Advertisement

ಪೆಲೆಟ್‌ ಉತ್ಪಾದನೆಯಲ್ಲಿಕೆಐಒಸಿಎಲ್‌ ದಾಖಲೆ

02:00 PM Apr 04, 2018 | Team Udayavani |

ಬೆಂಗಳೂರು: ಸಾರ್ವಜನಿಕ ವಲಯದ ಕಬ್ಬಿಣ ಅದಿರು ಗಣಿಗಾರಿಕೆಯ ಪ್ರವರ್ತಕ, ಬೆನಿಫಿಕೇಷನ್‌ ಮತ್ತು ಪೆಲೆಟೈಸೇಷನ್‌ ತಂತ್ರಜ್ಞಾನದ ಕುದುರೆ ಮುಖ ಕಬ್ಬಿಣ ಮತ್ತು ಅದಿರು ಕಂಪನಿ ಲಿಮಿಟೆಡ್‌ (ಕೆಐಒಸಿಎಲ್‌) ಕೆಲವು ಐರನ್‌ ಆಕ್ಷೆಡ್‌ ಪೆಲೆಟ್ಸ್‌ ಉತ್ಪಾದನೆ ಹಾಗೂ ಮಾರಾಟದಲ್ಲಿ ದಾಖಲೆ ನಿರ್ಮಿಸಿದೆ.

Advertisement

ಇತೀಚೆಗೆ ನಗರದ ಕಾರ್ಪೋರೇಟ್‌ ಕಚೇರಿ ಯಲ್ಲಿ ನಡೆದ 43ನೇ ಕಂಪನಿ ಡೇ ಕಾರ್ಯಕ್ರಮವನ್ನು ಸಿಎಂಡಿ ಎಂ.ವಿ. ಸುಬ್ಬರಾವ್‌ ಅವರು ಉದ್ಘಾಟಿಸಿ ಮಾತನಾಡಿದರು. ಕಂಪನಿಯು ಕಬ್ಬಿಣದ ಆಕ್ಷೆಡ್‌ ಪೆಲೆಟ್ಸ್‌ ಉತ್ಪಾದನೆ-ಮಾರಾಟದಲ್ಲಿ ಕೇವಲ ಒಂದು ದಶಕದ ಅವಧಿಯಲ್ಲಿ ಸಾಕಷ್ಟು ತಿರುವನ್ನು ದಾಖಲಿಸಿದೆ. 2.32 ಮಿಲಿಯನ್‌ ಟನ್‌ ಪೆಲೆಟ್ಸ್‌ ಉತ್ಪಾದಿಸಿ, 2.30 ಮಿಲಿಯನ್‌ ಟನ್‌ ರವಾನಿಸಿದೆ. ಪ್ರಥಮ ಬಾರಿಗೆ ಹೊರಗಡೆಯಿಂದ ಕಬ್ಬಿಣ ಅದಿರನ್ನು ಖರೀದಿಸಿ, ಪೆಲೆಟ್ಸ್‌ ಉತ್ಪಾದಿಸಿದ್ದೇವೆ. ಇದರಲ್ಲಿ 1.45 ಮಿ. ಟನ್‌ ಪೆಲೆಟ್ಸ್‌ ಜಪಾನ್‌, ದಕ್ಷಿಣ ಕೊರಿಯಾ ಹಾಗೂ ಇತರೆಡೆಗೆ ರಫ್ತು ಮಾಡಿದ್ದೇವೆ ಎಂದರು. ಕೆಐಒಸಿಎಲ್‌ನ ಈ ಗುರಿ ಮೀರಿ ಸಾಧನೆಗೆ ನಮ್ಮೆಲ್ಲಾ ಸಿಬ್ಬಂದಿಯ ಪರಿಶ್ರಮ ಹಾಗೂ ಸಮರ್ಪಣೆ ಕಾರಣವಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next