Advertisement
ಥಾಯ್ ಲ್ಯಾಂಡ್ ರಾಜ ಮಹಾ ವಜಿರಾಲೋಂಗ್ ಕೋರ್ನಾ (67ವರ್ಷ) ಲಾಕ್ ಡೌನ್ ಉಲ್ಲಂಘಿಸಿ ವಿಶೇಷ ಅನುಮತಿ ಮೇರೆಗೆ ಇಡೀ ಐಶಾರಾಮಿ ಗ್ರ್ಯಾಂಡ್ ಹೋಟೆಲ್ ಅನ್ನು ಬುಕ್ ಮಾಡಿಕೊಂಡಿರುವುದಾಗಿ ದ ಇಂಡಿಪೆಂಡೆಂಟ್ ತಿಳಿಸಿರುವುದಾಗಿ ಹೇಳಿದೆ.ಸ್ವಯಂ ಐಸೋಲೇಶನ್ ನಲ್ಲಿರುವ ರಾಜ ತನ್ನೊಂದಿಗೆ ಅಡುಗೆ ಸೇವಕರು ಹಾಗೂ 20 ಮಂದಿ ಸಖಿಯರನ್ನು ಕರೆದೊಯ್ದಿರುವುದಾಗಿ ಬ್ರಿಟನ್ ಪತ್ರಿಕೆ ವರದಿ ಮಾಡಿರುವುದಾಗಿ ಜರ್ಮನ್ ಟ್ಯಾಬ್ಲಾಯ್ಡ್ ಬಿಲ್ಡ್ ವರದಿ ಮಾಡಿದೆ.
ಪಟ್ಟಾಭಿಷೇಕಕ್ಕೆ ಕೆಲವು ದಿನ ಇರುವಾಗ ತನ್ನ ಭದ್ರತಾಪಡೆಯ ಉಪ ಕಮಾಂಡರ್ ಸುಥಿತಾ ಅವರನ್ನು ವಿವಾಹವಾಗಿದ್ದರು.
Related Articles
Advertisement
ಕೋವಿಡ್ ನಂತಹ ಮಾರಣಾಂತಿಕ ವೈರಸ್ ಹಬ್ಬುತ್ತಿರುವ ಸಂದರ್ಭದಲ್ಲಿ ರಾಜ ದೇಶ ಬಿಟ್ಟು ಐಶಾರಾಮಿ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿರುವುದಕ್ಕೆ ಥಾಯ್ ಲ್ಯಾಂಡ್ ನಲ್ಲಿ ಆಕ್ರೋಶ ಭುಗಿಲೆದ್ದಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಮಗೆ ರಾಜ ಯಾಕೆ ಬೇಕು ಎಂಬ ಹ್ಯಾಶ್ ಟ್ಯಾಗ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಥಾಯ್ ಲ್ಯಾಂಡ್ ನಲ್ಲಿ 1500 ಕೋವಿಡ್ 19 ಪ್ರಕರಣಗಳು ಪತ್ತೆಯಾಗಿದ್ದು, ಸುಮಾರು 9 ಮಂದಿ ಸಾವನ್ನಪ್ಪಿದ್ದು, ಫೆಬ್ರುವರಿಯಿಂದ ಈವರೆಗೂ ರಾಜ ಥಾಯ್ ಲ್ಯಾಂಡ್ ನಲ್ಲಿ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ ಎಂದು ವರದಿ ಹೇಳಿದೆ.