Advertisement

ಕಿನ್ನಿಗೋಳಿ ಹೆದ್ದಾರಿ ಕಾಮಗಾರಿ ಪೂರ್ಣ; ಚರಂಡಿ ಕೆಲಸ ಅರ್ಧದಲ್ಲೇ ಬಾಕಿ

10:02 PM May 30, 2019 | Sriram |

ಕಿನ್ನಿಗೋಳಿ: ಕಿನ್ನಿಗೋಳಿ ವ್ಯಾಪ್ತಿಯಲ್ಲಿ ಮಳೆಗಾಲ ಮುನ್ನಚ್ಚರಿಕೆಗೆ ಹಲವಾರು ಕಾಮಗಾರಿಗಳು ಪೂರ್ಣಗೊಳಿಸಲಾಗಿದೆ. ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸಿ ಸಂಚಾರಕ್ಕೆ ಸುವ್ಯವ ಸ್ಥಿತಗೊಳಿಸಲಾಗಿದೆ.

Advertisement

ಕಿನ್ನಿಗೋಳಿಯಿಂದ ಮೂಲ್ಕಿ- ಕಾರ್ನಾಡ್‌ನ‌ ರಸ್ತೆಯೂ 14.8 ಕೋ.ರೂ.ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದ್ದು, ಕಿನ್ನಿಗೋಳಿ ಮೂರು ಕಾವೇರಿಯ ಮಾರಿಗುಡಿಯಿಂದ ಕಾರ್ನಾಡ್‌ ಜಂಕ್ಷನ್‌ ತನಕ ಹೆದ್ದಾರಿಯ ಡಾಮರು ರಸ್ತೆಯನ್ನು ಏಳು ಮೀಟರ್‌ಗೆ ಅಗಲಿಧೀಕರಣಗೊಳಿಸಲಾಗಿದೆ.

ಫ‌ುಟ್‌ಪಾತ್‌ ಕಾಮಗಾರಿ ಬಾಕಿ
ಕಿನ್ನಿಗೋಳಿ ಪೇಟೆಯಲ್ಲಿ ಚರ್ಚ್‌ ಸಮೀಪದ ಕೆಳಭಾಗದಿಂದ ಭಟ್ಟ ಕೋಡಿಯ ತನಕ ಸುಮಾರು 500 ಮೀ. ರಸ್ತೆಯ ಇಕ್ಕಲೆಗಳಲ್ಲಿ ಕಾಂಕ್ರೀಟ್‌ ಚರಂಡಿ ನಿರ್ಮಿಸಿ ಕಾಂಕ್ರೀಟ್‌ ಚಪ್ಪಡಿ ಹಾಸಲಾಗಿದ್ದು ಫ‌ುಟ್‌ಪಾತ್‌ ಕಾಮಗಾರಿ ಬಾಕಿ ಉಳಿದಿದೆ.

ಈ ಭಾರಿ ಡಾಮರು ಕೆಲಸ ಮುಗಿದು ಚರಂಡಿ ಕಾಮಗಾರಿ ಅಪೂರ್ಣವಾಗಿದೆ. ಕುಬೆವೂರು, ಪುನರೂರು, ಎಸ್‌. ಕೋಡಿ, ಪದ್ಮನೂರು ಭಾಗದಲ್ಲಿಯೂ ಇದೇ ಸಮಸ್ಯೆ ಉಂಟಾಗಿದೆ.

ರಸ್ತೆ ವಿಸ್ತರಣೆ ಮಾಡುವಾಗ ಹಳೆಯ ಚರಂಡಿಗೆ ಮಣ್ಣು ತುಂಬಿಸಿ ನೆರೆ ಬರುವ ಲಕ್ಷಣ ಹೊಸ ಚರಂಡಿ ಮಾಡಲಾಗಿದೆ. ಆದರೆ ಚರಂಡಿಯ ಪಕ್ಕದಲ್ಲಿ ಮಣ್ಣು ರಾಶಿ ಹಾಕಿದ್ದು, ಮಳೆ ಬಂದರೆ ಮತ್ತೆ ಚರಂಡಿ ಸೇರಿ ಬ್ಲಾಕ್‌ ಆಗಿ ನೆರೆ ಬರುವ ಲಕ್ಷಣವಿದೆ. ಕೆಲವು ಕಡೆಗಳಲ್ಲಿ ಹಳೆಯ ಚರಂಡಿ ಮುಚ್ಚಿ ಹಾಕಲಾಗಿದೆ ಆದರೆ ಹೊಸ ಚರಂಡಿ ನಿರ್ಮಾಣವಾಗಿಲ್ಲ.

Advertisement

ಪೂರ್ಣಗೊಳ್ಳದ ಚರಂಡಿ ಕಾಮಗಾರಿ
ಟೆಂಪೋ ಪಾರ್ಕ್‌ನಿಂದ 300 ಮೀ. ತನಕ ಕಾಮ ಗಾರಿ ಆಗಬೇಕಾಗಿದೆ. ಆದರೆ ಕೆಲವು ಪ್ರದೇಶದಲ್ಲಿ ಚರಂಡಿ ಕಾಮಗಾರಿ ನಡೆದಿಲ್ಲ. ಅದರಲ್ಲೂ ಕೆಂಚನಕೆರೆ ಭಾಗ ದಲ್ಲಿ ಕಳೆದ ವರ್ಷ ಈ ರಸ್ತೆ ಸಮರ್ಪ ಕವಾದ ಚರಂಡಿ ಕಾಮಗಾರಿ ನಡೆಯದೇ ಇದ್ದುದರಿಂದ ಕೃತಕ ನೆರೆ ನೀರು ತುಂಬಿ ಪಕ್ಕದ ಮನೆ ಹಟ್ಟಿಗಳಿಗೆ ತುಂಬಿ ಸಂಕಷ್ಟ ಎದುರಾಗಿತ್ತು.

 ಶೀಘ್ರದಲ್ಲಿ ಕಾಮಗಾರಿ ಪೂರ್ಣ
ರಾಜ್ಯ ಹೆದ್ದಾರಿಯ ಡಾಮರೀಕರಣದ ಕೆಲಸ ಪೂರ್ತಿಯಾಗಿದೆ. ಕೆಲವು ಕಡೆಗಳಲ್ಲಿ ಚರಂಡಿ ಮೋರಿಯ ಬದಿಯಲ್ಲಿ ಮಣ್ಣು ನಿಂತು ಮಳೆಗಾಲದಲ್ಲಿ ಸಮಸ್ಯೆ ಆಗುವ ಬಗ್ಗೆ ದೂರು ಬಂದಿದ್ದು ಈ ಬಗ್ಗೆ ಇಲಾಖೆಯ ಅಧಿಕಾರಿಗಳಿಗೆ ತಿಳಿಸಲಾಗಿದೆ. ಶೀಘ್ರದಲ್ಲಿ ಕಾಮಗಾರಿ ನಡೆಸಲಾಗುವುದು.
– ಉಮಾನಾಥ ಕೋಟ್ಯಾನ್‌,
ಶಾಸಕರು,

-ರಘುನಾಥ ಕಾಮತ್‌ ಕೆಂಚನಕೆರೆ

Advertisement

Udayavani is now on Telegram. Click here to join our channel and stay updated with the latest news.

Next