ಅಥಣಿ: ಗಾಳಿಪಟದ ದಾರ ಏಕಾಏಕಿ ದ್ವಿಚಕ್ರ ವಾಹನ ಸವಾರನ ಕುತ್ತಿಗೆಗೆ ಸುತ್ತಿಕೊಂಡು ಅವಾಂತರ ಸೃಷ್ಟಿಸಿದ ಘಟನೆ ಪಟ್ಟಣದಲ್ಲಿ ನಡೆದಿದೆ.
ಸ್ಥಳೀಯ ನಿವಾಸಿ ಬುರಾನ್ ಮುಕ್ಬುಲ್ ಜಮಾದಾರ್ ಎಂಬುವರು ಸಂಕೇಶ್ವರ ವಿಜಯಪುರ ರಸ್ತೆ ಮಾರ್ಗವಾಗಿ ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದರು. ಈ ವೇಳೆ ತಂಗಡಿ ಕಾಂಪ್ಲೆಕ್ಸ್ ಮೇಲೆ ಮಕ್ಕಳು ಗಾಳಿಪಟ ಹಾರಿಸಿ ಆಟವಾಡುತ್ತಿದ್ದರು.
ಆಕಸ್ಮಿಕವಾಗಿ ಗಾಳಿಪಟದ ದಾರ ಬುರಾನ್ ಅವರ ಕೊರಳಿಗೆ ಸುತ್ತಿಕೊಂಡಿದ್ದು, ಬೈಕ್‌ನಿಂದ ನೆರಕ್ಕುರುಳಿದ್ದಾರೆ. ಕುತ್ತಿಗೆ, ಕೈ ಭಾಗಗಳಿಗೆ ಚಿಕ್ಕ ಪುಟ್ಟ ಗಾಯವಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರಾಥಮಿಕ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಘಟನೆ ಸಂಭವಿಸುತ್ತಿದ್ದಂತೆ ಆಟವಾಡುತ್ತಿದ್ದ ಮಕ್ಕಳು ಓಡಿ ಹೋಗಿದ್ದಾರೆ. ಪಟ್ಟಣದಲ್ಲಿ ಗಾಳಿಪಟದ ಹಾವಳಿ ಹೆಚ್ಚಾಗಿದೆ. ಗಾಳಿಪಟ ಹಾರಿಸುವುದರ ಮೇಲೆ ನಿಗಾ ಇಡಬೇಕೆಂದು ಬುರಾನ್ ಅವರು ಪಟ್ಟಣದ ಪೊಲೀಸ್ ಠಾಣೆಗೆ ಭೇಟಿ ನೀಡಿ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ನಾಡ ಹಬ್ಬ ದಸರಾ ಸರಳ ಆಚರಣೆಗೆ ಮಾರ್ಗ ಸೂಚಿ ಪ್ರಕಟ: ಏನಿದೆ ಮಾರ್ಗಸೂಚಿಯಲ್ಲಿ?