Advertisement

ಪಂಜಾಬ್‌ ಗೆದ್ದರೆ ಶೂ ಮೂಲಕ ಶಾಂಪೇನ್‌ ಕುಡಿದು ಸಂಭ್ರಮ!

01:20 AM Mar 30, 2019 | Team Udayavani |

ಮೊಹಾಲಿ: ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ಆಸ್ಟ್ರೇಲಿಯನ್‌ ಕ್ರಿಕೆಟಿಗ ಆಂಡ್ರ್ಯೂ ಟೈ ವಿಶೇಷ ಸಂಭ್ರಮಾ ಚರಣೆಯ ಬಗ್ಗೆ ಹೇಳಿಕೊಂಡಿದ್ದಾರೆ. ಪಂಜಾಬ್‌ ತಂಡ ಈ ಬಾರಿ ಐಪಿಎಲ್‌ ಚಾಂಪಿಯನ್‌ ಆದರೆ ತಾನು ಶೂ ಒಳಗೆ ಶಾಂಪೇನ್‌ ಸುರಿದು ಕುಡಿದು ಸಂಭ್ರಮಿಸುವುದಾಗಿ ಹೇಳಿದ್ದಾರೆ.

Advertisement

ಭಾರತದ ಮಟ್ಟಿಗೆ “ಡ್ರಿಂಕಿಂಗ್‌ ಫ್ರಾಮ್‌ ಶೂಸ್‌’ ಎಂಬುದು ವಿಚಿತ್ರ ಕಲ್ಪನೆ. ಆದರೆ ಆಸ್ಟ್ರೇಲಿಯದಲ್ಲಿ ಇದು ಮಾಮೂಲು. ಅಸಹ್ಯವೆನಿಸಿದರೂ ಕ್ರೀಡಾ ಸಂಭ್ರಮಾಚರಣೆಯ ವೇಳೆ ತಾವು ಧರಿಸಿದ ಶೂ ಒಳಗೆ ಶಾಂಪೇನ್‌ ಸುರಿದು, ಶೂವನ್ನು ಎತ್ತಿ ಆ ಶಾಂಪೇನ್‌ ಕುಡಿಯುವ ಸಂಪ್ರದಾಯ ಕಾಂಗರೂ ನಾಡಿನಲ್ಲಿದೆ.

2016ರಲ್ಲಿ ಇಲ್ಲಿನ ಮೋಟೊ ಜಿಪಿ ರೈಡರ್‌ ಜಾಕ್‌ ಮಿಲ್ಲರ್‌ ಮೊದಲ “ಪ್ರೀಮಿಯರ್‌ ಕ್ಲಾಸ್‌’ ಗೆಲುವಿನ ಬಳಿಕ ಹೀಗೆ ಮಾಡಿದ್ದರು. ಮತ್ತೋರ್ವ ಫಾರ್ಮುಲಾ-1 ಚಾಲಕ ಡೇನಿಯಲ್‌ ರಿಕಾರ್ಡೊ ಕೂಡ ಶೂ-ಶಾಂಪೇನ್‌ ಸವಿದು ಸಂಭ್ರಮಿಸಿದ್ದರು. ಆ್ಯಂಡ್ರೂ ಟೈ ಫಾರ್ಮುಲಾ-1ನ ದೊಡ್ಡ ಫ್ಯಾನ್‌ ಆಗಿರುವುದರಿಂದ ಇದನ್ನು ಅನುಸರಿಸಲು ಮುಂದಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next