Advertisement

ಕಿರಿಕೊಡ್ಲಿ : ಡಾ|ಶಿವಕುಮಾರ ಸ್ವಾಮೀಜಿ ಜಯಂತಿ, ಗುರುನಮನ

03:33 AM Apr 05, 2019 | Team Udayavani |

ಶನಿವಾರಸಂತೆ: ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀಗುರುಸಿದ್ದ ಸ್ವಾಮಿ ವಿದ್ಯಾಪೀಠದಲ್ಲಿ ನಡೆದಾಡುವ ದೇವರು ಕರ್ನಾಟಕ ರತ್ನ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಗಳ 112ನೇ ಜಯಂತಿ ಮತ್ತು ಗುರುನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ವಿದ್ಯಾಪೀಠ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಎಸ್‌ಎಸ್‌ಕೆ ವಿದ್ಯಾಸಂಸ್ಥೆ ಅಧ್ಯಕ್ಷ ಹಾಗೂ ಕಿರಿಕೊಡ್ಲಿ ಮಠಧೀಶರಾದ ಸದಾಶಿವಸ್ವಾಮೀಜಿ ಅವರು ಸಿದ್ಧ‌ªಗಂಗಾ ಸ್ವಾಮಿಜೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ,ಎಪ್ರೀಲ್‌ 1ನೇ ದಿನಾಂಕವನ್ನು ಜಗತ್ತಿನ ದೇಶಗಳಲ್ಲಿ ಮೂರ್ಖರ ದಿನವಾಗಿ ಆಚರಿಸಿದರೆ ಕರ್ನಾಟಕದ ಜನತೆ ಅಂದು ಪವಿತ್ರದಿನ ಅಥವಾ ವಿವಿಧ ದಾಸೋಹ ದಿನವಾಗಿ ಆಚರಿಸುತ್ತಿದೆ ಇದಕ್ಕೆ ಕಾರಣ ನಡೆದಾಡುವ ದೇವರಾದ ಸಿದ್ದಗಂಗಾ ಶ್ರೀಗಳ ಜನ್ಮದಿನವಾಗಿದೆ ಎಂದರು. ಸಿದ್ಧಗಂಗಾ ಶ್ರೀಗಳ ಸಮಾಜದ ದೀನದಲಿತರ, ಬಡವರ್ಗದವರ ಶಿಕ್ಷಣಕ್ಕಾಗಿ ನೂರು ವರ್ಷಗಳ ಹಿಂದೆಯೇ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಮಾಡಿ ಜಾತಿ ಮತ ಬೇದ ಬಾವವಿಲ್ಲದೆ ಲಕ್ಷಾಂತರ ಮಕ್ಕಳಿಗೆ ವಿದ್ಯಾದಾನದ ಆಶ್ರಯ ಕೊಟ್ಟು ಸಲಹಿದ್ದಾರೆ ಪ್ರತಿದಿನ ಸಾವಿರಾರು ಮಕ್ಕಳಿಗೆ ದಾಸೋಹದ ಮೂಲಕವು ಸಲಹಿದ್ದಾರೆ ಎಂದರು.

Advertisement

ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆ ಪ್ರಾರಂಭ ಮಾಡಿ ಗ್ರಾಮೀಣ ಬಡ ಜನರ ವಿದ್ಯಾರ್ಥಿಗಳಿಗೆ ಸಿದ್ಧಗಂಗಾ ಶ್ರೀಗಳು ಆಶ್ರಯಧಾತರಾದರು, 111 ವರ್ಷ ತುಂಬು ಜೀವನ ನಡೆಸಿ ಜಗತ್ತಿನ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿದ ಶ್ರೀಗಳು ತಮ್ಮ ಜೀವಿತ ಅವಧಿಯಲ್ಲಿ ಸಂಪೂರ್ಣ ಕಾಲವನ್ನು ಸಮಾಜದ ಒಳಿತಿಗಾಗಿ ಮೀಸಲಿಟ್ಟು ಬದುಕಿದವರು ಇಂಥಹವರ ಜಯಂತಿ ಆಚರಣೆ ನಮ್ಮ ನಿಮ್ಮೆಲ್ಲರ ಸೌಭಾಗ್ಯ ವಾಗಿದೆ.

ಈ ನಿಟ್ಟಿನಲ್ಲಿ ಸಿದ್ಧಗಂಗಾ ಶ್ರೀಗಳು ಜನಿಸಿದ ದಿನವನ್ನು ಗುರು ನಮನ ಕಾರ್ಯಕ್ರಮವಾಗಿ ಆಚರಿಸಲಾ ಗುತ್ತಿದೆ, ಶ್ರೀಗಳು ಹಾಕಿಕೊಟ್ಟ ಸನ್ಮಾರ್ಗ ದಲ್ಲಿ ನಾವೆಲ್ಲರೂ ಸಮಾಜವನ್ನು ಮುನ್ನಡೆಸ ಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಕೆ.ಪಿ.ನಂಜುಂಡಯ್ಯ, ಪ್ರಾಂಶುಪಾಲೆ ಕೆ.ಎಸ್‌.ತನುಜ ವಿದ್ಯಾಸಂಸ್ಥೆ ಅದ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next