Advertisement

ಕಿನ್ನಿಗೋಳಿ: ನಮ್ಮ ಜೀವನದ ಮೇಲೆ ಇಂಟರ್ನೆಟ್‌ ಪ್ರಭಾವ ಹೆಚ್ಚಳ

03:12 PM Jun 10, 2024 | Team Udayavani |

ಕಿನ್ನಿಗೋಳಿ: ನಮ್ಮ ಆಧುನಿಕತೆಯ ಜೀವನವು ಸುಧಾರಿತ ತಂತ್ರಜ್ಞಾನಗಳಿಂದ ರೂಪಾಂತರಗೊಂಡಿದೆ. ಇಂಟರ್ನೆಟ್‌ ನಮ್ಮ ಜನಜೀವನದ ಎಲ್ಲ ಅಂಶಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ಮೂಲ್ಕಿ ಪೊಲೀಸ್‌ ಠಾಣೆಯ ಪಿ.ಎಸ್‌.ಐ. ಸಂಜೀವ ಹೇಳಿದರು.

Advertisement

ಅವರು ಕಿನ್ನಿಗೋಳಿ ಸಮೀಪದ ಶಿಮಂತೂರು ಶ್ರೀ ಶಾರದ ಸೆಂಟ್ರಲ್‌ ಸ್ಕೂಲ್‌ ಶಾಲೆಯಲ್ಲಿ ಶಿಮಂತೂರು ಶ್ರೀ ಸೆಂಟ್ರಲ್‌ ಶಾಲೆಯ ಹಾಗೂ ಮೂಲ್ಕಿ ಪೊಲೀಸ್‌ ಠಾಣೆಯ ಆಶ್ರಯದಲ್ಲಿ ಸೈಬರ್‌ ಭದ್ರತೆಯ ಕುರಿತು ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿ, ಇದು ನಮ್ಮನ್ನು ವ್ಯಾಪಕವಾದ ಬೆದರಿಕೆಗೆ ಗುರಿಯಾಗುವಂತೆ ಮಾಡುತ್ತದೆ.

ಕಂಪ್ಯೂಟರ್‌ಗಳು, ಸರ್ವರ್‌ಗಳು, ಮೊಬೈಲ್‌ ಸಾಧನಗಳು, ಎಲೆಕ್ಟ್ರಾನಿಕ್‌ ಸಿಸ್ಟಮ್‌ಗಳು, ನೆಟ್‌ವರ್ಕ್‌ಗಳು ಮತ್ತು ಡೇಟಾವನ್ನು ದುರುದ್ದೇಶಪೂರಿತ ದಾಳಿಯಿಂದ ರಕ್ಷಿಸುವ ಅಭ್ಯಾಸವೇ ಸೈಬರ್‌ ಸೆಕ್ಯುರಿಟಿಯಾಗಿದೆ. ಶಿಕ್ಷಣ ಸಂಸ್ಥೆಗಳು ಸೈಬರ್‌-ಅಪರಾಧಗಳ
ತಡೆಗಟ್ಟುವಿಕೆಯ ಮಾಹಿತಿಯನ್ನು ಪ್ರಸಾರ ಮಾಡುವ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿದೆ ಮತ್ತು ಸೈಬರ್‌ ಸುರಕ್ಷೆಗಾಗಿ
ವ್ಯವಸ್ಥೆಯನ್ನು ರೂಪಿಸಲು ಮತ್ತು ಸೈಬರ್‌-ಅಪರಾಧಗಳನ್ನು ತಡೆಯಲು ಅನುಕೂಲವಾಗಿದೆ ಎಂದರು.

ಸರಿಯಾದ ಸೆಟ್ಟಿಂಗ್‌ ಆಯ್ಕೆ ಮಾಡಿ ಶಾಲಾ ಪ್ರಾಂಶುಪಾಲ ಜಿತೇಂದ್ರ ವಿ. ರಾವ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ನೀವು ನಿಮ್ಮನ್ನು ಸುರಕ್ಷಿತವಾಗಿರಿ ಸಿಕೊಳ್ಳುವಂತೆಯೇ, ನಿಮ್ಮ ಆನ್‌ಲೈನ್‌ ಉಪಸ್ಥಿತಿಯನ್ನು ಸುರಕ್ಷಿತಗೊಳಿಸಿ, ನಿಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ನೀವು ಸರಿಯಾದ ಸೆಟ್ಟಿಂಗ್‌ಗಳನ್ನು ಆಯ್ಕೆ ಮಾಡದಿದ್ದರೆ, ಪೋಸ್ಟ್‌ ಮಾಡಿದ ಫೋಟೋಗಳು ಮತ್ತು ವೀಡಿಯೊಗಳನ್ನು ನಿಮಗೆ ತಿಳಿಯದೆ ಇತರರು ವೀಕ್ಷಿಸಬಹುದು, ಡೌನ್‌ಲೋಡ್‌ ಮಾಡಬಹುದು ಮತ್ತು ಬಳಸಬಹುದು.

ಸಾಮಾಜಿಕ ಮಾಧ್ಯಮ ಗುಂಪುಗಳು ಮತ್ತು ವೆಬ್‌ಸೈಟ್‌ಗಳಲ್ಲಿ ಅಪರಿಚಿತರಿಂದ ಚಾಟ್‌ ವಿನಂತಿಗಳನ್ನು ಸ್ವೀಕರಿಸುವಾಗ
ಜಾಗರೂಕರಾಗಿರಿ ಎಂದರು. ಮೂಲ್ಕಿ ಪೋಲಿಸ್‌ ಠಾಣೆ ಪಿ.ಎಸ್‌. ಐ. ಉಮೇಶ್‌, ಹೆಡ್‌ ಕಾನ್‌ಸ್ಟೆಬಲ್‌ ಸತೀಶ್‌, ಮಹಿಳಾ ಕಾನ್‌ಸ್ಟೆಬಲ್‌ ಸ್ವಾತಿ ಉಪಸ್ಥಿತರಿದ್ದರು. ಶಾಲಾ ಸಹ ಶಿಕ್ಷಕಿ ವನಿತಾ ಕಾರ್ಯಕ್ರಮ ನಿರೂಪಿಸಿದರು ವೀಣಾ ಸ್ವಾಗತಿಸಿದರು. ಶ್ರೀಲತಾ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next