ಕಿನ್ಯ: ಮನುಷ್ಯನ ಬದುಕಿನಲ್ಲಿ ತಪ್ಪುಗಳು ಆಗುವುದು ಸಹಜ. ಅನಂತರ ತಪ್ಪನ್ನು ತಿದ್ದಿಕೊಂಡು, ಬದಲಾವಣೆ ಬಯಸುವುದೇ ಜೀವನ. ಜೀವನದಲ್ಲಿ ಸತ್ಯವೂ ದೃಢವಾಗಿದ್ದರೆ, ಅದು ನಮ್ಮನ್ನು ರಕ್ಷಿಸುತ್ತದೆ ಎಂದು ಶಾರದಾ ವಿದ್ಯಾನಿಕೇತನ ಪದವಿ ಕಾಲೇಜಿನ ಪ್ರಾಂಶುಪಾಲ ಡಾ| ಬಾಲಕೃಷ್ಣ ಭಾರದ್ವಾಜ್ ಹೇಳಿದರು.
ಕಿನ್ಯ ಕೇಶವ ಶಿಶುಮಂದಿರದ ವತಿಯಿಂದ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸಹಕಾರದೊಂದಿಗೆ ನಡೆದ 4 ದಿನಗಳ ಬೇಸಗೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಸತ್ಯ,ಅಹಿಂಸೆ ಹಾಗೂ ಧರ್ಮ ರಕ್ಷ ಣೆ ಈ ಮೂರು ಅಂಶಗಳಿಗೆ ನಾವು ಬದ್ಧರಾಗಿರಬೇಕು.ವಿದ್ಯಾರ್ಥಿಗಳು ಶಿಬಿರಗಳಲ್ಲಿ ತಮ್ಮನ್ನು ತಾವು ಇಂತಹ ವಿಚಾರಗಳಿಗೆ ಬದಲಾವಣೆ ಗೊಳಿಸುತ್ತಾ ಹೋಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಪಂಚಾಯತ್ ಅಭಿವೃದ್ಧಿ ನಿವೃತ್ತ ಅಧಿಕಾರಿ ನಾರಾಯಣ ಪೂಜಾರಿ, ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅರ್ಚಕ ಶ್ರೀನಿವಾಸ ನೆಲ್ಲಿತ್ತಾಯ ಉಪಸ್ಥಿತರಿದ್ದರು.
ಶಿಶು ಮಂದಿರದ ವ್ಯವಸ್ಥಾಪಕ ನಾರಾಯಣ ಕಜೆ ಸ್ವಾಗತಿಸಿ, ಪ್ರಸ್ತಾವ ನೆಗೈದರು. ಚೇತನ್ ಪಿಲಿ ಕೂರು ವಂದಿಸಿದರು. ಉಚ್ಚಿಲ ಬೋವಿ ವಿದ್ಯಾಸಂಸ್ಥೆಯ ಶಿಕ್ಷಕಿ ಸುಜಾತಾ ದೇವಿಪುರ ನಿರೂಪಿಸಿದರು. ಶಿಶುಮಂ ದಿರದ ಮಾತೃ ಮಂಡ ಳಿಯ ಶೋಭಾ ಹಾಗೂ ರಾಜೇ ಶ್ವರೀ ಪಿಲಿಕೂರು, ಯಕ್ಷಗಾನ ಸಂಚಾಲಕ ಸದಾಶಿವ ಆಚಾರ್ಯ ಸಹಕರಿಸಿದರು.