Advertisement

ಬೌನ್ಸರ್‌, ಸಿಸಿ ಕ್ಯಾಮೆರಾ ಬಳಿಕ ಟೊಮ್ಯಾಟೋ ರಕ್ಷಣೆಗೆ ಬಂದ ಬುಸ್… ಬುಸ್…

10:52 AM Jul 15, 2023 | Team Udayavani |

ಟೊಮ್ಯಾಟೋ ಬೆಲೆ ಏರಿಕೆ ಬಳಿಕ ದಿನಕ್ಕೊಂದಾದರೂ ಟೊಮ್ಯಾಟೋ ಬಗೆಗಿನ ಹೊಸ ಹೊಸ ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಕಾಣ ಸಿಗುತ್ತದೆ.

Advertisement

ಟೊಮ್ಯಾಟೋ ಬೆಲೆ ಏರಿಕೆಯಾದಾಗಿನಿಂದ ಕಳ್ಳ ಕಾಕರ ಸಂಖ್ಯೆಯೂ ಹೆಚ್ಚಾಗಿದೆ ಅಂಗಡಿಯಲ್ಲಿ ಮಾರಾಟ ಮಾಡಲು ಟೊಮ್ಯಾಟೋ ರಕ್ಷಣೆಗೆ ಬೌನ್ಸರ್ ಗಳನ್ನು ನೇಮಿಸಿದ ಘಟನೆ ಕೂಡಾ ನಡೆದಿದೆ ಅಷ್ಟು ಮಾತ್ರವಲ್ಲದೆ ಕೆಲವೆಡೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ರಕ್ಷಣೆ ನೀಡಲಾಯಿತು.

ಇದಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಟೊಮ್ಯಾಟೋ ಬಗ್ಗೆ ನಾನಾ ರೀತಿಯ ಹಾಸ್ಯಗಳು ಹರಿದಾಡಲು ಆರಂಭವಾಗ ತೊಡಗಿದೆ.

ಇದೀಗ ಮನೆಯೊಂದರಲ್ಲಿ ನಾಗರ ಹಾವೊಂದು ಟೊಮ್ಯಾಟೋ ಕಾಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಅಸಲಿಗೆ ಇದು ಮನೆಯೊಳಗೆ ಬಂದು ಅವಿತು ಕೂರಲು ಟೊಮ್ಯಾಟೋ ಇದ್ದ ಕಡೆಗೆ ಹೋಗಿದೆ ಈ ವೇಳೆ ಹಾವಿನ ರಕ್ಷಣೆಗೆ ಬಂದ ವ್ಯಕ್ತಿ ಹಾವು ಟೊಮ್ಯಾಟೋ ಬಳಿ ಇರುವುದನ್ನು ಕಂಡು ವಿಡಿಯೋ ಮಾಡಿ ತಮಾಷೆಗೆ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ.

Advertisement

ಮಿರ್ಜಾಮ್ ಎಂಬ ಹೆಸರಿನ ವ್ಯಕ್ತಿಯೊಬ್ಬ ಇನ್ಸ್ಟಾ ಗ್ರಾಮ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡಿದ್ದು ಟೊಮ್ಯಾಟೋ ಬೆಲೆ ಏರಿಕೆಯಿಂದ ಎಲ್ಲ ಕಡೆ ಟೊಮ್ಯಾಟೋ ರಕ್ಷಣೆ ಮಾಡುವುದೇ ಸಾಹಸದ ಕೆಲಸವಾಗಿರುವಾಗ ಹಾವೊಂದು ಟೊಮ್ಯಾಟೋ ಬಳಿ ನಿಂತಿರುವುದು ಸದ್ಯದ ಪರಿಸ್ಥಿತಿಗೆ ಸರಿಸಾಟಿಎಂಬಂತಿದೆ.

ಇದನ್ನೂ ಓದಿ: ಮದುವೆಯಾದ ಎರಡೇ ಗಂಟೆಯಲ್ಲಿ ಹೆಂಡತಿಗೆ ತ್ರಿವಳಿ ತಲಾಖ್ ನೀಡಿದ ಪತಿ… ಇಲ್ಲಿದೆ ಕಾರಣ

Advertisement

Udayavani is now on Telegram. Click here to join our channel and stay updated with the latest news.

Next