ಕಳೆದ ಕೆಲವು ತಿಂಗಳಿಂದಲೂ ಪಂಜಾಬ್ ಫ್ರಾಂಚೈಸಿ ಟೈಟಲ್ ಪ್ರಾಯೋಜಕರಿಗೆ ಹುಡುಕಾಟ ನಡೆಸುತ್ತಲೇ ಇತ್ತು. ಅಲ್ಲದೇ ಇದರ ಮೊತ್ತವನ್ನು ಚೆನ್ನೈ ಮತ್ತು ಮುಂಬೈ ಫ್ರಾಂಚೈಸಿಗಳ ಟೈಟಲ್ಗಿಂತಲೂ ಶೇ. 50ರಷ್ಟು ಕಡಿಮೆ ಇರಿಸಿತ್ತು. ಆದರೆ ಮುಂಬೈ ಮತ್ತು ಚೆನ್ನೈಗೆ ಈಗಾಗಲೇ ಪ್ರಾಯೋಜಕರು ಸಿಕ್ಕಿದ್ದಾರೆ. ಹಾಲಿ ಚಾಂಪಿಯನ್ ಚೆನ್ನೈ “ಮುತ್ತೂಟ್ ಫೈನಾನ್ಸ್’ ಜತೆ ಸುದೀರ್ಘ ಒಪ್ಪಂದಕ್ಕೆ ಸಹಿ ಹಾಕಿದೆ. ಮುಂಬೈಗೆ ಕೊರಿಯನ್ ಬ್ರ್ಯಾಂಡ್ ಆಗಿರುವ “ಸ್ಯಾಮ್ಸಂಗ್’ ಸಿಕ್ಕಿದೆ. ಪಂಜಾಬ್ ಮಾತ್ರ ಈ ನಿಟ್ಟಿನಲ್ಲಿ ಭಾರೀ ಹಿಂದುಳಿದಿದೆ.
Advertisement