Advertisement

Kidnap Drama: ಕಿಡ್ನ್ಯಾಪ್‌ ನಾಟಕವಾಡಿ ವಸೂಲಿಗೆ ಯತ್ನ; ಬಂಧನ

10:35 AM Oct 07, 2023 | Team Udayavani |

ಬೆಂಗಳೂರು: ಫ್ಯಾಕ್ಟರಿ ಮಾಲೀಕನಿಂದ ದುಡ್ಡು ವಸೂಲಿ ಮಾಡಲು ಸ್ನೇಹಿತರ ಜೊತೆ ಸೇರಿ ಅಪಹರಣ ನಾಟಕವಾಡಿದ್ದ ಕಿಂಗ್‌ಪಿನ್‌ ಸೇರಿ ಮೂವರನ್ನು ಆರ್‌.ಟಿ. ನಗರ ಪೊಲೀಸರು ಬಂಧಿಸಿದ್ದಾರೆ.

Advertisement

ಬಿಹಾರ ಮೂಲದ ನೂರುಲ್ಲಾ ಹುಸೇನ್‌, ಅಬೂಬಕರ್‌, ಆಲಿ ರೇಝಾ ಬಂಧಿತರು. ಆರ್‌ಟಿ ನಗರದಲ್ಲಿ ಮೊಹಮ್ಮದ್‌ ಆಸೀಫ್ ಹಬೀಬ್‌ ಎಂಬುವವರು ಫ್ಯಾಕ್ಟರಿ ಹೊಂದಿದ್ದಾರೆ. ಆರೋಪಿ ನೂರುಲ್ಲಾ ಹುಸೇನ್‌ 5 ವರ್ಷಗಳಿಂದ ಇವರ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ. ನೂರುಲ್ಲಾ ಹುಸೇನ್‌ ಮೇಲೆ ಹೆಚ್ಚಿನ ಕಾಳಜಿ ಹೊಂದಿದ್ದ ಮಾಲೀಕ ಆಸೀಫ್, ಆತನಿಗೆ ಖರ್ಚು – ವೆಚ್ಚಗಳಿಗೆ ಕೊರತೆ ಮಾಡುತ್ತಿರಲಿಲ್ಲ. ಆದರೆ, ಆರೋಪಿ ನೂರುಲ್ಲಾ ಹುಸೇನ್‌ಗೆ ಮಾಲೀಕನ ಬಳಿ ಇರುವ ದುಡ್ಡಿನ ಮೇಲೆ ಕಣ್ಣು ಬಿದ್ದಿತ್ತು. ಸ್ನೇಹಿತರಾದ ಅಬೂಬಕರ್‌, ಆಲಿ ರೇಝಾ ಜೊತೆ ಸೇರಿ ತನ್ನನ್ನು ಅಪಹರಿಸುವ ನಾಟಕವಾಡಿ ದುಡ್ಡಿಗಾಗಿ ಬೇಡಿಕೆಯಡಲು ಸಂಚು ರೂಪಿಸಿದ್ದ.

ಸಿಕ್ಕಿ ಬಿದ್ದಿದ್ದು ಹೇಗೆ ?: ಆರೋಪಿಗಳು ಕ್ಯಾಬ್‌ ಮಾಡಿಕೊಂಡು ಮಂಡ್ಯಕ್ಕೆ ಹೋಗಿ ನಂತರ ಮಾಲೀಕ ಮೊಹಮ್ಮದ್‌ ಹಬೀಬ್‌ಗ ಕರೆ ಮಾಡಿದ್ದಾರೆ. ನೂರುಲ್ಲಾ ತಾನು ಅಪಹರಣಕ್ಕೆ ಒಳಗಾಗಿದ್ದು, 2 ಲಕ್ಷ ರೂ. ಕೊಟ್ಟರೆ ಬಿಟ್ಟು ಕಳುಹಿಸುವುದಾಗಿ ಹೇಳಿದ್ದಾರೆ ಎಂದು ನಂಬಿ ಸಿದ್ದ. ಇತ್ತ ಮಾಲೀಕರು ಆತಂಕಕ್ಕೊಳಗಾಗಿ 2 ಲಕ್ಷ ರೂ. ಕೊಡಲು ಮುಂದಾಗಿದ್ದರು. ಆದರೆ, ನೂರುಲ್ಲಾಗೆ ಯಾವುದೇ ಅಪಾಯವಾಗದಿರಲಿ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ನಡುವೆ ನೂರುಲ್ಲಾ ತನ್ನ ಬ್ಯಾಂಕ್‌ ಖಾತೆಗೆ ಆನ್‌ ಲೈನ್‌ ಮೂಲಕ 2 ಲಕ್ಷ ರೂ. ಜಮೆ ಮಾಡಲು ಸೂಚಿಸಿದ್ದ. ಪೊಲೀಸರಿಗೆ ನೂರುಲ್ಲಾ ಮೇಲೆ ಯೇ ಅನುಮಾನ ಬಂದು ದುಡ್ಡು ಜಮೆ ಮಾಡ ದಂತೆ ಹಬೀಬ್‌ಗ ಸೂಚಿಸಿದ್ದರು. ಬಳಿಕ ನೂರು ಲ್ಲಾನ ಮೊಬೈಲ್‌ ನಂಬರ್‌ ಟ್ರ್ಯಾಕ್‌ ಮಾಡಿದಾಗ ಮಂಡ್ಯದಲ್ಲಿರುವುದು ಪತ್ತೆಯಾಗಿತ್ತು. ಕೂಡಲೇ ಮಂಡ್ಯ ಪೊಲೀಸರ ಸಹಾಯದಿಂದ ಆರೋಪಿಗಳನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಿದಾಗ ನಿಜ ಸಂಗತಿ ಬೆಳಕಿಗೆ ಬಂದಿದೆ.

ಇನ್ನು 2 ಲಕ್ಷ ರೂ. ಬ್ಯಾಂಕ್‌ ಖಾತೆಗೆ ಜಮೆಯಾಗುತ್ತಿದ್ದಂತೆ ಬಿಹಾರಕ್ಕೆ ಹೋಗಲು ನೂರುಲ್ಲಾ ಸಿದ್ಧತೆ ನಡೆಸಿದ್ದ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next