Advertisement

ಕಿಂಗ್ಸ್‌ ಕಪ್‌ ಫ‌ುಟ್‌ಬಾಲ್‌: ಭಾರತಕ್ಕೆ ಸೋಲು

11:52 PM Jun 05, 2019 | Sriram |

ಹೊಸದಿಲ್ಲಿ: ನೂತನ ಕೋಚ್‌ ಐಗರ್‌ ಸ್ಟಿಮಾಕ್‌ ಮಾರ್ಗದರ್ಶನದಲ್ಲಿ ಮೊದಲ ಸಲ ಕಣಕ್ಕಿಳಿದ ಭಾರತೀಯ ಫ‌ುಟ್‌ಬಾಲ್‌ ತಂಡ ಸೋಲಿನ ಆರಂಭ ಪಡೆದಿದೆ. ಥಾಯ್ಲೆಂಡ್‌ನ‌ಲ್ಲಿ ನಡೆಯುತ್ತಿರುವ “ಕಿಂಗ್ಸ್‌ ಕಪ್‌ ಫ‌ುಟ್‌ಬಾಲ್‌’ ಕೂಟದ ಮೊದಲ ಪಂದ್ಯದಲ್ಲಿ ಕೋರ್ಸೊ 3-1 ಗೋಲುಗಳಿಂದ ಭಾರತವನ್ನು ಮಣಿಸಿದೆ.

Advertisement

ಇದು ಭಾರತದ ನಾಯಕ ಸುನೀಲ್‌ ಚೆಟ್ರಿ ಪಾಲಿಗೆ ಐತಿಹಾಸಿಕ ಪಂದ್ಯವಾಗಿತ್ತು. ಭಾರತವನ್ನು ಅತ್ಯಧಿಕ 107 ಸಲ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮುನ್ನಡೆಸಿದ ಭೈಚುಂಗ್‌ ಭುಟಿಯ ಅವರ ದಾಖಲೆಯನ್ನು ಚೆಟ್ರಿ ಇಲ್ಲಿ ಮುರಿದಿದ್ದರು. ಭಾರತ ಬಾರಿಸಿದ ಏಕೈಕ ಗೋಲಿಗೂ ಚೆಟ್ರಿ ಸಾಕ್ಷಿಯಾದರು. ಕೋರ್ಸೊ ಪರ ರೋಲಿ ಬೊನೆವೇಸಿಯ (16), ಎಲ್ಸನ್‌ ಹೂಯಿ (18), ಲಿಯನಾರ್ಡೊ ಬಕುನ (33ನೇ ನಿಮಿಷ) ಗೋಲು ಸಿಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next