Advertisement

Moscow ಶೀಘ್ರವೇ ವ್ಲಾಡಿಮಿರ್‌ ಪುಟಿನ್‌-ಕಿಮ್‌ ಜಾಂಗ್‌ ಉನ್‌ ಭೇಟಿ

10:51 PM Sep 11, 2023 | Team Udayavani |

ಸಿಯೋಲ್‌:ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರನ್ನು ಶೀಘ್ರದಲ್ಲಿಯೇ ಮಾಸ್ಕೋದಲ್ಲಿ ಭೇಟಿಯಾಗಲಿದ್ದಾರೆ. ಅಧ್ಯಕ್ಷ ಪುಟಿನ್‌ ಆಹ್ವಾನದ ಮೇರೆಗೆ ಸರ್ವಾಧಿಕಾರಿ ರೈಲಿನ ಮೂಲಕ ಈ ಪ್ರವಾಸ ಕೈಗೊಳ್ಳಲಿದ್ದಾರೆ.

Advertisement

ಮೂರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕಿಮ್‌ ಜಾಂಗ್‌ ಉನ್‌ ವಿದೇಶ ಪ್ರವಾಸ ಮಾಡುತ್ತಿರುವುದು ಮಹತ್ವ ಪಡೆದಿದ್ದರೆ, ಐರೋಪ್ಯ ಒಕ್ಕೂಟದ ದೃಷ್ಟಿಯಿಂದ ನೋಡುವುದಿದ್ದರೆ ಭಾರೀ ಹಿನ್ನಡೆಯೇ ಆಗಿದೆ.

ಉಕ್ರೇನ್‌ ಮೇಲೆ ದಾಳಿ ನಡೆಸಿ ಜಗತ್ತಿನ ಕೆಂಗಣ್ಣಿಗೆ ತುತ್ತಾಗಿರುವ ಪುಟಿನ್‌, ಈಗ ಸರ್ವಾಧಿಕಾರಿಗೆ ಮಾನ್ಯತೆ ನೀಡುವ ಮೂಲಕ ಮತ್ತೂಮ್ಮೆ ಟೀಕೆಗೆ ಗುರಿಯಾಗುವ ಸಾಧ್ಯತೆಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next