ಗಂಗಾವತಿ :ಹಿಂದೂ ಧರ್ಮದ ಸಾಧು ಸಂತರು ಹಾಗೂ ಗ್ರಂಥಗಳಲ್ಲಿ ಉಲ್ಲೇಖಿಸಿರುವಂತೆ ಕಿಷ್ಕಿಂದಾ ಅಂಜನಾದ್ರಿ ಪರ್ವತ ಹನುಮಂತನ ಜನ್ಮ ಸ್ಥಳವಾಗಿದೆ ಎಂದು ಆರ್ಟ್ ಆಫ್ ಲಿವಿಂಗ್ ನ ಡಾ। ರವಿಶಂಕರ ಗುರೂಜಿ ಶುಕ್ರವಾರ ಹೇಳಿದ್ದಾರೆ.
ಅವರು ವಿಶ್ವವಿಖ್ಯಾತ ಕಿಷ್ಕಿಂದಾ ಅಂಜನಾದ್ರಿ ಪರ್ವತಕ್ಕೆ ಭೇಟಿ ನೀಡಿ ಶ್ರೀ ಆಂಜನೇಯ ದೇವರ ದರ್ಶನ ಪಡೆದು ಪವಮಾನ ಹೋಮ ದಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದರು.
ಶ್ರೀರಾಮಚಂದ್ರನ ವನವಾಸದ ಸಂದರ್ಭದಲ್ಲಿ ಲಕ್ಷ್ಮಣ ಸಮೇತವಾಗಿ ಋಷಿಮುಖ ಪರ್ವತ ಕಿಷ್ಕಿಂದಾ ಅಂಜನಾದ್ರಿ ಪ್ರದೇಶದಲ್ಲಿ ಸುತ್ತಾಡಿದ್ದಾರೆ ಈಗಿನ ತುಂಗಭದ್ರ ನದಿ ಅಂದು ಪಂಪಾನದಿ ಯಾಗಿತ್ತು .ವಾಲ್ಮೀಕಿ ರಾಮಾಯಣ ಸೇರಿದಂತೆ ಮಹಾನ್ ಗ್ರಂಥಗಳಲ್ಲಿ ಈ ಬಗ್ಗೆ ಉಲ್ಲೇಖ ಮಾಡಲಾಗಿದೆ ಇದನ್ನು ನಂಬಿಯೇ ಉತ್ತರಪ್ರದೇಶದಿಂದ ಸಾಧುಸಂತರು ಚಾರ್ ಧಾಮ್ ಯಾತ್ರೆಯ ನೆಪದಲ್ಲಿ ಅಂಜನಾದ್ರಿ ಪರ್ವತ ,ಪಂಪಾ ಸರೋವರ ವಾಲಿಕಿಲ್ಲಾ ಪ್ರದೇಶಗಳಿಗೆ ನಿರಂತರವಾಗಿ ಭೇಟಿ ನೀಡುತ್ತಿದ್ದಾರೆ .ಮುಂಬರುವ ದಿನಗಳಲ್ಲಿ ಕಿಷ್ಕಿಂದಾ ಅಂಜನಾದ್ರಿ ಸಹ ಪ್ರಸಿದ್ಧಿಯಾಗಲಿದೆ .ಪ್ರತಿಯೊಬ್ಬ ಭಕ್ತನೂ ಜೀವಮಾನ ಕಾಲದಲ್ಲಿ 1ಬಾರಿಯಾದರೂ ಕಿಷ್ಕಿಂದಾ ಅಂಜನಾದ್ರಿಗೆ ಭೇಟಿ ನೀಡಬೇಕು .ಸರಕಾರ ಇಲ್ಲಿಗೆ ಆಗಮಿಸುವ ಭಕ್ತರಿಗೆ ಮೂಲಸೌಕರ್ಯಗಳನ್ನು ಕಲ್ಪಿಸಬೇಕು ಅದೇ ತೆರನಾಗಿ ಹತ್ತಿರದ ಗಂಗಾವತಿಗೆ ರೈಲ್ವೆ ಮಾರ್ಗಗಳನ್ನು ಹೆಚ್ಚು ಮಾಡುವಂತೆ ಸರ್ಕಾರಕ್ಕೆ ಅವರು ಸಲಹೆ ನೀಡಿದರು .
ಈ ಸಂದರ್ಭದಲ್ಲಿ ಆದಿಶಕ್ತಿ ದೇಗುಲದ ಅರ್ಚಕ ಬ್ರಹ್ಮಾನಂದ ಯ್ಯಸ್ವಾಮಿ,ರಾಜವಂಶಸ್ಥರಾದ ಶ್ರೀಕೃಷ್ಣದೇವರಾಯ ,ಮಾಜಿ ಎಂಎಲ್ ಸಿ ಎಚ್. ಆರ್ .ಶ್ರೀನಾಥ್ .ಬಿಜೆಪಿ ಯುವ ಮುಖಂಡ ಕೇಲೋಜಿ ಸಂತೋಷ್ ,.ಡಿಎಸ್ ಪಿ ರುದ್ರೇಶ್ ಉಜ್ಜನಕೊಪ್ಪ ,ವೆಂಕಟೇಶ್ ಅಮರಜ್ಯೋತಿ ,ಶ್ರೀನಿವಾಸ್ ಸಿರಿಗಿರಿ ಸೇರಿ ಅನೇಕರಿದ್ದರು .