Advertisement

ದಾಳಿಯಲ್ಲಿ ಸತ್ತಿದ್ದು 200 ಉಗ್ರರು

12:30 AM Mar 14, 2019 | |

ವಾಷಿಂಗ್ಟನ್‌: ಪಾಕಿಸ್ಥಾನದ ಬಾಲಕೋಟ್‌ನಲ್ಲಿ ಐಎಎಫ್ ನಡೆಸಿದ ದಾಳಿಯ ಬಗ್ಗೆ ಸಾಕ್ಷ್ಯ ನೀಡಬೇಕು ಎಂದು ಭಾರತದಲ್ಲಿ ಕೂಗು ಕೇಳುತ್ತಿರುವಂತೆಯೇ ಹೊಸ ಬೆಳವಣಿಗೆ ನಡೆದಿದೆ. 

Advertisement

ಐಎಎಫ್ ದಾಳಿಯಲ್ಲಿ ಬಾಲಕೋಟ್‌ನಲ್ಲಿ 200 ಉಗ್ರರು ಹತರಾಗಿದ್ದಾರೆ ಎಂದು ಪಾಕ್‌ನ ಸೇನಾಧಿಕಾರಿ ಹೇಳಿದ್ದಾರೆ ಎಂದು ಅಮೆರಿಕದಲ್ಲಿ ನೆಲೆಸಿರುವ ಪಾಕಿಸ್ಥಾನದ ಗಿಲ್ಬಿಟ್‌ನ ಹೋರಾಟ ಗಾರ  ಸೆಂಜ್‌ ಹಸ್ನನ್‌ ಸೆರಿಂಗ್‌ ಎಂಬುವರು ಟ್ವಿಟರ್‌ನಲ್ಲಿ ಆಡಿಯೋ ಕ್ಲಿಪ್‌ ಅಪ್‌ಲೋಡ್‌ ಮಾಡಿದ್ದಾರೆ. ಅದರಲ್ಲಿ, ಪಾಕಿಸ್ಥಾನ ಸೇನಾಧಿಕಾರಿ ಐಎಎಫ್ ದಾಳಿಯಲ್ಲಿ ಹಿಜ್ಬುಲ್‌ ಮುಜಾಹಿದ್ದೀನ್‌ಗೆ ಸೇರಿದ 200 ಉಗ್ರರು ಮೃತಪಟ್ಟಿದ್ದಾರೆ. ಜೆಹಾದಿಗಳಿಗೆ ಪಾಕಿಸ್ಥಾನ ಸರಕಾರ ವಿಶೇಷ ಸವಲತ್ತುಗಳನ್ನು ನೀಡುತ್ತದೆ ಎಂದಿದ್ದಾರೆ. ಇದಕ್ಕೂ ಮುನ್ನ ಉರ್ದು ಮಾಧ್ಯಮ ವರದಿ ಪ್ರಕಾರ 200 ಉಗ್ರರು ಹತ್ಯೆಗೀಡಾಗಿದ್ದರು. ಅವರಲ್ಲಿ ಹಲವಾರು ಮೃತದೇಹಗಳನ್ನು ಬಾಲಕೋಟ್‌ನಿಂದ ಖೈಬರ್‌ ಪಖು¤ಂಖ್ವಾ ಹಾಗೂ ಪಾಕಿಸ್ಥಾನದ ಕೆಲವು ಬುಡಕಟ್ಟು ಜನರಿರುವ ಪ್ರಾಂತ್ಯಗಳಿಗೆ ಕೊಂಡೊಯ್ಯಲಾಯಿತು ಎಂದು ಹೇಳಿದೆ.

ಯುವಕನ ಹತ್ಯೆ: ಭಾರತೀಯ ಸೇನೆಗೆ ಸೇರಲು ಇಚ್ಛಿಸಿದ್ದ ಶೌಕತ್‌ ಅಹ್ಮದ್‌ ನಾಯಕ್‌ (25) ಎಂಬ ಯುವಕನನ್ನು ಆತನ ಮನೆಯ ಮುಂದೆ ದುಷ್ಕ ರ್ಮಿಗಳು ಗುಂಡಿಕ್ಕಿ ಕೊಂದಿರುವ ಘಟನೆ ಪುಲ್ವಾ ಮಾದಲ್ಲಿ ಬುಧವಾರ ನಡೆದಿದೆ. ಮತ್ತೂಂದೆಡೆ ಪಾಕಿಸ್ಥಾನ ಸೇನೆ ಎಲ್‌ಒಸಿಯಿಂದ ಗುಂಡು ಹಾರಿಸಿ ಕದನ ವಿರಾಮ ಉಲ್ಲಂ ಸಿದೆ. ಹೀಗಾಗಿ,  ಗಡಿ ಭಾಗದಲ್ಲಿನ ವ್ಯಾಪಾರ ನಿಷೇಧಿಸಲಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ. 
 

Advertisement

Udayavani is now on Telegram. Click here to join our channel and stay updated with the latest news.

Next