Advertisement

ಅಧಿಕಾರಿಗಳಿಂದ ಬಂಡೆ ಕಾರ್ಮಿಕರ ಮೇಲೆ ನಿರಂತರ ದಬ್ಬಾಳಿಕೆಗೆ ಕಿಮ್ಮನೆ ಖಂಡನೆ

03:15 PM Aug 26, 2022 | Team Udayavani |

ತೀರ್ಥಹಳ್ಳಿ : ಮೇಲಿನಕುರುವಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮೇಲಿನ ಕುರುವಳ್ಳಿಯಲ್ಲಿ ವಾಸವಾಗಿರುವ ಬಂಡೆ ಕೂಲಿ ಕಾರ್ಮಿಕರ ಮೇಲೆ ನಿರಂತರವಾಗಿ ದಬ್ಬಾಳಿಕೆ ನಡೆಸುತ್ತಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವಿರುದ್ಧ ಮೇಲಿನಕುರುವಳ್ಳಿಯ ಕಲ್ಲು ಕುಟಿಕರ ಸಹಾಕಾರ ಸಂಘದ ಕಛೇರಿಯಲ್ಲಿ ಕಾರ್ಮಿಕರ ಸಭೆಯಲ್ಲಿ ಭಾಗವಹಿಸಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಕಾರ್ಮಿಕರ ಸಮಸ್ಯೆಯನ್ನು ಆಲಿಸಿದರು.

Advertisement

ನಿರಂತರವಾಗಿ ಅಧಿಕಾರಿಗಳು ನಡೆಸುತ್ತಿರುವ ದಬ್ಬಾಳಿಕೆಯ ಸಂಪೂರ್ಣ ಮಾಹಿತಿ ಪಡೆದ ಕಿಮ್ಮನೆ ನಂತರ ತಕ್ಷಣ ಸ್ಥಳದಲ್ಲಿಯೇ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳಿಗೆ ಕರೆ ಮಾಡಿ ಸೂಕ್ತ ವ್ಯವಸ್ಥೆ ಕಲ್ಪಿಸಿ ಜೊತೆಗೆ ಮೊನ್ನೆ ಶನಿವಾರದ ದಿನ ಕಷ್ಟ ಪಟ್ಟು ಒಡೆದಿದ್ದ ಸುಮಾರು 150 ಕ್ಕೂ ಹೆಚ್ಚು ಬೇಲಿ ಕಂಬವನ್ನು ಭೂ ವಿಜ್ಞಾನಿ ಅಧಿಕಾರಿಯೂ ಒಡೆದು ಪುಡಿ ಮಾಡಿ ಹಾಳು ಮಾಡಿದ್ದು ಅಧಿಕಾರಿಗಳಿಂದ ಕಾರ್ಮಿಕರಿಗೆ ಆದಂತಹ ನಷ್ಟವನ್ನು ಭರಿಸಿ ಕೊಡಬೇಕೆಂದು ತಾಕೀತು ಮಾಡಿದರು.

ಶೀಘ್ರದಲ್ಲಿ ಈ ವಿಚಾರವಾಗಿ ಕಾರ್ಮಿಕರ ಪರವಾಗಿ ಸೂಕ್ತ ಕ್ರಮವನ್ನು ಕೈಗೊಂಡು ಕಾರ್ಮಿಕರಿಗೆ ಬಂಡೆಯಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸಿ ಕೊಡದಿದ್ದಲ್ಲಿ ಉಗ್ರ ಹೋರಾಟ ಕೈಗೊಳ್ಳುವುದಲ್ಲದೆ ಕಾರ್ಮಿಕ ವಿರೋಧಿ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ತಾಲೂಕು ಕಛೇರಿ ಮುಂಭಾಗದಲ್ಲಿ ಉಪವಾಸ ಕೂರುವುದಾಗಿ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಸ್ಥಳೀಯ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಭವ್ಯ ಉಪಾಧ್ಯಕ್ಷರಾದ ಹೊರಬೈಲು ಪ್ರಭಾಕರ್, ಅಮರನಾಥ ಶೆಟ್ಟಿ,ರೆಹಮತ್ಉಲ್ಲ ಅಸಾದಿ,ವೈ ನಾಗೇಂದ್ರ,ಬಂಡೆ ವೆಂಕಟೇಶ್, ನಾಗರಾಜ್ ಕುರುವಳ್ಳಿ, ಆನಂದ್, ಕೆಸ್ತೂರ್ ಮಂಜುನಾಥ, ಮುತ್ತುಗುಂಡಿ ಪ್ರವೀಣ್, ಅನಿತಾ ಪ್ರವೀಣ್, ಕಲ್ಲು ಕುಟಿಕರ ಸಹಾಕಾರ ಸಂಘದ ಅಧ್ಯಕ್ಷರು ಪದಾಧಿಕಾರಿಗಳು , ಪಕ್ಷದ ಪದಾಧಿಕಾರಿಗಳು ,ಮುಖಂಡರುಗಳು, ಕೂಲಿ ಕಾರ್ಮಿಕರು ಸೇರಿದಂತೆ ಅನೇಕರು ಭಾಗವಹಿಸಿದ್ದರು

Advertisement

Udayavani is now on Telegram. Click here to join our channel and stay updated with the latest news.

Next