Advertisement

ಪೆಲೆಟ್‌ಗಳ ಉತ್ಪಾದನೆಯಲ್ಲಿ ಕೆಐಒಸಿಎಲ್‌ ದಾಖಲೆ

01:12 PM Feb 03, 2018 | |

ನವದೆಹಲಿ: ಕುದುರೆಮುಖ ಕಬ್ಬಿಣ ಮತ್ತು ಅದಿರು ಕಂಪೆನಿ ಲಿ., (ಕೆಐಒಸಿಎಲ್‌) ಪ್ರಸಕ್ತ ಸಾಲಿನ ತ್ತೈಮಾಸಿಕ ಹಾಗೂ 2017-18ನೇ ಸಾಲಿನ ಡಿ.31 ಅಂತ್ಯದ ಒಂಬತ್ತು ತಿಂಗಳಲ್ಲಿ ಮಾಡಿರುವ ಸಾಧನೆ ವಿವರಗಳನ್ನು ಬಿಡುಗಡೆ ಮಾಡಿದೆ.

Advertisement

ಆರ್ಥಿಕ ವರ್ಷದ ತೃತೀಯ ತ್ತೈಮಾಸಿಕ ಪೂರ್ಣಗೊಂಡ ವೇಳೆಯಲ್ಲಿ ಪೆಲೆಟ್ಸ್‌ (ಅದಿರು ಗುಂಡುಗಳ) ಉತ್ಪಾದನೆಯಲ್ಲಿ ಶೇ.31 ರಷ್ಟು ಹೆಚ್ಚಳ ಮಾಡಿದೆ. ಅಂದರೆ 0.635 ಮಿಲಿಯನ್‌ ಟನ್‌ಗಳ ಪೆಲೆಟ್ಸ್‌ ಉತ್ಪಾದನೆಯಾಗಿದ್ದು 0.638 ಮಿಲಿಯನ್‌ ಟನ್‌ ಮಾರಾಟ ಮಾಡಿ ದಾಖಲೆ ನಿರ್ಮಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.19 ರಷ್ಟು  ಮಾತ್ರ ಉತ್ಪಾದನೆ ಮಾಡಿತ್ತೆಂದು ತಿಳಿದುಬಂದಿದೆ.

ತ್ತೈಮಾಸಿಕ ಅವಧಿಯ ನಿವ್ವಳ ಲಾಭ 12.92 ಕೋಟಿ ರೂ.ಗಳಾಗಿದ್ದು ಕಳೆದ ವರ್ಷ ಇದೇ ಅವಧಿಯ 0.11 ಕೋಟಿ ರೂ.ಗೆ ಹೋಲಿಸಿದ್ದಲ್ಲಿ  12.81 ಕೋಟಿ ರೂ. ಅಧಿಕ ಲಾಭ ಮಾಡಿದೆ. ಹಲವು ವರ್ಷಗಳ ನಂತರ ಸಂಸ್ಥೆಯ ಸುಧಾರಿತ ಮಾರಾಟ ಬೆಲೆ ಮತ್ತು ವೆಚ್ಚ ಉತ್ತಮಗೊಳ್ಳುವಿಕೆಯಿಂದಾಗಿ ಪೆಲೆಟ್‌ ಘಟಕದ ಕಾರ್ಯನಿರ್ವಹಣಾ ಲಾಭ 4.09 ಕೋಟಿ ರೂ. ಆಗಿದೆ.

ಕಳೆದ ಒಂಬತ್ತು ತಿಂಗಳ ಬೆಳವಣಿಗೆಯಲ್ಲಿ ಸಂಸ್ಥೆ ಅಭೂತಪೂರ್ವ ಸಾಧನೆ ಮಾಡಿದ್ದು 1.700 ಮಿಲಿಯನ್‌ ಟನ್‌ ಪೆಲೆಟ್ಸ್‌ ಉತ್ಪಾದನೆ ಮಾಡಿ 1.763 ಮಿಲಿಯನ್‌ ಟನ್‌ ಮಾರಾಟ ಮಾಡುವ ಮೂಲಕ ಶೇ.134 ರಷ್ಟು ಅಭಿವೃದ್ಧಿ ಕಂಡಿದೆ. ಒಟ್ಟಾರೆ ಕೆಐಒಸಿಎಲ್‌ನ ನವಮಾಸದ ತೆರಿಗೆ ನಂತರದ ಲಾಭ 21.43 ಕೋಟಿ ರೂ.ಗಳಾಗಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ ಕೇವಲ 1.10 ಕೋಟಿ ರೂ. ಮಾತ್ರ ಲಾಭ ಮಾಡಿತ್ತು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next