ಈ ಹಿನ್ನೆಲೆಯಲ್ಲಿ ಆಕೆಯನ್ನು ಕೊಲ್ಲಲು 15 ದಿನಗಳ ಹಿಂದೆ ಯೋಚಿಸಿದ್ದೆ. ಅದಕ್ಕಾಗಿ ಹರಿದ್ವಾರದಿಂದ ಚಾಕು ಖರೀದಿಸಿದ್ದೆ ಎಂದು ಆತ ತನಿಖೆಯ ವೇಳೆ ಹೇಳಿದ್ದಾನೆ. ಈ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Advertisement
ಮಹಡಿ ಮೇಲೆ ಶವ ಪತ್ತೆ! ಹೊಸದಿಲ್ಲಿಯ ಮಂಜು ಕಾ ತಿಲ್ಲಾ ನಗರದಲ್ಲಿ ಅಪಾರ್ಟ್ ಮೆಂಟ್‌ನ ಫ್ಲ್ಯಾಟ್ ಒಂದರ ಮಹಡಿಯಲ್ಲಿ 35 ವರ್ಷದ ಮಹಿಳೆಯೊಬ್ಬರ ಶವ ಮಂಗಳವಾರ ಪತ್ತೆಯಾಗಿದೆ. ಮೃತ ಮಹಿಳೆಯನ್ನ ರಾಣಿ ಎಂದು ಗುರುತಿಸಲಾಗಿದ್ದು, ಆಕೆಯ ಜತೆಗೆ ಫ್ಲ್ಯಾಟ್ ಹಂಚಿಕೊಂಡಿದ್ದ ಸ್ವಪ್ನಾ ಎಂಬಾಕೆಯೇ ಗೆಳತಿಯನ್ನು ಹತ್ಯೆಗೈದಿದ್ದಾಳೆ. ಕುಡಿದ ಮತ್ತಿನಲ್ಲಿ ರಾಣಿಯ ತಂದೆ ಕುರಿತು ಸ್ವಪ್ನಾ ಟೀಕೆ ಮಾಡಿದ್ದಾರೆ. ಈ ವೇಳೆ ಇಬ್ಬರ ನಡುವೆ ಗಲಾಟೆ ಏರ್ಪಟ್ಟಿದ್ದು ಬಳಿಕ ಚಾಕುವಿನಿಂದ ರಾಣಿಯನ್ನು ಇರಿದು ಹತ್ಯೆ ಮಾಡಿದ್ದು, ಆಕೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.