Advertisement

Kinnigoli: ಕಾರು,ಕ್ವಾಲಿಸ್‌, ಬೈಕ್‌ ನಡುವೆ ಸರಣಿ ಅಪಘಾತ

12:18 AM Feb 26, 2024 | Team Udayavani |

ಕಿನ್ನಿಗೋಳಿ: ರಾಜ್ಯ ಹೆದ್ದಾರಿಯ ಬಟ್ಟಕೋಡಿಯಲ್ಲಿ ಹಾವು ಅಡ್ಡ ಬಂದ ಕಾರಣ ಕಾರೊಂದು ಹಠಾತ್‌ ಬ್ರೇಕ್‌ ಹಾಕಿದ್ದರಿಂದ ಹಿಂದಿನಿಂದ ಬರುತ್ತಿದ್ದವಾಹನಗಳು ಢಿಕ್ಕಿ ಹೊಡೆದು ಕೊಂಡು ಸರಣಿ ಅಪಘಾತ ಸಂಭವಿಸಿತು. ಈ ಮಧ್ಯೆ ಬೈಕ್‌ ಸವಾರ ಪವಾಡಸದೃಶ ಪಾರಾಗಿದ್ದಾನೆ.

Advertisement

ಹಾವು ಕಾಣಿಸಿಕೊಂಡ ಕಾರಣ ಕಾರಿನ ಚಾಲಕ ಹಠಾತ್‌ ಬ್ರೇಕ್‌ ಹಾಕಿದ್ದು, ಹಿಂದೆಯೇ ಇದ್ದ ಕ್ವಾಲಿಸ್‌ ನಿಯಂತ್ರಣ ಕಳೆದುಕೊಂಡು ಮುಂದಿನ ಕಾರಿಗೆ ಢಿಕ್ಕಿ ಹೊಡೆ ಯಿತು. ಅದರ ಮಧ್ಯದಲ್ಲಿ ಇದ್ದ ಬೈಕ್‌ಸವಾರ ಹಾರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರು, ಕ್ವಾಲಿಸ್‌ ಪ್ರಯಾಣಿಕರಿಗೆ ಗಾಯವಾಗಿವೆ. ಬೈಕ್‌ ಜಖಂಗೊಂಡಿದೆ.

 

Advertisement

Udayavani is now on Telegram. Click here to join our channel and stay updated with the latest news.

Next