Advertisement

Rajasthan; ಮೋದಿಗೆ ಕೊಟ್ಟ ಭರವಸೆ ಈಡೇರದ್ದಕ್ಕೆ ಪ್ರಭಾವಿ ಸಚಿವ ರಾಜೀನಾಮೆ

08:03 PM Jul 04, 2024 | Team Udayavani |

ಜೈಪುರ : ರಾಜಸ್ಥಾನದ ಹಿರಿಯ ಬಿಜೆಪಿ ನಾಯಕ ಕಿರೋಡಿ ಲಾಲ್ ಮೀನಾ ಅವರು ಜೈಪುರದಲ್ಲಿ ನಡೆದ ಸಾರ್ವಜನಿಕ ಪ್ರಾರ್ಥನಾ ಸಭೆಯಲ್ಲಿ ಸಚಿವ ಸ್ಥಾನಕ್ಕೆ ಮತ್ತು ಪಕ್ಷದ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ಘೋಷಿಸಿದ್ದಾರೆ.

Advertisement

72 ರ ಹರೆಯದ ಮೀನಾ ಅವರು ರಾಜಸ್ಥಾನ ಸರಕಾರದಲ್ಲಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸೇರಿದಂತೆ ಹಲವು ಖಾತೆಗಳನ್ನು ಹೊಂದಿದ್ದರು.  ಕಳೆದ ತಿಂಗಳು ಲೋಕಸಭಾ ಚುನಾವಣೆಯ ಮತ ಎಣಿಕೆಗೆ ಮುನ್ನ, ಬಿಜೆಪಿಯು ಪೂರ್ವ ರಾಜಸ್ಥಾನದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತನಗೆ ನಿಯೋಜಿಸಿದ ಏಳು ಸ್ಥಾನಗಳಲ್ಲಿ ಯಾವುದನ್ನಾದರೂ ಕಳೆದುಕೊಂಡರೆ ತಾನು ಸಚಿವ ಸ್ಥಾನ ತ್ಯಜಿಸುವುದಾಗಿ ಹೇಳಿದ್ದರು.

”ಪ್ರಧಾನಿಯವರು ನನ್ನೊಂದಿಗೆ ಮಾತನಾಡಿ ಏಳು ಸ್ಥಾನಗಳ ಪಟ್ಟಿಯನ್ನು ಕೊಟ್ಟಿದ್ದರು. ನಾನು ಶ್ರಮಿಸಿದ್ದೇನೆ ಪಕ್ಷವು ಆ ಏಳರಲ್ಲಿ ಒಂದು ಸ್ಥಾನವನ್ನು ಕಳೆದುಕೊಂಡರೂ ನಾನು ಸಚಿವ ಸ್ಥಾನವನ್ನು ತೊರೆಯುತ್ತೇನೆ “ಎಂದು ಹೇಳಿದ್ದರು.

ಸಿಎಂ ಭಜನ್‌ಲಾಲ್ ಶರ್ಮ ಅವರು ಮೀನಾ ಅವರಿಗೆ ರಾಜೀನಾಮೆ ನಿರ್ಧಾರ ಹಿಂಪಡೆಯುವಂತೆ ಮನವೊಲಿಸಿದರೂ ನಿರ್ಧಾರದಿಂದ ಹಿಂದೆ ಸರಿದಿಲ್ಲ.

ಬಿಜೆಪಿಯು 2014 ರಲ್ಲಿ ರಾಜ್ಯದಲ್ಲಿ 25 ಸ್ಥಾನಗಳಲ್ಲಿ 24 ಅನ್ನು ಗೆದ್ದುಕೊಂಡಿತ್ತು (ಒಂದು ಸ್ಥಾನಮೈತ್ರಿಕೂಟ ಗೆದ್ದಿತ್ತು), ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಅಧಿಕಾರದಿಂದ ಕೆಳಗಿಳಿಸಿತ್ತು.

Advertisement

ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ 11 ಸ್ಥಾನಗಳನ್ನು ಗೆದ್ದುಕೊಂಡಿತು.ಬಿಜೆಪಿ 14ಸ್ಥಾನಗಳನ್ನು ಮಾತ್ರ ಗೆದ್ದು ಭಾರೀ ಶಾಕ್ ಅನುಭವಿಸಿತ್ತು. ಮೀನಾ ಅವರಿಗೆ ಗೆಲ್ಲಿಸುವ ಜವಾಬ್ದಾರಿಯನ್ನು ವಹಿಸಲಾಗಿದ್ದ ಭರತ್‌ಪುರ್, ಕರೌಲಿ-ಧೋಲ್‌ಪುರ್, ದೌಸಾ ಮತ್ತು ಟೋಂಕ್-ಸವಾಯಿ ಮಾಧೋಪುರ್ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿತ್ತು.

ಈ ಹಿಂದೆ ಮೀನಾ ಅವರು ಪ್ರತಿನಿಧಿಸುತ್ತಿದ್ದ ದೌಸಾದಲ್ಲಿ ಕಾಂಗ್ರೆಸ್‌ನ ಮುರಾರಿ ಮೀನಾ ಅವರು ಬಿಜೆಪಿಯ ಕನ್ಹಯ್ಯಾ ಲಾಲ್ ಮೀನಾ ಅವರನ್ನು 2.37 ಲಕ್ಷ ಮತಗಳಿಂದ ಸೋಲಿಸಿ ಕಾಂಗ್ರೆಸ್ ನಾಯಕ ರಾಜೇಶ್ ಪೈಲಟ್ ಅವರ ಭದ್ರಕೋಟೆಯನ್ನು ಮರಳಿ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next