Advertisement
ಸರ್ವೋಚ್ಚ ನ್ಯಾಯಲಯದ ತೀರ್ಪಿನ ಮೇರೆಗೆ 2005ರಲ್ಲಿ ಕುದುರೆಮುಖ ಕಂಪೆನಿಯು ಗಣಿಗಾರಿಕೆಯನ್ನು ಸ್ಥಗಿತಗೊಳಿಸಲಾಗಿದ್ದು, ಸಂಸ್ಥೆಯು ತನ್ನದೇ ಆದ ಸ್ವಂತ ಗಣಿಯನ್ನು ಹೊಂದಿರದ ಕಾರಣ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಮಾರುಕಟ್ಟೆಯ ಏರುಪೇರಿನಿಂದಾಗಿ ಊದು ಕುಲುಮೆ ಘಟಕವೂ ಸ್ಥಗಿತಗೊಂಡು ಕಾರ್ಮಿಕರ ಬದುಕು ಅತಂತ್ರ ಸ್ಥಿತಿ ತಲುಪಿತು. ಆದರೂ ಸಹ ಪ.ಜಾ./ಪ.ಪಂ. ನೌಕರರ ಸಮರ್ಪಣ ಮನೋಭಾವದ ಅವಿರತ ಶ್ರಮದಿಂದ ಸಮಸ್ಯೆಗಳನ್ನು ನಿಭಾಯಿಸಿಕೊಂಡು ಹೋಗುವಲ್ಲಿ ಸಂಸ್ಥೆ ಯಶಸ್ವಿಯಾಗಿದೆ ಎಂದರು.
ಕರ್ನಾಟಕ ಸರಕಾರ ಕೆಐಓಸಿಎಲ್ ಸಂಸ್ಥೆಗಾಗಿ, ಬಳ್ಳಾರಿಯ ದೇವರಾರು ಗಣಿಯನ್ನು ಹಂಚಿಕೆ ಮಾಡಿದ್ದು, ಗಣಿಗಾರಿಕೆ ನಡೆಸಲು ಬೇಕಾಗುವಂತಹ ಆದೇಶವನ್ನು ಆದಷ್ಟು ಬೇಗ ನೀಡಲು ಕರ್ನಾಟಕ ಸರಕಾರವನ್ನು ಒತ್ತಾಯಿಸಬೇಕು. ಯಾರಾದರೂ ನೌಕರ ಆಕಸ್ಮಿಕವಾಗಿ ಮರಣ ಹೊಂದಿದಲ್ಲಿ, ಅನುಕಂಪದ ಆಧಾರದ ಮೇಲೆ ಅವಲಂಬಿತರಿಗೆ ನೀಡುತ್ತಿದ್ದ ಉದ್ಯೋಗವನ್ನು ತಡೆಹಿಡಿಯಲಾಗಿರುವುದನ್ನು ತೆರವುಗೊಳಿಸಿ, ಮೃತರ ಕುಟುಂಬ ನಿರಾತಂಕದಿಂದ ಬಾಳಲು ಅನುಕೂಲ ಮಾಡಿಕೊಡಬೇಕು. ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿಗೊಳಿಸಬೇಕು ಮುಂತಾದ ಬೇಡಿಕೆಗಳ ಮನವಿಯನ್ನು ನಿಯೋಗ ಸಲ್ಲಿಸಿತು. ನಿಯೋಗದಲ್ಲಿ ಕೆಐಓಸಿಎಲ್ ಪ.ಜಾ./ಪ.ಪಂಗಡದ ಪ್ರಧಾನ ಕಾರ್ಯದರ್ಶಿ ರಾಜಶೇಖರ್, ಶಾಖಾ ಅಧ್ಯಕ್ಷ ಶಂಕರಪ್ಪ, ಪದಾಧಿಕಾರಿಗಳಾದ ನಾರಾಯಣ ಸ್ವಾಮಿ, ಕೆ.ಜೆ. ಕೃಷ್ಣಪ್ಪ, ಹನುಮಂತಪ್ಪ, ನಾರಾಯಣ ಡಿ. ಉಪಸ್ಥಿತರಿದ್ದರು.