ನವದೆಹಲಿ: “ನ್ಯಾಯಮೂರ್ತಿಗಳನ್ನು ಚುನಾವಣೆಯ ಮೂಲಕ ಆಯ್ಕೆ ಮಾಡಲಾಗದು. ಜತೆಗೆ ಅವರನ್ನು ಸಾರ್ವಜನಿಕವಾಗಿ ಮೌಲ್ಯಮಾಪನ ಮಾಡಲೂ ಸಾಧ್ಯವಿಲ್ಲ. ಆದರೆ, ಅವರು ಯಾವ ರೀತಿ ತೀರ್ಪು ನೀಡುತ್ತಾರೆ ಎನ್ನುವುದನ್ನು ಜನರು ನೋಡಿ ಮೌಲ್ಯಮಾಪನ ಮಾಡುತ್ತಾರೆ’
ಹೀಗೆಂದು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ. ನವದೆಹಲಿಯ ತೀಜ್ ಹಜಾರಿ ಕೋರ್ಟ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಸಾಮಾಜಿಕ ಜಾಲತಾಣಗಳ ಪ್ರಭಾವ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಾಮಾನ್ಯ ಜನರೂ ನ್ಯಾಯಮೂರ್ತಿಗಳು ಯಾವ ರೀತಿ ತೀರ್ಪು ನೀಡುತ್ತಿದ್ದಾರೆ ಎಂಬುದನ್ನು ಗಮನಿಸುತ್ತಿದ್ದಾರೆ. ಜತೆಗೆ ಸರ್ಕಾರವನ್ನೂ ಪ್ರಶ್ನಿಸುತ್ತಾರೆ. ನಾವು ತಪ್ಪು ಕೆಲಸ ಮಾಡಿದರೆ ಟೀಕಿಸುತ್ತಾರೆ’ ಎಂದರು.
“ಜನರು ಚುನಾವಣೆಯಲ್ಲಿ ಸರ್ಕಾರ ನಡೆಸಲು ಆಯ್ಕೆ ಮಾಡಿದರೆ ಇರುತ್ತೇವೆ. ಇಲ್ಲದಿದ್ದರೆ ಪ್ರತಿಪಕ್ಷ ಸ್ಥಾನದಲ್ಲಿ ಇರುತ್ತೇವೆ. ಆದರೆ ನ್ಯಾಯಮೂರ್ತಿ ಹುದ್ದೆಯಲ್ಲಿ ಇರುವವರು ಚುನಾವಣೆಯಲ್ಲಿ ಸ್ಪರ್ಧಿಸಬೇಕಾಗಿಲ್ಲ. ಅವರನ್ನು ಸಾರ್ವಜನಿಕರು ಮೌಲ್ಯಮಾಪನ ಮಾಡುವುದೂ ಇಲ್ಲ’ ಎಂದರು ರಿಜಿಜು.
ಜಡ್ಜ್ಗಳ ನೇಮಕದಲ್ಲಿ ಕೇಂದ್ರ ಮತ್ತು ನ್ಯಾಯಾಂಗ ನಡುವೆ ಭಿನ್ನಾಭಿಪ್ರಾಯ ಇರುವಂತೆಯೇ ಕಾನೂನು ಸಚಿವರಿಂದ ಮತ್ತೂಂದು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: 2 ವರ್ಷಗಳಿಂದ ಸ್ಥಗಿತಗೊಂಡಿದ್ದ ಕ್ಯಾಮನಹಳ್ಳಿ ಶ್ರೀ ಆಂಜನೇಯ ಸ್ವಾಮಿ ದನಗಳ ಜಾತ್ರೆಗೆ ಮತ್ತೆ ಕಳೆ