Advertisement
ವಿದೇಶದಲ್ಲಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿರುವ ನಾಗರಾಜ್ ಕೊರೊನಾ ಸಂದರ್ಭದಲ್ಲಿ ಭಾರತಕ್ಕೆ ವಾಪಸ್ ಆಗಿದ್ದರು. ಕೌಟುಂಬಿಕ ಕಾರಣಕ್ಕಾಗಿ 15 ಲಕ್ಷ ರೂ. ಅನ್ನು ಬ್ಯಾಂಕ್‌ನಲ್ಲಿ ಸಾಲಕ್ಕಾಗಿ ಓಡಾಡುತ್ತಿದ್ದರು. ಈ ವೇಳೆ ಆರೋಪಿ ಉಪೇಂದ್ರನ ಪರಿಚಯವಾಗಿದ್ದು, ಸಾಲ ಕೊಡಿಸುವುದಾಗಿ ಹೇಳಿದ್ದ.
Related Articles
Advertisement
ಕೆಲ ದಿನಗಳ ಬಳಿಕ ಬೆಂಗಳೂರಿಗೆ ವಾಪಸ್ ಬಂದ ನಾಗರಾಜ್, ಸಾಲ ಮಂಜೂರಾತಿಗಾಗಿ ಅರ್ಜಿಗೆ ಸಹಿ ಹಾಕುವಾಗ 1 ಕೋಟಿ ರೂ.ಸಾಲಕ್ಕೆ ಅರ್ಜಿ ಹಾಕಿರುವ ವಿಚಾರ ಗೊತ್ತಾಗಿದ್ದು, ಉಪೇಂದ್ರನನ್ನು ವಿಚಾರಿಸಿದಾಗ ಸಾಲ ಪಡೆಯಲು ಸೂಚಿಸಿದ್ದ. ಅದೇ ವಿಚಾರಕ್ಕಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.
ನಂತರ ತೀರಿಸಿರುವ 5 ಲಕ್ಷ ಜತೆಗೆ ಇನ್ನೂ 2 ಲಕ್ಷ ಕೊಡುವಂತೆ ತಾಕೀತು ಮಾಡಿದ್ದಾನೆ. ಅದಕ್ಕೆ ನಾಗರಾಜ್ ಒಪ್ಪದಿದ್ದಾಗ ಪ್ರಾಣ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ಹೇಳಿದರು. ನಂತರ ನಾಗರಾಜ್‌ನನ್ನು ಅಪಹರಿಸಲು ಸಂಚು ರೂಪಿ ಸಿದ್ದ ಉಪೇಂದ್ರ, ತನ್ನ ಸಹಚರ ಸಮೀರ್ ಸುಪಾರಿ ನೀಡಿದ್ದ.
ಆ.9ರಂದು ಇಂದಿರಾನಗರ ಕೆಎಫ್‌ಸಿ ಸಿಗ್ನಲ್ ಬಳಿ ಸಿಸಿಬಿ ಇನ್ಸ್‌ಪೆಕ್ಟರ್ ಸೋಗಿನಲ್ಲಿ ಸಮೀರ್, ನಾಗರಾಜ್‌ನನ್ನು ಪರಿಚಯಿಸಿಕೊಂಡು ಕಾರು ಹತ್ತಿಸಿಕೊಂಡಿದ್ದಾನೆ. ಮಾರ್ಗ ಮಧ್ಯೆ ಆರೋಪಿ ಉಪೇಂದ್ರ ಹತ್ತಿದಾಗ ವಿಚಾರ ಗೊತ್ತಾಗಿದೆ. ನಂತರ 20 ದಿನಗಳ ಕಾಲ ಬಂಧನದಲ್ಲಿರಿಸಿಕೊಂಡು ನಿರಂತರವಾಗಿ ನಾಗರಾಜ್ ಮೇಲೆ ಹಲ್ಲೆ ಮಾಡಿದ್ದಾರೆ. ಬ್ಯಾಂಕಿನಿಂದ 4.5 ಲಕ್ಷ ರೂ. ಪಡೆದುಕೊಂಡು ಖಾಲಿ ಚೆಕ್ ಹಾಗೂ ಬಾಂಡ್ ಪೇಪರ್‌ಗಳಿಗೆ ಸಹಿ ಹಾಕಿಸಿಕೊಂಡಿದ್ದರು ಎಂದು ನಾಗರಾಜ್ ದೂರು ನೀಡಿದ್ದು ಆರೋಪಿಗಳನ್ನು ಬಂಧಿಸಲಾಗಿದೆ.