Advertisement

19ರಿಂದ ಕಿಸಾನ್‌ ವಿಶೇಷ ರೈಲು ಸೇವೆ ಆರಂಭ

04:51 PM Sep 16, 2020 | Suhan S |

ಮೈಸೂರು: ರೈತರು ಬೆಳೆದ ಉತ್ಪನ್ನಗಳನ್ನು ವಿವಿಧ ರಾಜ್ಯಗಳ ಮಾರುಕಟ್ಟೆಗೆ ಸುಲಭವಾಗಿ ಸಾಗಿಸಲು ನೈಋತ್ಯ ರೈಲ್ವೆಯು ಸೆ.19 ರಿಂದ ಅ.22 ರವರೆಗೆ (5 ಪ್ರಯಾಣಗಳು)ಕಿಸಾನ್‌ ವಿಶೇಷ ರೈಲಿನ ಸಾಪ್ತಾಹಿಕ ಸೇವೆ ಆರಂಭಿಸಲಿದೆ.

Advertisement

ರೈಲು ಸಂಚಾರ ಮಾಹಿತಿ: ಕಿಸಾನ್‌ ವಿಶೇಷ ರೈಲು ಪ್ರತಿ ಶನಿವಾರ ಸಂಜೆ 4.45ಕ್ಕೆ ಕೆಎಸ್‌ಆರ್‌ ಬೆಂಗ‌ಳೂರಿನಿಂದ ‌ ಹೊರಟು 55 ಗಂಟೆಗಳಲ್ಲಿ ಒಟ್ಟು 2762 ಕಿ.ಮೀ.  ‌ದೂರ ಕ್ರಮಿಸಿ ಸೋಮವಾರ ರಾತ್ರಿ 11.45ಕ್ಕೆ ನಿಜಾಮುದ್ದೀನ್‌ ತಲುಪುತ್ತದೆ. ರೈಲು ತನ್ನ ಪ್ರಯಾಣದಲ್ಲಿ ಮೈಸೂರು, ಹಾಸನ, ಅರಸೀಕೆರೆ, ದಾವಣಗೆರೆ, ಹುಬ್ಬಳ್ಳಿ, ಲೋಂಡಾ, ಬೆಳಗಾವಿ, ಮೀರಜ್‌,

ಪುಣೆ, ಮನ್ಮಾಡ್‌, ಭೂಸಾವಲ್, ಇಟಾರ್ಸಿ, ಭೋಪಾಲ್, ಝಾನ್ಸಿ, ಆಗ್ರಾ ಕ್ಯಾಂಟ್‌ ಮತ್ತು ಮಥುರಾ ನಿಲ್ದಾಣಗಳಲ್ಲಿ ಲೋಡಿಂಗ್‌ ಮತ್ತು ಅನ್‌ ಲೋಡಿಂಗ್‌ಗಾಗಿ ನಿಗದಿತ ವೇಳೆಗೆ ನಿಲ್ಲಲಿದೆ. ಬಳಿಕ ರೈಲುಗಾಡಿ ಪ್ರತಿ ಮಂಗಳವಾರ ‌11 ಗಂಟೆಗೆ ಹಜರತ್‌ ನಿಜಾಮುದ್ದೀನ್‌ನಿಂದ ‌ ಹೊರ‌ಟು ಮೇಲೆ ತಿಳಿಸಿದ ‌ ನಿಲ್ದಾಣಗಳಲ್ಲಿಯೇ ಲೋಡಿಂಗ್‌/ ಅನ್‌ ಲೋಡಿಂಗ್‌ ನಡೆಸಿ ಗುರುವಾರ ‌ಸಂಜೆ

7.45ಕ್ಕೆಬೆಂಗಳೂರಿಗೆ ತಲುಪುತ್ತದೆ. ಕಿಸಾನ್‌ ರೈಲಿನ ಸೇವೆ ಮಂಡ್ಯ, ಮೈಸೂರು, ಹಾಸನ, ಚಿಕ್ಕಮಗಳೂರು, ಕಡೂರು, ದಾವಣಗೆರೆ, ತುಮಕೂರು, ಹುಬ್ಬಳ್ಳಿ, ಹಾವೇರಿ ಮತ್ತು ಇತರ ಜಿಲ್ಲೆಗಳ ರೈತರು ಮತ್ತು ವ್ಯಾಪಾರಿಗಳು ಕೃಷಿ ಉತ್ಪನ್ನವನ್ನು ದೂರದ ಸ್ಥಳಗಳಿಗೆ ತ್ವರಿತವಾಗಿ ಸಾಗಿಸುವ ಅಗತ್ಯತೆ ಪೂರೈಸಲು ಅನುಕೂಲವಾಗಿದೆ. ದೇಶದಲ್ಲಿ ಚಾಲನೆಗೊಳ್ಳುತ್ತಿರುವ ಇಂತಹ ಬಹು ಸರಕು ಸೇವಾ ರೈಲುಗಳಲ್ಲಿ ಇದು ಮೂರನೇಯ ದಾಗಿದ್ದು, ಈ ಕಿಸಾನ್‌ ವಿಶೇಷ ರೈಲಿನ ಸೇವೆಗಳನ್ನು ರೈತರು ಮತ್ತು ವ್ಯಾಪಾರಿಗಳು ಉತ್ತಮವಾಗಿ ಬಳಸಿಕೊಳ್ಳುವಂತೆಕೋರಲಾಗಿದೆ.

ಬುಕ್ಕಿಂಗ್‌ ಹೇಗೆ? :  ಮೈಸೂರು, ಚಾಮರಾಜನಗರ ‌, ಹಾಸನ, ಚಿಕ್ಕಮಗ ‌ಳೂರು, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳಿಂಂದ‌ ಸರಕುಗಳನ್ನು ಕಾಯ್ದಿರಿಸಲು ಗ್ರಾಹಕರು ಸಹಾಯಕ್ಕಾಗಿ ವಾಣಿಜ್ಯ ನಿಯಂತ್ರಣ ಕಚೇರಿಯನ್ನು ಮೊ.9731667984 ರಲ್ಲಿ ಹಾಗೂಇತರೆ‌ ಜಿಲ್ಲೆ ಮತ್ತು ರಾಜ್ಯಗಳಿಂದ ‌ ಬುಕ್ಕಿಂಗ್‌ ಮಾಡಲು ನಂ. 139 ರಲ್ಲಿ ಸಂಪರ್ಕಿಸ ‌ಬಹುದು ಎಂದು ನೈಋತ್ಯ ರೈಲ್ವೆ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕಿ ಪ್ರಿಯಾ ಶೆಟ್ಟಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next