Advertisement

2ನೇ ಹೆಂಡತಿಯನ್ನು ಸೇರಲು ಮಗನ ಎದುರೇ ಪತ್ನಿಯ ಕೊಂದ ಪತಿ

03:53 PM Oct 26, 2017 | udayavani editorial |

ಹೊಸದಿಲ್ಲಿ : ತನ್ನ ಎರಡು ವರ್ಷ ಪ್ರಾಯದ ಮಗನ ಎದುರೇ ಗುಂಡೆಸೆದು ಕೊಲ್ಲಲ್ಪಟ್ಟಿದ್ದ 34ರ ಹರೆಯದ ದಿಲ್ಲಿ  ಮಹಿಳೆಯ ನಿಗೂಢ ಕೊಲೆ ರಹಸ್ಯವನ್ನು ಪೊಲೀಸರು ಭೇದಿಸಿದ್ದಾರೆ.

Advertisement

ತನ್ನ ಎರಡನೇ ಹೆಂಡತಿ ಆಯಿಷಾ ಳನ್ನು ಸೇರಲು ತಾನು ತನ್ನ ಮೊದಲ ಹೆಂಡತಿ ಪ್ರಿಯಾ ಮೆಹ್ರಾ ಳನ್ನು ಕೊಂದೆ ಎಂದು ಆಕೆಯ ಪತಿ, ದಿಲ್ಲಿಯಲ್ಲಿ ರೆಸ್ಟೋರಾಂಟ್‌ ಮಾಲಕನಾಗಿರುವ ಪಂಕಜ್‌ ಮೆಹ್ರಾ ಪೊಲೀಸರಲ್ಲಿ ತಪ್ಪೊಪ್ಪಿಕೊಂಡಿದ್ದಾನೆ.

ನಿನ್ನೆ ಬುಧವಾರ ನಸುಕಿನ ವೇಳೆ ಪ್ರಿಯಾ ಗುಂಡೇಟಿಗೆ ಬಲಿಯಾಗಿದ್ದಳು. ದಿಲ್ಲಿಯ ಶಾಲಿಮಾರ್‌ ಬಾಗ್‌ನಲ್ಲಿ ತಾನು, ಹೆಂಡತಿ ಪ್ರಿಯಾ ಮತ್ತು ಮಗು, ಕಾರಿನಲ್ಲಿ ಸಾಗುತ್ತಿದ್ದಾಗ ಯಾರೋ ಅಪರಿಚಿತ ಹಂತಕರು ದಾಳಿ ನಡೆಸಿ ತನ್ನ ಹೆಂಡತಿ ಪ್ರಿಯಾಳನ್ನು ಗುಂಡಿಕ್ಕಿ ಸಾಯಿಸಿದರು ಎಂದು ಪತಿ ಪಂಕಜ್‌ ಮೆಹ್ರಾ ಪೊಲೀಸರಲ್ಲಿ ಹೇಳಿದ್ದ. 

“ನನಗೆ ಸಾಲ ನೀಡಿದ್ದ ವ್ಯಕ್ತಿಯೇ ನನ್ನ ಹೆಂಡತಿಯನ್ನು ಕೊಲ್ಲಿಸಿದ್ದಾನೆ’ ಎಂದಿದ್ದ ಮೆಹ್ರಾಗೆ ಎರಡನೇ ಹೆಂಡತಿ ಇದ್ದು ಆಕೆಯನ್ನು ಸೇರಲು ತನ್ನ ಮೊದಲ ಹೆಂಡತಿಯನ್ನು ಯಾರೋ ಕೊಂದರೆಂದು ಆತ ನಾಟಕವಾಡಿದ ಎಂದು ಪೊಲೀಸ್‌ ಡೆಪ್ಯುಟಿ ಕಮಿಷನರ್‌ ಮಿಲಿಂದ್‌ ಮಹಾದೇವ್‌ ದುಂಬೆರೆ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next