Advertisement

ಬಾಗ್ದಾದಿ ಹತ್ಯೆ ಬೆನ್ನಲ್ಲೇ ಸಿರಿಯಾದಲ್ಲಿ ಟರ್ಕಿ ಸೇನಾಪಡೆಯಿಂದ ಬಾಗ್ದಾದಿ ಸಹೋದರಿ ಬಂಧನ

09:20 AM Nov 06, 2019 | Team Udayavani |

ವಾಷಿಂಗ್ಟನ್:ಐಸಿಸ್ ಉಗ್ರಗಾಮಿ ಸಂಘಟನೆಯ ಸ್ಥಾಪಕ ಅಬು ಬಕರ್ ಅಲ್ ಬಾಗ್ದಾದಿಯನ್ನು ಅಮೆರಿಕ ಪಡೆ ಇತ್ತೀಚೆಗೆ ಹತ್ಯೆಗೈದ ಬೆನ್ನಲ್ಲೇ ಉತ್ತರ ಸಿರಿಯಾದ ಅಝಾಝ್ ನಗರದಲ್ಲಿ ಬಾಗ್ದಾದಿ ಸಹೋದರಿಯನ್ನು ಸೆರೆ ಹಿಡಿಯಲಾಗಿದೆ ಎಂದು ಹಿರಿಯ ಟರ್ಕಿ ಅಧಿಕಾರಿಗಳು ರಾಯಟರ್ಸ್ಸ್ ಗೆ ತಿಳಿಸಿದ್ದಾರೆ.

Advertisement

ಸಿರಿಯಾದಲ್ಲಿ ಬಾಗ್ದಾದಿ ಸಹೋದರಿ, ಆಕೆಯ ಪತಿ ಹಾಗೂ ಅಳಿಯನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ವರದಿ ವಿವರಿಸಿದೆ. ಅಝಾಝ್ ಸಮೀಪ ನಡೆಸಿದ ದಾಳಿಯ ವೇಳೆ ರಾಶ್ಮೀಯ ಅವಾದ್ (65) ಎಂಬಾಕೆಯನ್ನು ಬಂಧಿಸಿಲಾಗಿದೆ.

ಬಾಗ್ದಾದಿ ಸಹೋದರಿ ರಾಶ್ಮೀಯ ಬಂಧನಕ್ಕೊಳಗಾದ ಸಂದರ್ಭದಲ್ಲಿ ಆಕೆಯ ಜತೆ ಐವರು ಮಕ್ಕಳು ಇದ್ದಿರುವುದಾಗಿ ವರದಿ ತಿಳಿಸಿದೆ. ಐಸಿಸ್ ಆಂತರಿಕ ವಲಯದಲ್ಲಿಯೇ ಬಾಗ್ದಾದಿ ಸಹೋದರಿ ಸಕ್ರಿಯವಾಗಿ ಕಾರ್ಯಾಚರಿಸುತ್ತಿದ್ದ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿರುವುದಾಗಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next