಗಾವತಿ: ತಾಲ್ಲೂಕಿನ ಕಿಷ್ಕಿಂಧಾ ಅಂಜನಾದ್ರಿ ಶ್ರೀ ಆಂಜನೇಯ ದೇವಸ್ಥಾನ ಹುಂಡಿ ಎಣಿಕೆ ಕಾರ್ಯ ಗುರುವಾರ ತಹಸೀಲ್ದಾರ್ ಮಂಜುನಾಥ ಹಿರೇಮಠ ಇವರ ನೇತೃತ್ವದಲ್ಲಿ ನಡೆದಿದ್ದು 55 ದಿನಗಳಲ್ಲಿ ಒಟ್ಟು 28.79,910 ರೂ.ಗಳು ಸಂಗ್ರಹವಾಗಿವೆ.
ಕಳೆದ ಮಾ. 29 ರಿಂದ ಮೇ.25 ತನಕ ದೇವಾಲಯದ ಹುಂಡಿಯಲ್ಲಿ ಹಣವನ್ನು ಎಣಿಕೆ ಮಾಡಲಾಗಿದೆ.ಇದರಲ್ಲಿ 4 ವಿದೇಶಿ ನಾಣ್ಯಗಳು ಸಿಕ್ಕಿವೆ.
ಈ ಸಂದರ್ಭದಲ್ಲಿ ಗ್ರೇಡ್2 ತಹಸೀಲ್ದಾರ್ ವಿ.ಹೆಚ್ ಹೊರಪೇಟಿ, ಶಿರಸ್ತೇದಾರಾದ ಆನಂತ ಜೋಶಿ, ರವಿಕುಮಾರ ನಾಯಕವಾಡಿ,
ಮೈಬೂಬಅಲಿ, ಕೃಷ್ಣವೇಣಿ, ಕಂದಾಯ ನಿರೀಕ್ಷಕರಾದ ಮಂಜುನಾಥ ಹಿರೇಮಠ , ಮಹೇಶ್ ದಲಾಲ, ಶರಣಪ್ಪ ಬಿ, ತಹಶೀಲ್ ಕಾರ್ಯಾಲಯದ ಸಿಬ್ಬಂದಿಗಳಾದ ಗುರುರಾಜ, ಶ್ರೀಕಂಠ, ಅನ್ನಪೂರ್ಣ, ನಾಗರತ್ನ, ನಾಗರತ್ನಮ್ಮ ಶಿವ ಕುಮಾರ, ಗಾಯತ್ರಿ,, ಸೈಯದ್, ಶ್ರೀರಾಮ, ಮತ್ತು ಗಂಗಾವತಿ,ವೆಂಕಟಗಿರಿ ,ಮರಳಿ ಗ್ರಾಮ ಆಡಳಿತ ಅಧಿಕಾರಿಗಳು , ಗ್ರಾಮ ಸಹಾಯಕರು , ಹಾಗೂ ಪಿ ಕೆ ಜಿ ಬಿ ಸಣಾಪೂರ ಬ್ಯಾಂಕ್ ಸಿಬ್ಬಂದಿ ರಾಜಶೇಖರ ಸುನಿಲ್ , ಪೋಲಿಸ್ ಸಿಬ್ಬಂದಿಗಳು ಪ್ರವಾಸಿ ಮಿತ್ರ ಸಿಬ್ಬಂದಿಗಳು ಹಾಗೂ ವೆಂಕಟೇಶ ದೇವಸ್ಥಾನದ ಸಿಬ್ಬಂದಿವರ್ಗ ಹಾಗೂ ಭಕ್ತಾದಿಗಳಿದ್ದರು.
ಮಾ.29ರಂದು ಹುಂಡಿ ಎಣಿಕೆ ಮಾಡಿದಾಗ 1064935 ರೂ.ಸಂಗ್ರಹವಾಗಿತ್ತು.
Related Articles
ಇದನ್ನೂ ಓದಿ: ದ್ವೇಷ ರಾಜಕಾರಣ ಬಿಟ್ಟು ಒಳ್ಳೆ ಕೆಲಸಕ್ಕೆ ಸಮಯ ಮೀಸಲಿಡಿ: ಡಾ.ಸಿ.ಎನ್. ಅಶ್ವತ್ಥನಾರಾಯಣ