Advertisement

“ಸಿದ್ದರಾಮಯ್ಯನವರೇ, ಕಿಸ್ ಕಾ ಸಾತ್ ಕಿಸ್ ಕಾ ವಿಕಾಸ್?”: ಮುಂದುವರಿದ ಟ್ವೀಟ್ ವಾರ್

01:13 PM Oct 19, 2021 | Team Udayavani |

ಬೆಂಗಳೂರು: ಉಪ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ನಡುವಿನ ಮಾತಿನ ಸಮರ ಜೋರಾಗುತ್ತಿದೆ. ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಟ್ವೀಟ್ ವಾರ್ ಇಂದೂ ಮುಂದುವರಿದಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಟೀಕಿಸಿ ರಾಜ್ಯ ಬಿಜೆಪಿ ಘಟಕ ಟ್ವೀಟ್ ಮಾಡಿದೆ.

Advertisement

ಅಲ್ಪಸಂಖ್ಯಾತರ ಅಭಿವೃದ್ಧಿಗೆ ಅನುದಾನ ನೀಡಿದ್ದೆ ಎಂಬ ಸಿದ್ದರಾಮಯ್ಯನವರ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿ, “ಮಾನ್ಯ ಸಿದ್ದರಾಮಯ್ಯ ಅವರೇ, ಯಾರನ್ನು ಓಲೈಸಲು ನೀವು ಈ ಮಾತನ್ನು ಹೇಳಿದ್ದೀರಿ ಎಂದು ರಾಜ್ಯದ ಜನತೆಗೆ ತಿಳಿದಿದೆ. ಚುನಾವಣೆ, ಉಪಚುನಾವಣೆ ಎದುರಾದಾಗಲೆಲ್ಲ ನಿಮ್ಮ ವರಸೆ ಇದೇ ರೀತಿ ಬದಲಾಗುತ್ತದೆ. ಬಹು ಸಂಖ್ಯಾತರ ಮೇಲೆ ದ್ವೇಷ ಕಕ್ಕುವುದು, ಅಲ್ಪಸಂಖ್ಯಾತರನ್ನು ಓಲೈಸುವುದು ನಿಮ್ಮ ಖಯಾಲಿಯಾಗಿ ಬಿಟ್ಟಿದೆ” ಎಂದು ಬಿಜೆಪಿ ಟೀಕಿಸಿದೆ.

ಇದನ್ನೂ ಓದಿ:ಮತಾಂತರಕ್ಕೆ ಪ್ರಯತ್ನ ಆರೋಪ | ಭೈರಿದೇವರಕೊಪ್ಪ ಚರ್ಚ್‌ನ ಪಾಸ್ಟರ್‌ ಸೋಮು ಬಂಧನ 

ಸಿದ್ದರಾಮಯ್ಯ ಅವರೇ, ಈ ರೀತಿ ಸುತ್ತಿ ಬಳಸಿ ಮಾತನಾಡುವ ಬದಲು, ಬಹುಸಂಖ್ಯಾತರ ತುಳಿದು, ಅಲ್ಪಸಂಖ್ಯಾತರಿಗೆ ಹೆಚ್ಚಿನ ಅನುದಾನ ನೀಡಿದ್ದೇನೆ. ಹೀಗಾಗಿ ಮುಂದಿನ ಬಾರಿ ಚಾಮರಾಜಪೇಟೆಗೆ ವಲಸೆ ಹೋಗುತ್ತೇನೆ ಎಂದು ನೇರವಾಗಿಯೇ ಹೇಳಬಹುದಲ್ಲವೇ ಎಂದು ಪ್ರಶ್ನಿಸಿದೆ.

ಇದೇ ಖಡ್ಗದ ಮೂಲಕ ರಾಜ್ಯದಲ್ಲಿ ಹಿಂದೂಗಳ ಮಾರಣ ಹೋಮ ನಡೆಸುವುದಕ್ಕೆ ಸಿದ್ದರಾಮಯ್ಯ  ಪ್ರೋತ್ಸಾಹ ನೀಡಿದ್ದರು. ಒಂದು ವರ್ಗದ ಓಲೈಕೆಗಾಗಿ ಮಾಡಿದ ಪ್ರಹಸನದಿಂದಾಗಿಯೇ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರ ಬಿಟ್ಟು ಬಾದಾಮಿಗೆ ಓಡುವಂತಾಗಿತ್ತು. ಆದರೂ, ಸಿದ್ದರಾಮಯ್ಯ ಅವರಿಗೆ ಇನ್ನೂ ಬುದ್ದಿ ಬಂದಿಲ್ಲ ಎಂದು ಬಿಜೆಪಿ ವ್ಯಂಗ್ಯವಾಡಿದೆ.

Advertisement

ಬಾದಾಮಿಯಿಂದ ಮತ್ತೆ ವಲಸೆ ಹೋಗಲು ಸಿದ್ದರಾಮಯ್ಯ ಈಗಿನಿಂದಲೇ ತಯಾರಿ ನಡೆಸುತ್ತಿದ್ದಾರೆ. ಅದಕ್ಕಾಗಿ ಈಗ ಮತ್ತೆ ಓಲೈಕೆ ರಾಜಕಾರಣದ ಹಾದಿ ಹಿಡಿದಿದ್ದಾರೆ. ಈ ಮೂಲಕ ಚಾಮರಾಜಪೇಟೆ ಕ್ಷೇತ್ರಕ್ಕೆ ವಲಸೆಗೆ ಹೋಗಲು ಸಿದ್ಧತೆ ನಡೆಸಿದ್ದು ನಿಜವಲ್ಲವೇ? ಸಿದ್ದರಾಮಯ್ಯನವರೇ, ಕಿಸ್ ಕಾ ಸಾತ್ ಕಿಸ್ ಕಾ ವಿಕಾಸ್ ಎಂದು ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next