ಕಿನ್ನಿಗೋಳಿ: ಕಂಬಳ ಕೇವಲ ಜನಪದ ಕ್ರೀಡೆಯಲ್ಲ, ಇದು ಧಾರ್ಮಿಕ ಚೌಕಟ್ಟಿನ ಹಿನ್ನೆಲೆಯ ಮೇಲೆ ನಿಂತಿದೆ ಎಂದು ಅದಾನಿ ಸಂಸ್ಥೆಯ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ ಹೇಳಿದರು.
ಜ. 26ರಂದು ಇತಿಹಾಸ ಪ್ರಸಿದ್ಧ ಐಕಳಬಾವ ಕಾಂತಾಬಾರೆ – ಬೂದಾಬಾರೆ ಜೋಡುಕರೆ ಕಂಬಳದಲ್ಲಿ ಕಂಬಳದ ಕರೆ ಗಳನ್ನು ಉದ್ಘಾಟಿಸಿ ಮಾತನಾಡಿ, ಕಂಬಳ ಹಿಂದೆ ಧಾರ್ಮಿಕ ನಂಬಿಕೆಯಿದೆ. ಕಂಬಳ ನಡೆಸುವುದರಿಂದ ನಾವು ನಂಬಿದ ದೈವ- ದೇವರು ಸಂತೃಪ್ತಿ ಹೊಂದುತ್ತಾರೆ. ಮಾತ್ರ ವಲ್ಲದೆ ಕೃಷಿ ಕಾರ್ಯಕ್ಕೆ ಮತ್ತು ಗ್ರಾಮಕ್ಕೂ ಒಳ್ಳೆಯದಾಗುತ್ತದೆ ಎಂಬ ಅಚಲವಾದ ನಂಬಿಕೆ ಇದೆ ಎಂದರು. ಗಣೇಶ್ ಭಟ್ ಎಳಿಂಜೆ ಮತ್ತು ವರುಣ್ ಭಟ್ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.
ಸಮ್ಮಾನ
ಅಂತಾರಾಷ್ಟ್ರೀಯ ವಾಸ್ತು ತಜ್ಞ ಚಂದ್ರಶೇಖರ ಸ್ವಾಮೀಜಿ ಮತ್ತು ಅವರ ಪತ್ನಿರಜನಿ ಅವರನ್ನು, ಮುಂಬಯಿ ಉದ್ಯಮಿ ಕೃಷ್ಣ ಶೆಟ್ಟಿ ದಂಪತಿಯನ್ನು ಸಮ್ಮಾನಿಸಲಾಯಿತು.
ಕಂಬಳ ಸಮಿತಿಯ ಅಧ್ಯಕ್ಷ ಐಕಳಬಾವ ದೇವಿ ಪ್ರಸಾದ್ ಶೆಟ್ಟಿ ಅವರನ್ನು ಚಂದ್ರಶೇಖರ ಸ್ವಾಮೀಜಿ ಸಮ್ಮಾನಿಸಿದರು.
ಐಕಳಬಾವ ಯಜಮಾನರಾದ ದೋಗಣ್ಣ ಶೆಟ್ಟಿ, ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ, ಐಕಳ ಪಂ. ಅಧ್ಯಕ್ಷ ದಿವಾಕರ ಚೌಟ, ಜಿ.ಪಂ. ಸದಸ್ಯ ವಿನೋದ್ ಬೊಳ್ಳೂರು, ತಾ.ಪಂ. ಸದಸ್ಯೆ ರಶ್ಮಿ ಆಚಾರ್ಯ, ಭುವನಾಭಿರಾಮ ಉಡುಪ, ಕಂಬಳ ಸಮಿತಿಯ ಚಿತ್ತರಂಜನ್ ಭಂಡಾರಿ, ಶಾರದಾಮ್ಮ, ರಜನಿ ಚಂದ್ರಶೇಖರ್ ಭಟ್, ಜೊತಿಷಿ ವಿಶ್ವನಾಥ ಭಟ್, ಉಷಾ ವಿಶ್ವನಾಥ ಭಟ್, ಶ್ರೀಧರ್ ಮಡಿಗೇರಿ, ಅದಾನಿ ಸಂಸ್ಥೆಯ ಗಿರೀಶ್ ಉಡುಪ, ರವಿ ಜಿರೆ, ಐಕಳ ಮುರಳೀಧರ ಶೆಟ್ಟಿ, ಕೃಷ್ಣ ಮಾರ್ಲ, ಯೋಗೀಶ್ ರಾವ್, ಸಂಜೀವ ಶೆಟ್ಟಿ ಸ್ಥಳಂತಗುತ್ತು, ಲೀಲಾಧರ ಶೆಟ್ಟಿ ಐಕಳ, ಸದಾನಂದ ಕುಂದರ್, ಆನಂದ ಗೌಡ, ಶಶಿಧರ ಐಕಳ ಹರೀಶ್ ಶೆಟ್ಟಿ ತಾಮಣಿಗುತ್ತು, ಮುಂಬೈ ಸಮಿತಿಯ, ಕುಶಲ್ ಭಂಡಾರಿ ಐಕಳ ಬಾವ, ಗಣನಾಥ ಜೆ. ಶೆಟ್ಟಿ ಐಕಳ ಬಾವ, ತಿಲಕ್ ರಾಜ್ ಬಲ್ಲಾಳ್ ಐಕಳಬಾವ, ಪುರಂಧರ ಶೆಟ್ಟಿ ಐಕಳಬಾವ, ವೇಣುಗೋಪಾಲ ಶೆಟ್ಟಿ ಐಕಳ ಬಾವ, ಸ್ವರಾಜ್ ಶೆಟ್ಟಿ, ಸ್ವರಾಜ್ ಶೆಟ್ಟಿ, ಮನಮೋಹನ ಕೊಂಡೆ ಐಕಳಬಾವ, ಸಚಿನ್ ಕೆ. ಶೆಟ್ಟಿ ಐಕಳಬಾವ, ಸಚಿನ್ ಶೆಟ್ಟಿ ಐಕಳ ಬಾವ ಜಯಪಾಲ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಕಂಬಳ ಸಮಿತಿ ಅಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ ಪ್ರಸ್ತಾವೆನೆಗೈದರು. ಸರಾಪ್ ಐಕಳ ನಿರೂಪಿಸಿದರು. ಮುಂಬಯಿ ಸಮಿತಿಯ ಗಣನಾಥ ಶೆಟ್ಟಿ ಐಕಳಬಾವ ವಂದಿಸಿದರು.