Advertisement
ಬೆಳಗಾವಿಗೆ ಬಂಪರ್ಬಿಡುಗಡೆಯಾದ ಅನುದಾನದಲ್ಲಿ ಬೆಳಗಾವಿ ಜಿಲ್ಲೆಯ 5.49 ಲಕ್ಷ ರೈತರು 109 ಕೋ. ರೂ.ಗಳನ್ನು ಪಡೆದುಕೊಂಡಿದ್ದಾರೆ. ಅತೀ ಕಡಿಮೆ, ಅಂದರೆ 6.26 ಕೋ. ರೂ.ಗಳು ಬೆಂಗಳೂರು ನಗರ ಜಿಲ್ಲೆಯ ರೈತರಿಗೆ ದೊರೆತಿದೆ. ಕಲಬುರಗಿ ಮತ್ತು ಮಂಡ್ಯ 2, 3ನೇ ಸ್ಥಾನಗಳಲ್ಲಿವೆ. ಕಲಬುರಗಿಯ 2,68,863 ರೈತರಿಗೆ 53.77 ಕೋ.ರೂ. ಮತ್ತು ಮಂಡ್ಯದ 2,65,572 ರೈತರಿಗೆ 53.11 ಕೋ. ರೂ. ಬಿಡುಗಡೆಯಾಗಿದೆ.
ದಕ್ಷಿಣಕನ್ನಡದ 1,48,241 ರೈತರಿಗೆ 29.64 ಕೋ.ರೂ., ಉಡುಪಿಯ 1,51,133 ರೈತರಿಗೆ 30.22 ಕೋ. ರೂ., ಕೊಡಗಿನ 45,709 ರೈತರಿಗೆ 9.14 ಕೋ. ರೂ. ಲಭಿಸಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣ ರೈತರ ಖಾತೆಗೆ ಜಮೆ ಆಗುತ್ತದೆ. ಒಂದೆರಡು ದಿನಗಳಲ್ಲಿ ಪೂರ್ಣವಾಗಿ ಎಲ್ಲರ ಖಾತೆಗೆ ಹಣ ವರ್ಗಾವಣೆಯಾಗಲಿದೆ. ಆಧಾರ್ ಜೋಡಣೆ ಮೂಲಕ ರಾಜ್ಯದ ಅತೀ ಹೆಚ್ಚು ರೈತರು ಸೌಲಭ್ಯ ಪಡೆದಿದ್ದಾರೆ.
– ಶ್ರೀನಿವಾಸ್ ಚಿಂತಾಲ್, ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ದಾವಣಗೆರೆ