ಧಾರವಾಡ: ಮುಂಬರುವ ದಿನಗಳಲ್ಲಿ ಕರ್ನಾಟಕ ಸೆಂಟ್ರಲ್ ಕೋ-ಆಪರೇಟೀವ್ ಬ್ಯಾಂಕಿನಲ್ಲಿ 90 ಸಾವಿರ ಚಾಲ್ತಿ ಕೃಷಿ ಸಾಲಗಾರರಿಗೂ ರೂಪೆ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಿಸಲಾಗುವುದು ಎಂದು ಕೆಸಿಸಿಬ್ಯಾಂಕ್ ಅಧ್ಯಕ್ಷ ಆಯ್.ಎಸ್.ಪಾಟೀಲ ಹೇಳಿದರು.
ನಗರದ ಕರ್ನಾಟಕ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಸೋಮವಾರ ಬ್ಯಾಂಕಿನ ಎಟಿಎಂ ಕಾರ್ಡ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಕೆಸಿಸಿ ಬ್ಯಾಂಕಿನ ಗ್ರಾಹಕರು ಎಟಿಎಂ ಕಾರ್ಡ್‌ಗಳ ಮೂಲಕ ಇತರೇ ಯಾವುದೇ ರಾಷ್ಟ್ರೀಕೃತ ಬ್ಯಾಂಕುಗಳ ಎಟಿಎಂಗಳ ಮೂಲಕ ಹಣ ಪಡೆಯುವ ಸೌಲಭ್ಯ ಒದಗಿಸಿದಂತಾಗಿದೆ.
ಪ್ರಸ್ತುತ 11 ಸಾವಿರ ಕಾರ್ಡ್‌ಗಳನ್ನು ವಿತರಿಸಲಾಗುತ್ತಿದೆ. ಕಾರ್ಡ್ ಹೊಂದಿರುವ ಬ್ಯಾಂಕಿನ ಗ್ರಾಹಕರು ತಮಗೆ ಅನುಕೂಲವಿರುವ ಯಾವುದೇ ರಾಷ್ಟ್ರೀಕೃತ ಬ್ಯಾಂಕುಗಳ ಎಟಿಎಂಗಳ ಮೂಲಕ ಹಣ ಪಡೆಯಬಹುದಾಗಿದೆ ಎಂದರು. ಕೆಸಿಸಿ ಬ್ಯಾಂಕು ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮುಖಾಂತರ ಗ್ರಾಹಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಾಗುತ್ತಿದೆ.
ಬ್ಯಾಂಕು ಠೇವಣಿ ಸಂಗ್ರಹ, ಸಾಲ ವಿತರಣೆ ಮತ್ತು ವಸೂಲಾತಿಗಳಲ್ಲಿ ಗಣನೀಯ ಸಾಧನೆ ಮಾಡಿದೆ. ಶೂನ್ಯ ಬಡ್ಡಿ ದರದಲ್ಲಿ 80 ಸಾವಿರ ರೈತರಿಗೆ 305 ಕೋಟಿ ರೂ. ಕೃಷಿ ಸಾಲ ನೀಡಲಾಗಿದೆ. 100 ಕೋಟಿ ರೂ. ಗಳನ್ನು ಕೃಷಿಯೇತರ ಸಾಲದ ರೂಪದಲ್ಲಿ ವಿತರಿಸಿದೆ. ವಿಶೇಷವಾಗಿ ಸ್ತ್ರೀ ಶಕ್ತಿ ಸ್ವಹಾಯ ಗುಂಪುಗಳಿಗೆ ಶೇ.4ರ ಬಡ್ಡಿ ದರದಲ್ಲಿ ಸಾಲ ವಿತರಿಸುತ್ತಿದ್ದು, ಈ ಮೂಲಕ ಗ್ರಾಮೀಣ ಭಾಗದ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಿದೆ ಎಂದರು.
ಕಳೆದ ಎರಡೂ¾ರು ವರ್ಷಗಳಲ್ಲಿ ಬ್ಯಾಂಕು ಲಾಭದತ್ತ ಮುನ್ನಡೆದಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲೂ ಲಾಭ ಗಳಿಕೆಯತ್ತ ಸಾಗಿದೆ. ಆಡಳಿತ ಸರ್ಕಾರದ ವಿವಿಧ ಯೋಜನೆಗಳಡಿ ಗ್ರಾಮೀಣ ಭಾಗದ ಜನರಿಗೆ ಆರ್ಥಿಕ ನೆರವು ನೀಡುತ್ತಿದೆ.ಆಡಳಿತ ಮಂಡಳಿಯ ಸತತ ಪರಿಶ್ರಮದಿಂದ ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸುತ್ತಿದೆ ಎಂದರು. ಬ್ಯಾಂಕಿನ ಪ್ರಧಾನ ಶಾಖೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಸಾಂಕೇತಿಕವಾಗಿ ಐವರು ಗ್ರಾಹಕರಿಗೆ ಎಟಿಎಂ ಕಾರ್ಡ್‌ಗಳನ್ನು ವಿತರಿಸಿದರು.
ಬ್ಯಾಂಕ್ ಉಪಾಧ್ಯಕ್ಷ ಶೇಖನಗೌಡ ಪಾಟೀಲ,ನಿರ್ದೇಶಕರು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಾವಿತ್ರಿ ಕಡಿ, ಸಹಕಾರ ಸಂಘಗಳ ಉಪನಿಬಂಧಕ ಕೆ.ಎಲ್.ಶ್ರೀನಿವಾಸ, ಪ್ರಧಾನ ವ್ಯವಸ್ಥಾಪಕ ವಿ.ಬಿ.ಪಾಟೀಲ, ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಕ್ರಮದಲ್ಲಿ ಇದ್ದರು. ಎಸ್.ವಿ.ಹೂಗಾರ ನಿರೂಪಿಸಿದರು. ಅಶೋಕ ಸೋಬಾನದ ವಂದಿಸಿದರು.