ಗಂಗಾವತಿ: ಕರ್ನಾಟಕ ವಿಧಾನಸಭಾ ಚುನಾವಣೆ ಮೇ10 ರಂದು ಮತದಾನ ನಡೆಯಲಿದ್ದು ರಾಜ್ಯ ಸರ್ಕಾರ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತಗಟ್ಟೆಗೆ ಆಗಮಿಸಿ ಮತದಾನ ಮಾಡುವಂತೆ ಮನವಿ ಮಾಡಿದೆ. ಅದಕ್ಕೆಂದೆ ಕೆಲವೊಂದು ಪ್ರವಾಸಿ ತಾಣಗಳನ್ನು ಮತದಾನದ ದಿನದಂದು ಬಂದ್ ಮಾಡಲಾಗಿದೆ ಆದರೆ ತಾಲೂಕಿನ ಕಿಷ್ಕಿಂಧಾ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯ ದೇವಸ್ಥಾನ ಸೇರಿ ರಾಜ್ಯ ಧಾರ್ಮಿಕ ದತ್ತಿ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.
ವಿಧಾನಸಭೆಯ ಮತದಾನ ಹೆಚ್ಚಿನ ಸಂಖ್ಯೆಯಲ್ಲಿ ಆಗುವ ದೃಷ್ಟಿಯಿಂದ ಚುನಾವಣಾ ಆಯೋಗ ಮತ್ತು ರಾಜ್ಯ ಸರ್ಕಾರ ಖಾಸಗಿ ಮತ್ತು ಸರ್ಕಾರಿ ನೌಕರರಿಗೆ ವಿಶೇಷ ರಜೆ ನೀಡಿ ಆದೇಶ ಹೊರಡಿಸಿದೆ, ರಜಾದಿನಗಳು ಸೇರಿ ವಿಶೇಷ ದಿನಗಳಲ್ಲಿ ಕಿಷ್ಕಿಂಧಾ ಅಂಜನಾದ್ರಿ ಕ್ಷೇತ್ರಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ.
ಸರ್ಕಾರದಿಂದ ಆದೇಶ ಬಂದಿಲ್ಲ: ಮೇ 10 ರಂದು ಮತದಾನ ನಡೆಯುವುದರಿಂದ ಪ್ರವಾಸಿ ತಾಣಗಳನ್ನು ಬಂದ್ ಮಾಡುವಂತೆ ಸರಕಾರದಿಂದ ಯಾವುದೇ ಆದೇಶ ಬಂದಿಲ್ಲ.
ಕಿಷ್ಕಿಂಧಾ ಅಂಜನಾದ್ರಿ ಶ್ರೀ ಆಂಜನೇಯ ಸ್ವಾಮಿ ದೇವಾಲಯ ಪ್ರವೇಶ ನಿರ್ಬಂಧಿಸಿ ಧಾರ್ಮಿಕ ದತ್ತಿ ಮುಜರಾಯಿ ಇಲಾಖೆ ಯಾವುದೇ ಆದೇಶ ಜಾರಿ ಮಾಡಿಲ್ಲ ಎಂದು ತಹಸಿಲ್ದಾರ್ ತಹಸೀಲ್ದಾರ್ ಮಂಜುನಾಥ್ ಸ್ವಾಮಿ ಹಿರೇಮಠ ಉದಯವಾಣಿಗೆ ತಿಳಿಸಿದ್ದಾರೆ.