Advertisement

Biopic: ಕಿರಣ್‌ಬೇಡಿ ಆತ್ಮಕಥೆ ಶೀಘ್ರ ತೆರೆಗೆ: ಮೋಷನ್‌ ಪೋಸ್ಟರ್‌ ರಿಲೀಸ್‌

10:37 PM Jun 12, 2024 | Team Udayavani |

ಮುಂಬೈ: ಭಾರತದ ಮೊದಲ ಮಹಿಳಾ ಐಪಿಎಸ್‌ ಅಧಿಕಾರಿ ಡಾ.ಕಿರಣ್‌ ಬೇಡಿ ಅವರ ಆತ್ಮಕಥೆ ಸಿನಿಮಾ ಆಗಿ ತೆರೆಕಾಣಲು ಸಜ್ಜಾಗಿದೆ.

Advertisement

“ಬೇಡಿ: ದ ನೇಮ್‌ ಯೂ ನೋ, ದಿ ಸ್ಟೋರಿ ಯೂ ಡೋಂಟ್‌’ ಸಿನಿಮಾದ ಮೋಷನ್‌ ಪೋಸ್ಟರ್‌ ಬುಧವಾರ ಬಿಡುಗಡೆಗೊಂಡಿದೆ. ಖ್ಯಾತ ನಿರ್ದೇಶಕ ಕುಶಾಲ್‌ ಚಾವ್ಲಾ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಈ ಸಿನಿಮಾವನ್ನು ಡ್ರೀಮ್‌ ಸ್ಲೇಟ್‌ ಪಿಕ್ಚರ್ ನಿರ್ಮಾಣ ಮಾಡುತ್ತಿದೆ.

2025ಕ್ಕೆ 50ನೇ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯೆಂದೇ ಸಿನಿಮಾವನ್ನು ಬಿಡುಗಡೆ ಮಾಡಲು ಉದ್ದೇಶಿಸಿರುವುದಾಗಿ ಚಿತ್ರ ತಂಡ ಹೇಳಿದೆ. ಇನ್ನು ಈ ಬಗ್ಗೆ ಕಿರಣ್‌ ಬೇಡಿ ಮಾತನಾಡಿ, “ಇದು ಬರೀ ನನ್ನ ಕಥೆಯಲ್ಲ, ಭಾರತದಲ್ಲೇ ಹುಟ್ಟಿ, ಇಲ್ಲಿಯೇ ಬೆಳೆದು, ಭಾರತೀಯರಿಗಾಗಿಯೇ ವೃತ್ತೀ ಜೀವನದ ಪೂರ್ತಿ ಶ್ರಮಿಸಿದ ಭಾರತೀಯ ಮಹಿಳೆಯ ಕಥೆ’ ಎಂದಿದ್ದಾರೆ.

ಇದನ್ನೂ ಓದಿ: Lok Sabha Election: ಚುನಾವಣೆಗೆ 1,750 ಬಾರಿ ವಾಯುಪಡೆ ವಿಮಾನಗಳ ಹಾರಾಟ!

Advertisement

Udayavani is now on Telegram. Click here to join our channel and stay updated with the latest news.

Next