Advertisement
ಬಹಿರಂಗವಾದದ್ದು ಹೇಗೆ?
ಕುಸಿದ ಆರ್ಥಿಕತೆ, ಆಹಾರ ಕೊರತೆ, ಬಡತನ, ದಾಖಲೆಯ ಹಣದುಬ್ಬರ, ಏರುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆ, ರಾಜಕೀಯ ಅಸ್ಥಿರತೆ ಹೀಗೆ ಸಾಲು ಸಾಲು ಸಮಸ್ಯೆಗಳಿಂದ ಪಾಕಿಸ್ಥಾನದಲ್ಲಿ ಜನರು ಜೀವನ ನಡೆಸಲು ಕಷ್ಟ ಪಡುತ್ತಿದ್ದಾರೆ. ಇತರ ದೇಶಗಳಿಂದ ಪಡೆದುಕೊಳ್ಳುತ್ತಿ ರುವ ವಿತ್ತೀಯ ನೆರವನ್ನು ಕೂಡ ಪಾಕಿಸ್ಥಾನ ಸರಕಾರ ಅಭಿವೃದ್ಧಿ ಯೋಜನೆಗಳು, ಜನರ ಸಮಸ್ಯೆಗಳನ್ನು ಪರಿಹರಿ ಸಲು ವಿನಿಯೋಗಿಸದೇ ಶಸ್ತ್ರಾಸ್ತ್ರ ಖರೀದಿ, ಭಯೋತ್ಪಾದಕರಿಗೆ ನೆರವು ಮತ್ತಿತರ ಕಾರ್ಯಗಳಿಗೆ ಬಳಸುತ್ತಿದೆ. ಈ ಕಾರಣಗಳಿಂದ ಪಾಕ್ ಜನರು ವಲಸೆ ಹೋಗುತ್ತಿದ್ದು, ಹೆಚ್ಚಿನವರು ಭಿಕ್ಷಾಟನೆಯನ್ನೇ ಬದುಕುವ ದಾರಿಯನ್ನಾಗಿ ಮಾಡಿಕೊಂಡಿದ್ದಾರೆ. ಪಾಕ್ ಸರಕಾರಕ್ಕೆ ಈ ವಿಷಯ ತಿಳಿದಿದ್ದರೂ ಅದು ಮೌನಕ್ಕೆ ಶರಣಾಗಿದೆ.
Related Articles
ವರ್ಲ್ಡ್ ಬ್ಯಾಂಕ್ ಪಾಕಿಸ್ಥಾನದ ಆರ್ಥಿಕ ಪರಿಸ್ಥಿತಿಯ ಕುರಿತು ಇತ್ತೀಚೆಗೆ ವರದಿಯೊಂದನ್ನು ಬಿಡುಗಡೆ ಮಾಡಿತ್ತು. ಇದರ ಪ್ರಕಾರ 9.5 ಕೋಟಿ ಜನರು ಪಾಕಿಸ್ಥಾನದಲ್ಲಿ ಬಡತನ ರೇಖೆಗಿಂತ ಕೆಳಗಿದ್ದಾರೆ. ಅಂದರೆ ಪಾಕಿಸ್ಥಾನದ ಒಟ್ಟು ಜನಸಂಖ್ಯೆ 24 ಕೋಟಿಯ ಶೇ.39.4ರಷ್ಟು. ಇವರ ದಿನದ ಸಂಬಳ 1,048 ಪಾಕಿಸ್ಥಾನ ರೂಪಾಯಿಗಳು. ಇದು ಭಾರತದ 300ರೂಪಾಯಿಗೆ ಸಮವಾಗಿದೆ. 2022ರಲ್ಲಿ ಶೇ.34.2ರಷ್ಟಿದ್ದ ಬಡತನವು, ಶೇ.5ರಷ್ಟು ಏರಿಕೆ ಕಂಡು, ಶೇ.39.4ರಷ್ಟಾಗಿದೆ. ಕಳೆದ ಒಂದು ವರ್ಷದಲ್ಲಿ ಅಂದಾಜು 1.25 ಕೋಟಿ ಜನರು ಬಡತನ ರೇಖೆಗಿಂತಲೂ ಕೆಳಗೆ ಬಂದಿದ್ದಾರೆ.
Advertisement
ಯಾತ್ರೆಯ ನೆಪದಲ್ಲಿ ವಿದೇಶಗಳಿಗೆ ವಲಸೆ
ಮೆಕ್ಕಾಕ್ಕೆ ತೆರಳುವ ಯಾತ್ರಿಗಳಿಗೆ ನೀಡಲಾಗುವ “ಉಮ್ರಾ ವೀಸಾ’ಗಳಡಿ ಪಾಕಿಸ್ಥಾನಿ ನಾಗರಿಕರು ಮೆಕ್ಕಾ, ಸೌದಿ ಅರೇಬಿಯಾ, ಇರಾಕ್ ದೇಶಗಳಿಗೆ ತೆರಳುತ್ತಾರೆ. ಅನಂತರ ಅಲ್ಲಿಯೇ ನೆಲೆಸಿ ಭಿಕ್ಷಾಟನೆಯಲ್ಲಿ ತೊಡಗುತ್ತಾರೆ. ಮೆಕ್ಕಾ ಹಾಗೂ ಇತರ ಸ್ಥಳಗಳಲ್ಲಿರುವ ಭಿಕ್ಷುಕರಲ್ಲಿ ಪಾಕಿಸ್ಥಾನಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.
ಸೌದಿ, ಇರಾಕ್ ಜೈಲುಗಳಲ್ಲಿ ಪಾಕ್ ಕೈದಿಗಳು!ಸುಮಾರು 1.6 ಮಿಲಿಯನ್ ಪಾಕಿಸ್ಥಾನಿಗಳು ಯುಎಇಯಲ್ಲಿ ಹಾಗೂ 2 ಲಕ್ಷ ಪಾಕಿಸ್ಥಾನಿಗಳು ಕತಾರ್‌ನಲ್ಲಿ ನೆಲೆಸಿದ್ದಾರೆ. ಸೌದಿ ಅರೇಬಿಯಾ ಹಾಗೂ ಇರಾಕ್‌ಅಧಿಕಾರಿಗಳು ಅಲ್ಲಿನ ಜೈಲುಗಳು ಪಾಕಿಸ್ಥಾನಿಗಳಿಂದಲೇ ತುಂಬಿ ಹೋಗಿದೆ ಎಂದೂ ಹೇಳಿದ್ದಾರೆ. ಇನ್ನು ಪಾಕಿಸ್ಥಾನದಲ್ಲಿ ನಿರುದ್ಯೋಗ ಸಮಸ್ಯೆ ಮಿತಿಮೀರಿರುವುದರಿಂದ ಸಹಸ್ರಾರು ಸಂಖ್ಯೆಯ ಎಂಜಿನಿಯರ್‌ಗಳು, ವೈದ್ಯಕೀಯ ಸಹಿತ ಉನ್ನತ ಶಿಕ್ಷಣ ಪಡೆದವರು ಕೆಲಸವಿಲ್ಲದೇ ಅಲೆದಾಟ ನಡೆಸುವ ಪರಿಸ್ಥಿತಿ ಸೃಷ್ಟಿಯಾಗಿದೆ. ಈ ಕಾರಣ ಪಾಕ್‌ನ ವಿದ್ಯಾವಂತರೂ ಉದ್ಯೋಗ ಅರಸಿ ಜಪಾನ್ ಸೇರಿದಂತೆ ಇತರ ದೇಶಗಳಿಗೆ ತೆರಳುತ್ತಿದ್ದಾರೆ. ಇರಾಕ್, ಸೌದಿ ಸರಕಾರಗಳಿಂದ ಎಚ್ಚರಿಕೆ ಇರಾಕ್, ಸೌದಿ ಅರೇಬಿಯಾದ ಬೀದಿಬೀದಿಗಳಲ್ಲಿ ಪಾಕಿಸ್ಥಾನ ಮೂಲದ ಭಿಕ್ಷುಕರ ಹಾವಳಿ ಕಂಡುಬರುತ್ತಿದ್ದು ಈ ಭಿಕ್ಷುಕರು ಕಳ್ಳತನದಂತಹ ಅಪರಾಧ ಕೃತ್ಯಗಳನ್ನು ಎಸಗತೊಡಗಿದ್ದಾರೆ. ಈ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಮತ್ತು ಇರಾಕ್ ಸರಕಾರ ಪಾಕಿಸ್ಥಾನಕ್ಕೆ ನೇರ ಎಚ್ಚರಿಕೆಯನ್ನು ನೀಡಿ ತನ್ನ ನಾಗರಿಕರ ವಲಸೆಗೆ ಕಡಿವಾಣ ಹಾಕುವಂತೆ ನಿರ್ದೇಶನ ನೀಡಿದೆ. ವಿಪರ್ಯಾಸ ಎಂದರೆ ಪಾಕಿಸ್ಥಾನ ಸರಕಾರಕ್ಕೆ ತನ್ನ ನಾಗರಿಕರ ಈ ಎಲ್ಲ ವರ್ತನೆಯ ಬಗೆಗೆ ಸಂಪೂರ್ಣ ಅರಿವಿದ್ದರೂ ಭಿಕ್ಷಾಟನೆಗಾಗಿ ವಿದೇಶಗಳಿಗೆ ವಲಸೆ ಹೋಗುವವರ ಮತ್ತು ತನ್ನ ಪ್ರಜೆಗಳನ್ನು ಸಾಗಾಟ ಮಾಡುವ ಮಾನವ ಕಳ್ಳಸಾಗಣೆ ಜಾಲದ ವಿರುದ್ಧ ಯಾವುದೇ ಕ್ರಮವನ್ನೂ ಕೈಗೊಳ್ಳುತ್ತಿಲ್ಲ. ಸಂಪೂರ್ಣ ದಿವಾಳಿಯಾಗಿರುವ ಪಾಕಿಸ್ಥಾನ ಸರಕಾರಕ್ಕೆ ತನ್ನ ಪ್ರಜೆಗಳ ಪ್ರಾಥಮಿಕ ಅಗತ್ಯವನ್ನು ಪೂರೈಸಲು ಮತ್ತು ಭದ್ರತೆಯನ್ನೂ ನೀಡಲು ಸಾಧ್ಯವಾಗುತ್ತಿಲ್ಲ. ~ ವಿಧಾತ್ರಿ ಭಟ್, ಉಪ್ಪುಂದ