Advertisement

ಕೀರ್ತಿ ಕಲಾಪಂ

03:45 AM Jun 23, 2017 | Team Udayavani |

ಪಿಂಕ್‌ ಚಿತ್ರದ ಮೂವರು ನಾಯಕಿಯರ ಪೈಕಿ ಒಬ್ಬಳಾಗಿರುವ ಕೀರ್ತಿ ಕುಲ್ಹರಿ ಈಗ ದೊಡ್ಡ ಬ್ರೇಕ್‌ ಸಿಗುವ ನಿರೀಕ್ಷೆಯಲ್ಲಿದ್ದಾಳೆ. ಮಧುರ್‌ ಭಂಡಾರ್‌ಕರ್‌ ನಿರ್ದೇಶಿಸುತ್ತಿರುವ ಇಂದು ಸರ್ಕಾರ್‌ನಲ್ಲಿ ಕೀರ್ತಿಗೊಂದು ಪ್ರಮುಖ ಪಾತ್ರವಿದೆ. ಈಗಲೇ ಭಾರೀ ಕುತೂಹಲ ಕೆರಳಿಸಿರುವ ಈ ಚಿತ್ರ ಹಿಟ್‌ ಆದರೆ ಕೀರ್ತಿ ಬಿಗ್‌ ಬ್ಯಾನರ್‌ ನಾಯಕಿ ಎಂದು ಗುರುತಿಸಲ್ಪಡಲಿದ್ದಾಳೆ. ಹಾಗೆ ನೋಡಿದರೆ ಪಿಂಕ್‌ ಚಿತ್ರವೇ ಕೀರ್ತಿಗೆ ಬ್ರೇಕ್‌ ನೀಡಬೇಕಿತ್ತು. ಆದರೆ, ಈ ಚಿತ್ರದ ಯಶಸ್ಸಿನ ಬಹುಪಾಲು ತಾಪಸಿ ಪನ್ನುವಿಗೆ ಸಂದಿತು. ಉಳಿದಿಬ್ಬರು ಪ್ರಮೋಗಳಿಗೆ ಮತ್ತು ವಿಮರ್ಶೆಗಳಿಗೆ ಮಾತ್ರ ಸೀಮಿತರಾದರು. ಹೀಗಾಗಿ ಪಿಂಕ್‌ ಹಿಟ್‌ ಆದರೂ ಕೀರ್ತಿ ಬೆಳಗಲಿಲ್ಲ. ಹಾಗೆಂದು ಪಿಂಕ್‌ ಕೀರ್ತಿಯ ಮೊದಲ ಚಿತ್ರವೇನಲ್ಲ. ಏಳು ವರ್ಷದ ಹಿಂದೆಯೇ ಬಾಲಿವುಡ್‌ಗೆ ಅವಳ ಆರಂಗೇಟ್ರಂ ಆಗಿದೆ. 

Advertisement

ಖೀಚಿx-ದ ಮೂವಿ ಅವಳು ನಟಿಸಿದ ಮೊದಲ ಚಿತ್ರ. ಅನಂತರ ಸೈತಾನ್‌, ರೈಸ್‌ ಆಫ್ ದ ಝಾಂಬಿ, ಸೂಪರ್‌ ಸೆ ಊಪರ್‌, ಜಲ್‌, ಕ್ಯೂಟ್‌ ಕಮೀನಾ, ಪಚತ್ತರ್‌  ಚಿತ್ರಗಳಲ್ಲಿ ನಟಿಸಿದರೂ ಗಮನ ಸೆಳೆಯುವಲ್ಲಿ ವಿಫ‌ಲಳಾಗಿದ್ದಳು. ಇಂದು ಸರ್ಕಾರ್‌ ಹೆಸರೇ ಹೇಳುವಂತೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯ ಕುರಿತಾದ ಚಿತ್ರ. ತುರ್ತು ಪರಿಸ್ಥಿತಿಯ ಎರಡು ವರ್ಷದ ಅವಧಿಯನ್ನು ಎತ್ತಿಕೊಂಡು ಭಂಡಾರ್‌ಕರ್‌ ಚಿತ್ರಕತೆ ತಯಾರಿಸಿದ್ದಾರೆ. ಸಂಜಯ್‌ ಗಾಂಧಿಯಾಗಿ ನೀಲ್‌ ನಿತಿನ್‌ ಮುಖೇಶ್‌ ನಟಿಸುತ್ತಿದ್ದಾರೆ. ಕೀರ್ತಿಗೆ ಬಂಡಾಯ ಕವಯತ್ರಿಯ ಪಾತ್ರವಿದೆ. ಸಂಜಯ್‌ ಮತ್ತು ಈ ಕವಯತ್ರಿಯೇ ಚಿತ್ರದ ಮುಖ್ಯ ಪಾತ್ರಗಳಂತೆ. ರಾಜಕೀಯ ಹಿನ್ನೆಲೆಯ ಚಿತ್ರವಾಗಿರುವುದರಿಂದ ಸಹಜವಾಗಿಯೇ ಬಹಳ ಕುತೂಹಲ ಕೆರಳಿಸಿದೆ. 

ಅಂದ ಹಾಗೆ ಕೀರ್ತಿಯ ಪರಿವಾರ ಸೇನೆಯ ಹಿನ್ನೆಲೆ ಹೊಂದಿದೆ. ತಂದೆ ನೌಕಾಪಡೆಯ ಅಧಿಕಾರಿ. ಆದರೆ ಮುಂಬಯಿಯಲ್ಲಿ ಹುಟ್ಟಿ ಬೆಳೆದ ಕೀರ್ತಿಗೆ ಬಾಲ್ಯದಿಂದಲೂ ಬಣ್ಣದ ಲೋಕದ ಆಕರ್ಷಣೆ. ಹೀಗಾಗಿ, ಮೊದಲು ನಾಟಕಗಳಲ್ಲಿ ಅಭಿನಯ, ಬಳಿಕ ಜಾಹೀರಾತುಗಳಲ್ಲಿ ಬಣ್ಣ ಹಚ್ಚಿದಳು. ಇದರ ಬೆನ್ನಿಗೆ ಮಾಡೆಲಿಂಗ್‌ ಆಯಿತು. ಅನಂತರ ಸಿನೆಮಾ ಲೋಕ ಕರೆಯಿತು. ಮೂರು ಮ್ಯೂಸಿಕ್‌ ಆಲ್ಬಂಗಳಲ್ಲೂ ನಟಿಸಿದ್ದಾಳೆ. ಗಂಭೀರವಾದ ಪಾತ್ರಗಳೆಂದರೆ ಕೀರ್ತಿಗೆ ಬಹಳ ಇಷ್ಟವಂತೆ.

Advertisement

Udayavani is now on Telegram. Click here to join our channel and stay updated with the latest news.

Next