Advertisement

ಕಿನ್ನಿಗೋಳಿ: ಶಿಬರೂರು ಸಮೀಪ ಮತ್ತೆ ಎರಡು ಚಿರತೆಗಳು ಪ್ರತ್ಯಕ್ಷ

10:20 PM Dec 23, 2022 | Team Udayavani |

ಕಿನ್ನಿಗೋಳಿ: ಶಿಬರೂರು ಸಮೀಪ ಮತ್ತೆ ಇಂದು ಮುಂಜಾನೆ ಎರಡು ಚಿರತೆಗಳು ಕಂಡು ಬಂದಿದೆ ಶಿಬರೂರು ದೈವಸ್ಥಾನದಿಂದ ಹುಣ್ಸೆಕಟ್ಟೆ ಹೋಗುವ ರಸ್ತೆಯಲ್ಲಿ ಶಿಬರೂರು ದೈವಸ್ಥಾನದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಇಂದು ಮುಂಜಾನೆ 3.30ರ ವೇಳೆ ಕಂಡು ಬಂದಿದೆ.

Advertisement

ಕಿಲೆಂಜೂರು ನಿವಾಸಿ ಶ್ರವಣ್ ಮಾಡ ಮತ್ತು ಸುಜಿತ್ ಮಾಡ ತಮ್ಮ ವಾಹನದಲ್ಲಿ ಬಜಪೆ ಕಡೆಯಿಂದ ಈ ರಸ್ತೆ ಮೂಲಕ ತಮ್ಮ ಮನೆಗೆ ಹಿಂದಿರುಗುವಾಗ ಎರಡು ಚಿರತೆಗಳು ರಸ್ತೆ ದಾಟುತ್ತಿದ್ದವು ಎಂದು ಮಾದ್ಯಮಗಳಿಗೆ ಮಾಹಿತಿ ನೀಡಿದರು.

ಎರಡು ದಿನದ ಹಿಂದೆ ಹುಣ್ಸೆಕಟ್ಟೆ ಸಮೀಪ ಮನೆಯಂಗಳದಲ್ಲಿ ಎರಡು ಚಿರತೆಗಳು ಇರುವ ದೃಶ್ಯ ಸಿ.ಸಿ.ಟಿವಿಯಲ್ಲಿ ಸೆರೆಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next