Advertisement

Kinnigoli: ಎಳತ್ತೂರು; ಚಿರತೆಯನ್ನು ಎದುರಿಸಿ ಸಾವು ಗೆದ್ದ ಲಿಗೋರಿ!

01:00 AM Nov 04, 2024 | Team Udayavani |

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಎಳತ್ತೂರು ದೇವಸ್ಥಾನದ ದೇವರ ಗುಂಡಿ ಸಂಕದ ಬಳಿ ಚಿರತೆಯೊಂದು ಹುಲ್ಲು ಕತ್ತರಿಸುತ್ತಿದ್ದ ವ್ಯಕ್ತಿಯೋರ್ವರ ಮೇಲೆ ದಾಳಿ ನಡೆಸಿದ್ದು, ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಕಟೀಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಎಳತ್ತೂರು ಕಲ್ಕರೆ ಸ್ಥಳೀಯ ನಿವಾಸಿ ಲಿಗೋರಿ ಪಿರೇರಾ ಗಾಯಗೊಂಡವರು. ಅವರು ಹೈನುಗಾರರಾಗಿದ್ದು, ದನಗಳಿಗೆ ಮೇವು ತರಲು ಹೋಗಿದ್ದಾಗ ಚಿರತೆ ದಾಳಿ ನಡೆಸಿದೆ. ಲಿಗೋರಿ ಧೈರ್ಯದಿಂದ ಚಿರತೆಯನ್ನು ಎದುರಿಸಿದ್ದು, ಕೂಡಲೇ ಅದು ಪರಾರಿಯಾಗಿದೆ.

ಲಿಗೋರಿಯವರ ಮುಖ, ಕೈ, ಕಾಲಿಗೆ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.

10 ದಿನಗಳ ಹಿಂದೆ ಜಯಂತ ಅವರ ಬೈಕಿಗೆ ಕೊಲ್ಲೂರು ಪದವು ಹತ್ತಿರ ದೊಡ್ಡ ಗಾತ್ರದ ಚಿರತೆ ಅಡ್ಡ ಬಂದಿತ್ತು. ಈ ಭಾಗದಲ್ಲಿ ವಾರದ ಹಿಂದೆಯೂ ಚಿರತೆ ಪ್ರತ್ಯಕ್ಷವಾಗಿದ್ದು, ಸ್ಥಳೀಯರಾದ ಶಿವಪ್ರಸಾದ್‌ ಭಟ್‌ ಎಚ್ಚರಿಕೆಯಿಂದ ಇರುವಂತೆ ಮಾಹಿತಿ ನೀಡಿದ್ದರು. ಈ ಬಗ್ಗೆ ಸ್ಥಳೀಯರಾದ ಪ್ರಸಾದ್‌ ಎಳತ್ತೂರು ಅರಣ್ಯ ಇಲಾಖೆಗೆ ದೂರು ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next