Advertisement

ಚೆಸ್‌ ಒಲಿಂಪಿಕ್ಸ್‌ನಲ್ಲಿ ಕಿಶನ್‌ ಗಂಗೊಳ್ಳಿಗೆ ಕಂಚು

03:45 AM Jul 14, 2017 | Team Udayavani |

ಕುಂದಾಪುರ: ಮೆಕಾಡೋನಿಯ ದೇಶದ ಓರ್ಕಿಡ್‌ ನಗರದಲ್ಲಿ ನಡೆದ ಐಆಇಅ ಚೆಸ್‌ ಒಲಿಂಪಿಕ್ಸ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ ಕಿಶನ್‌ ಗಂಗೊಳ್ಳಿ ಅವರು ವೈಯಕ್ತಿಕವಾಗಿ ಕಂಚಿನ ಪದಕ ಗಳಿಸಿದ್ದಾರೆ.

Advertisement

ಒಟ್ಟು  27 ದೇಶಗಳು ಭಾಗವಹಿಸಿದ್ದವು. 19ನೇ ಶ್ರೇಯಾಂಕಿತವಾದ ಭಾರತ ತಂಡವು ಈ ಪಂದ್ಯಾವಳಿಯಲ್ಲಿ 7ನೇ ಸ್ಥಾನ ಪಡೆದು ಇತಿಹಾಸಗೈದಿದೆ.

ಪ್ರತಿಯೊಂದು ತಂಡದಲ್ಲಿ 4 ಜನ ಆಟಗಾರರು ಹಾಗೂ ಒಬ್ಬ ರಿಸರ್ವ್‌ ಪ್ಲೆಯರ್‌ ಇರುತ್ತಾರೆ. ಕಿಶನ್‌ ಗಂಗೊಳ್ಳಿ 9 ನೇ ಸುತ್ತಿನಲ್ಲಿ 6.5 ಅಂಕ ಗಳಿಸಿ ಕಂಚಿನ ಪದಕವನ್ನು ತನ್ನದಾಗಿಸಿಕೊಂಡರು.

2012ರಲ್ಲಿ ನಡೆದ ಒಲಿಂಪಿಕ್ಸ್‌ ನಲ್ಲಿ ಕಿಶನ್‌ ಗಂಗೊಳ್ಳಿ  ವೈಯಕ್ತಿಕವಾಗಿ ಚಿನ್ನದ ಪದಕ ಗೆದ್ದಿರುವುದರೊಂದಿಗೆ ಐಆಇಅ ಚೆಸ್‌ ಒಲಿಂಪಿಕ್ಸ್‌ ನಲ್ಲಿ 2 ಬಾರಿ ಪದಕ ಗೆದ್ದಿರುವ ಏಕೈಕ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next