Advertisement

ಝೀರೋ ಟ್ರಾಫಿಕ್ ಮೂಲಕ ಧಾರವಾಡದಿಂದ ಬೆಳಗಾವಿಗೆ ಅಂಗಾಗ ರವಾನೆ

12:38 PM Jul 14, 2022 | Team Udayavani |

ಬೆಳಗಾವಿ: ಮೊನ್ನೆಯಷ್ಟೇ ಧಾರವಾಡದಿಂದ ಬಾಲಕಿಯ ಹೃದಯವನ್ನು ಬೆಳಗಾವಿಗೆ‌ ತಂದು‌ ಕಸಿ ಮಾಡಿದ್ದ ವೈದ್ಯರು ಈಗ ಮಹಿಳೆಯ ಕಿಡ್ನಿಯನ್ನು  ಧಾರವಾಡದ ಎಸ್‌ಡಿಎಂ ಆಸ್ಪತ್ರೆಯಿಂದಲೇ ಝೀರೋ ಟ್ರಾಫಿಕ್‌ನಲ್ಲಿ ಗುರುವಾರ ತಂದು ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಯಲ್ಲಿ ಕಸಿ ಮಾಡಲಾಗಿದೆ.

Advertisement

ಧಾರವಾಡ ಕೃಷಿ ವಿಶ್ವವಿದ್ಯಾಲಯ ಎದುರು ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಮಲವ್ವ (48) ಎಂಬ ಮಹಿಳೆಯ ಮೆದುಳು ನಿಷ್ಕ್ರಿಯಗೊಂಡಿತ್ತು.‌ ಕೂಡಲೇ ಆಸ್ಪತ್ರೆಗೆ ದಾಖಲಿಸಿದ ವೈದ್ಯರು ಮಹಿಳೆಯ ಕಿಡ್ನಿಯನ್ನು ಬೆಳಗಾವಿ ಕೆಎಲ್ಇ ಆಸ್ಪತ್ರೆವರೆಗೆ ಝೀರೋ ಟ್ರಾಫಿಲ್‌ನಲ್ಲಿ ತಂದು‌ ಕಸಿ ಮಾಡಿದರು.

ಇದನ್ನೂ ಓದಿ:ಶಿರಾಡಿ ಘಾಟ್ ನಲ್ಲಿ ಮತ್ತೆ ಭೂ‌ಕುಸಿತ: ಘನ ವಾಹನಗಳ ಸಂಚಾರ ಬಂದ್

ಒಂದು ಗಂಟೆಗಳ ಕಾಲ ಅಂಬ್ಯುಲೆನ್ಸ್ ಸಾಗಲು ಪೊಲೀಸರು ಅವಕಾಶ ಮಾಡಿಕೊಟ್ಟರು. ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಝೀರೋ ಟ್ರಾಫಿಕ್ ಮಾಡಲಾಗಿತ್ತು. ಅಲ್ಲಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಈ ವೇಳೆ ಹೆದ್ದಾರಿಯಲ್ಲಿ ಯಾವುದೇ ವಾಹನಗಳು ಓಡಾಡದಂತೆ ಪೊಲೀಸರು ನಿಗಾ ಇಟ್ಟಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next