Advertisement

ಕಿನ್ನಿಗೋಳಿ: ಚರಂಡಿ ಸಮಸ್ಯೆ; ರಸ್ತೆಯಲ್ಲೇ ಹರಿದ ಮಳೆನೀರು

12:43 PM Apr 16, 2018 | Team Udayavani |

ಕಿನ್ನಿಗೋಳಿ: ಕಿನ್ನಿಗೋಳಿ ಪೇಟೆಯಲ್ಲಿ ರಾಜ್ಯ ಹೆದ್ದಾರಿ ಅಗಲಗೊಳಿಸುವ ನಿಟ್ಟಿನಲ್ಲಿ ಚರಂಡಿ ಮುಚ್ಚಲಾಗಿದ್ದು, ರವಿವಾರ ಸುರಿದ ಮಳೆಗೆ ನೀರು ರಸ್ತೆಯಲ್ಲೇ ಹರಿದು ಪಕ್ಕದ ಅಂಗಡಿ ಮುಂಗಟ್ಟುಗಳಿಗೆ ನುಗ್ಗಿ ಹಾನಿಯುಂಟಾಗಿದೆ.

Advertisement

 ಕಳೆದ ನವೆಂಬರ್‌ನಲ್ಲಿ ಮೂಲ್ಕಿಯಿಂದ ಕಿನ್ನಿಗೋಳಿ ತನಕ ಹೆದ್ದಾರಿ ಕಾಮಗಾರಿ ಆರಂಭವಾಗಿ ರಸ್ತೆಯ ಇಕ್ಕಲಗಳನ್ನು ಜೆಸಿಬಿ ಮೂಲಕ ಚರಂಡಿ ಸಮೇತ ಮುಚ್ಚಿ ಸಮತಟ್ಟು ಗೊಳಿಸಲಾಯಿತು. ಆದರೇ ಜಲ್ಲಿ ಹಾಕಿ ರಸ್ತೆ ನಿರ್ಮಾಣ ಮಾಡಿ ಚರಂಡಿ ಮಾಡುವ ಕಾರ್ಯ ನಡೆಯದೆ ಇಂತಹ ಸಮಸ್ಯೆ ಉಂಟಾಗಿದೆ. 

ವಾಮಂಜೂರು
ವಾಮಂಜೂರು-ಪೊಳಲಿ-ಕೈಕಂಬ ಸುತ್ತಮುತ್ತ ರವಿವಾರ ಬೆಳಗ್ಗೆ ದಿಢೀರ್‌ ಮಳೆ ಸುರಿದಿದೆ. ಮುಂಜಾನೆ ಸುಮಾರು
ಒಂದು ಗಂಟೆ ಕಾಲ ಸುರಿದಿದೆ. ಸಿಡಿಲು, ಮಿಂಚು ಕಾಣಿಸಿಕೊಂಡಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ. 

ಇಲಾಖೆಗೆ ಹಿಡಿಶಾಪ
ಮೆನ್ನಬೆಟ್ಟು ಗ್ರಾಮ ಪಂಚಾಯತ್‌ನಲ್ಲಿ ನಾಗರಿಕರ ಹಾಗೂ ಇಲಾಖೆಯ ಅಧಿಕಾರಿಗಳ ಸಭೆಯು ಫೆಬ್ರವರಿ ತಿಂಗಳಲ್ಲಿ ನಡೆದಿದ್ದು, ಕೆಲವು ದಿನಗಳಲ್ಲಿ ಕಾಮಗಾರಿ ಕೆಲಸ ಮುಗಿಸುವ ಭರವಸೆ ನೀಡಿಲಾಗಿತ್ತು. ಆದರೆ ಕೆಲಸ ಮಾತ್ರ ಆಗಲಿಲ್ಲಿ. ಮಳೆಗಾಲ ಆರಂಭವಾದರೇ ಪ್ರತಿನಿತ್ಯ ಈ ಸಮಸ್ಯೆ ಉಂಟಾಗುತ್ತದೆ ಎಂದು ಅಲ್ಲಿನ ಅಂಗಡಿ ಮಾಲಕರು ಹಾಗೂ ಗ್ರಾಮಸ್ಥರು ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ವಿವಿಧೆಡೆ ಮಳೆ 
ಕುಳಾಯಿ, ಕೃಷ್ಣಾಪುರ, ಸುರತ್ಕಲ್‌, ಹಳೆಯಂಗಡಿ, ಸಸಿಹಿತ್ಲು ಪ್ರದೇಶದಲ್ಲಿ ಶನಿವಾರ ರಾತ್ರಿ ಹಾಗೂ ರವಿವಾರ ಬೆಳಗ್ಗೆ ಸಾಧಾರಣ ಮಳೆಯಾಗಿದೆ. ಕೆಲವೆಡೆ ತಗ್ಗುಪ್ರದೇಶದಲ್ಲಿ ನೀರು ನಿಲ್ಲುವಷ್ಟು ಮಳೆಯಾದರೆ ಇನ್ನು ಪಣಂಬೂರು, ಕೂಳೂರು ಪರಿಸರದಲ್ಲಿ ಶನಿವಾರ ರಾತ್ರಿ ಹನಿ ಹನಿ ಮಳೆ ಸುರಿದಿದೆ. ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next