Advertisement

North Korea: ಯುದ್ಧಕ್ಕೆ ಸಿದ್ದರಾಗಿ..: ಮಿಲಿಟರಿ ಅಧಿಕಾರಿಗಳಿಗೆ ಕಿಮ್ ಜಾಂಗ್ ಸೂಚನೆ

11:06 AM Aug 10, 2023 | Team Udayavani |

ಸಿಯೋಲ್: ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಅವರು ತನ್ನ ಮಿಲಿಟರಿಯ ಹಿರಿಯ ಜನರಲ್ ನನ್ನು ವಜಾಗೊಳಿಸಿದ್ದು, ಮುಂದೆ ಬರಬಹುದಾದ ಯುದ್ಧಕ್ಕೆ ಹೆಚ್ಚಿನ ಸಿದ್ದತೆ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Advertisement

ಶಸ್ತ್ರಾಸ್ತ್ರಗಳ ಉತ್ಪಾದನೆ ಹೆಚ್ಚಿಸಿ ಮತ್ತು ಮಿಲಿಟರಿ ಡ್ರಿಲ್ಸ್ ಗಳನ್ನು ವಿಸ್ತರಿಸಿ ಎಂದು ಕಿಮ್ ಜಾಂಗ್ ಹೇಳಿದ್ದಾರೆ.

ಉತ್ತರ ಕೊರಿಯಾದ ಶತ್ರುಗಳನ್ನು ತಡೆಯಲು ಕ್ರಮಗಳ ಯೋಜನೆಗಳನ್ನು ಚರ್ಚಿಸಿದ ಕೇಂದ್ರೀಯ ಮಿಲಿಟರಿ ಆಯೋಗದ ಸಭೆಯಲ್ಲಿ ಕಿಮ್ ಈ ಮಾತುಗಳನ್ನು ಹೇಳಿದ್ದಾರೆ ಎಂದು ವರದಿಯಾಗಿದೆ.

ಮಿಲಿಟರಿಯ ಉನ್ನತ ಜನರಲ್ ಜನರಲ್ ಸ್ಟಾಫ್ ಪಾಕ್ ಸು ಇಲ್ ಬದಲಿಗೆ ಜನರಲ್ ರಿ ಯೋಂಗ್ ಗಿಲ್ ಅವರನ್ನು ಹೆಸರಿಸಲಾಗಿದೆ ಎಂದು ಕೆಸಿಎನ್ಎ ವರದಿ ಮಾಡಿದೆ. ರಿ ರಕ್ಷಣಾ ಸಚಿವರಾಗಿ ತಮ್ಮ ಪಾತ್ರವನ್ನು ಉಳಿಸಿಕೊಳ್ಳುತ್ತಾರೆಯೇ ಎಂಬುದು ಸ್ಪಷ್ಟವಾಗಿಲ್ಲ.

ಇದನ್ನೂ ಓದಿ:NADA test: ರವೀಂದ್ರ ಜಡೇಜಗೆ ಐದು ತಿಂಗಳಲ್ಲಿ ಮೂರು ಬಾರಿ ಉದ್ದೀಪನ ಟೆಸ್ಟ್!

Advertisement

ಶಸ್ತ್ರಾಸ್ತ್ರಗಳ ಉತ್ಪಾದನೆ ಹೆಚ್ಚಿಸಿ ಎಂದೂ ಕಿಮ್ ಜಾಂಗ್ ಸೂಚನೆ ನೀಡಿದ್ದಾರೆ. ಕಳೆದ ವಾರ ಅವರು ವೆಪನ್ ಫ್ಯಾಕ್ಟರಿಗೆ ಭೇಟಿ ನೀಡಿದ್ದು, ಅಲ್ಲಿ ಹೆಚ್ಚು ಕ್ಷಿಪಣಿ ಎಂಜಿನ್‌ ಗಳು, ಫಿರಂಗಿ ಮತ್ತು ಇತರ ಶಸ್ತ್ರಾಸ್ತ್ರಗಳನ್ನು ನಿರ್ಮಿಸಲು ಸೂಚಿಸಿದ್ದರು.

ಉತ್ತರ ಕೊರಿಯಾ ದೇಶವು ಉಕ್ರೇನ್ ವಿರುದ್ಧದ ಯುದ್ದಕ್ಕೆ ರಷ್ಯಾಕ್ಕೆ ಫಿರಂಗಿ ಶೆಲ್ ಗಳು, ರಾಕೆಟ್‌ ಗಳು ಮತ್ತು ಕ್ಷಿಪಣಿಗಳನ್ನು ಸರಬರಾಜು ಮಾಡುತ್ತಿದೆ ಎಂದು ಯುಎಸ್ ಎ ಆರೋಪಿಸಿತ್ತು. ರಷ್ಯಾ ಮತ್ತು ಉತ್ತರ ಕೊರಿಯಾ ಆ ಆರೋಪಗಳನ್ನು ನಿರಾಕರಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next