Advertisement

ಎಸ್ಎಸ್ಎಲ್ ಸಿ ಪರೀಕ್ಷೆಯ ದಿನಗಳಲ್ಲಿ ಮತ್ತೆ ಲಾಕ್ ಡೌನ್ ಮಾಡಬೇಕು: ಕಿಮ್ಮನೆ ರತ್ನಾಕರ

12:54 PM Jun 11, 2020 | keerthan |

ಶಿವಮೊಗ್ಗ: ರಾಜ್ಯದಲ್ಲಿ ಎಸ್‌ಎಸ್ಎಲ್ ಸಿ ಪರೀಕ್ಷೆಯನ್ನು ಮುಂಜಾಗ್ರತಾ ಕ್ರಮ ಕೈಗೊಂಡು ಮಾಡಬೇಕು. ಪರೀಕ್ಷೆ ನಡೆಯುವ ಆರು ದಿನಗಳ ಕಾಲ ಮತ್ತೆ ಲಾಕ್ ಡೌನ್ ಮಾಡಬೇಕು. ವಿದ್ಯಾರ್ಥಿಗಳು ಹಾಗೂ ಅವರ ಪಾಲಕರು ಮಾತ್ರ ಹೊರಗೆ ಹೋಗಲು ಅವಕಾಶ ನೀಡಬೇಕು ಎಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಹೇಳಿದ್ದಾರೆ.

Advertisement

ಶಿವಮೊಗ್ಗದಲ್ಲಿ ಮಾತಮಾಡಿದ ಅವರು, ಶಾಲೆಗಳನ್ನು ಆಗಸ್ಟ್ 15 ರ ವರೆಗೆ ಯಾವುದೇ ಕಾರಣಕ್ಕೂ ಆರಂಭಿಸಬಾರದು.ಇಂದಿನ ಸ್ಥಿತಿಗತಿಯಲ್ಲಿ ನಾವು ಹಸಿವು ಹಾಗೂ ಸಾವನ್ನು ಮೆಟ್ಟಿನಿಲ್ಲಬೇಕಿದೆ.ಇಂಥ ಸಂದರ್ಭದಲ್ಲಿ ಮಕ್ಕಳನ್ನು ಬಲಿಕೊಡುವುದು ಸರಿಯಲ್ಲ.ಜೂನ್ ಅಂತ್ಯ ಅಥವಾ ಜುಲೈ ನಲ್ಲಿ ಕೋವಿಡ್ ಸ್ಥಿತಿಗತಿ ಸಂಪೂರ್ಣವಾಗಿ ತಿಳಿಯಲಿದೆ. ಬಳಿಕ ಶಾಲೆ ‌ಆರಂಭಿಸುವ ಕುರಿತು ತೀರ್ಮಾನ ಕೈಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಖಾಸಗಿ ಶಿಕ್ಷಣ ಸಂಸ್ಥೆಗಳು ವಸೂಲಿ ಮಾಡುವ ಶುಲ್ಕವನ್ನು ಅರ್ಧಕ್ಕಿಳಿಸಬೇಕು. ಇದನ್ನು ವಿರೋಧಿಸುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಸರ್ಕಾರ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು. ಈಗ ಬಂದಿರುವ ಸಮಸ್ಯೆ ಇಡೀ ಪ್ರಪಂಚದ‌ ಸಮಸ್ಯೆ. ಕೋವಿಡ್ 19 ಗೆ ಸಂಬಂಧಿಸಿದಂತೆ ವಿಶೇಷ ಕಾನೂನುಗಳಿವೆ. ಆ ಕಾನೂನುಗಳನ್ನೇ ಖಾಸಗಿ ಶಿಕ್ಷಣ‌ಸಂಸ್ಥೆಗಳ ಮೇಲೆಯೂ ಬಳಕೆ ಮಾಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next