Advertisement
ಮಾ.31ರ ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ್ 8 ರನ್‌ಗಳ ಸೋಲನುಭವಿಸಿತ್ತು. ಈ ಸೋಲಿನ ಸೇಡು ತೀರಿಸಿಕೊಳ್ಳಲು ರಹಾನೆ ಪಡೆ ಕಾತುರದಿಂದ ಕಾಯುತ್ತಿದೆ. ಆಡಿದ 5 ಪಂದ್ಯದಲ್ಲಿ ಕೇವಲ ಒಂದು ಪಂದ್ಯವನ್ನಷ್ಟೆ ಗೆದ್ದಿರುವ ರಾಜಸ್ಥಾನ್‌ಗೆ ಉಳಿದಿರುವ ಪಂದ್ಯ ಗಳನ್ನು ಜಯಿಸುವುದು ಅನಿರ್ವಾಯ. ಈ ಪಂದ್ಯದಲ್ಲಿಯೂ ಸೋತರೆ ಪ್ಲೇಆಫ್ ಕನಸು ಮರೀಚಿಕೆಯಾಗಿಯೇ ಉಳಿಯುತ್ತದೆ. ಚೆನ್ನೈ ತಂಡವನ್ನು ಸೋಲಿಸಿ ಗೆಲು ವಿನ ಟ್ರ್ಯಾಕ್ ಏರುವ ತಯಾರಿ ಮಾಡಿಕೊಳ್ಳುತ್ತಿದೆ. ಚೆನ್ನೈ- ರಾಜಸ್ಥಾನ್ ಐಪಿಎಲ್‌ನಲ್ಲಿ ಕಳೆದ ಪಂದ್ಯ ಸೇರಿದಂತೆ 21 ಬಾರಿ ಮುಖಾಮುಖೀ ಯಾಗಿವೆ.
ಪ್ರತೀ ಸೀಸನ್‌ನಲ್ಲೂ ಬಲಿಷ್ಠ ತಂಡವೆನಿಸಿ ಕೊಂಡಿರುವ ಚೆನ್ನೈ ಈ ಬಾರಿಯೂ ಆಡಿದ 6 ಪಂದ್ಯಗಳಲ್ಲಿ ಐದನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದೆ. ಹಿರಿಯರನ್ನೇ ಹೆಚ್ಚಾಗಿ ಹೊಂದಿರುವ ಈ ತಂಡದಲ್ಲಿ ಅನುಭವಕ್ಕೇನೂ ಕೊರತೆ ಇಲ್ಲ. ತಂಡದ ಆಟಗಾರರು ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಕಡಿಮೆ ರನ್ ಗಳಿಸಿದರೂ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಬಲಿಷ್ಠ ಬೌಲಿಂಗ್ ಪಡೆ ಒಂದೆಡೆಯಾದರೆ ಬ್ಯಾಟಿಂಗ್‌ನಲ್ಲಿ ಕುಸಿತ ಕಂಡರೆ ನಾಯಕನ ಜವಾಬ್ದಾರಿಯುತ ಆಟ ಇವೆಲ್ಲ ಚೆನ್ನೈ ತಂಡದ ಪ್ಲಸ್ ಪಾಯಿಂಟ್. ಮೊದಲ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ಧ ಆರಂಭಿಕ ಆಘಾತ ಎದುರಿಸಿದ ಚೆನ್ನೈಗೆ ಆಸರೆಯಾಗಿದ್ದು ನಾಯಕ ಧೋನಿ. 75 ರನ್ ಗಳಿಸಿ ಅವರು ತಂಡದ ಮೊತ್ತವನ್ನು 175ಕ್ಕೆ ತಲುಪಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದನ್ನು ಮರೆಯುವಂತಿಲ್ಲ. ಇಮ್ರಾನ್ ತಾಹಿರ್, ಹರ್ಭಜನ್‌ಸಿಂಗ್, ರವೀಂದ್ರ ಜಡೇಜಾ ಸ್ಪಿನ್ ದಾಳಿಗೆ ಎದುರಾಳಿ ಬ್ಯಾಟ್ಸ್ ಮನ್‌ಗಳು ರನ್ ಗಳಿಸಲು ಪರದಾಡುವ ಸ್ಥಿತಿ ಎದುರಾಗಿದೆ. ಇದಕ್ಕೆ ಮಂಗಳವಾರ ಕೆಕೆಆರ್‌ವಿರುದ್ಧದ ಆಟವೇ ಸಾಕ್ಷಿ.
Related Articles
ಬಲಿಷ್ಠ ಆಟಗಾರರನ್ನೇ ಹೊಂದಿದ ರಾಜಸ್ಥಾನ್‌ಗೆ ಅದೃಷ್ಟದ ಬಾಗಿಲು ಇನ್ನೂ ತೆರೆದಿಲ್ಲ. ಸುಲಭವಾಗಿ ಗೆಲ್ಲುವ ಪಂದ್ಯಗಳನ್ನೆಲ್ಲ ಕೊನೆಯ ಹಂತದಲ್ಲಿ ಕೈಚೆಲ್ಲುತ್ತಿರುವುದು ರಾಜಸ್ಥಾನ್ ತಂಡಕ್ಕೆ ಹಿನ್ನಡೆಯಾಗಿದೆ. ಆರಂಭದ 2 ಪಂದ್ಯಗಳಲ್ಲಿ ಮಿಂಚಿದ ಸಂಜು ಸ್ಯಾಮ್ಸನ್ ಮತ್ತು ಜೋಸ್ ಬಟ್ಲರ್ ಬ್ಯಾಟ್ ಅನಂತರದ ಪಂದ್ಯಗಳಲ್ಲಿ ಸದ್ದು ಮಾಡದಿರುವುದು ಸಮಸ್ಯೆಯಾದರೆ, ಸ್ಟೀವನ್ ಸ್ಮಿತ್ ಪಾರ್ಮ್ಗೆ ಮರಳಿರುವುದು ತಂಡಕ್ಕೆ ಕೊಂಚ ಚೇತರಿಕೆಯಾಗಿದೆ.
Advertisement
ಚೆನ್ನೈ ವಿರುದ್ಧ ಆಸ್ಟ್ರೇಲಿಯದ ಬಿಗ್ ಹಿಟ್ಟರ್ ಆಶrನ್ ಟರ್ನರ್ ಕಣಕಿಳಿಯುವ ಸಾಧ್ಯತೆ ಇದೆ. ಆಲ್‌ರೌಂಡರ್ ಬೆನ್ ಸ್ಟೋಕ್ಸ್ , ಬಟ್ಲರ್, ಸ್ಮಿತ್ ನಿರೀಕ್ಷಿತ ಪ್ರದರ್ಶನ ನೀಡಿದರೆ ರಾಜಸ್ಥಾನ್ ದೊಡ್ಡ ಮೊತ್ತ ಕಲೆಹಾಕುವಲ್ಲಿ ಅನುಮಾನವಿಲ್ಲ. ಬೌಲಿಂಗ್‌ನಲ್ಲಿ ಕನ್ನಡಿಗರಾದ ಕೃಷ್ಣಪ್ಪ ಗೌತಮ್, ಶ್ರೇಯಸ್ ಗೋಪಾಲ್ ಉತ್ತಮ ಲಯದಲ್ಲಿದ್ದಾರೆ. ಇವರಿಗೆ ವೇಗಿಗಳಾದ ಜಯ್‌ದೇವ್ ಉನಾದ್ಕತ್, ಧವಳ್ ಕುಲಕರ್ಣಿ ಸಾಥ್ ನೀಡಿದರೆ ರಾಜಸ್ಥಾನ್‌ಗೆ ಗೆಲುವು ಒಲಿಯುವುದು ಕಷ್ಟವೇನಲ್ಲ.